• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರ್‌ಗೆ ಉದ್ಯಮಿ ಮಸ್ಕ್ ಎಂಟ್ರಿ ಬಳಿಕ ಡೋನಾಲ್ಡ್ ಟ್ರಂಪ್ ರೀ ಎಂಟ್ರಿ?

|
Google Oneindia Kannada News

ವಾಷಿಂಗ್ಟನ್, ಏ. 26: ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಮಾಡಿದ ಸುದ್ದಿ ಬಂದ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೆಂಡಿಂಗ್‌ಗೆ ಬಂದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಮೇಲೆ ಹಾಕಿದ್ದ ನಿಷೇಧವನ್ನು ಟ್ವಿಟ್ಟರ್ ಹಿಂಪಡೆಯುತ್ತದಾ ಎಂಬ ಪ್ರಶ್ನೆಯನ್ನು ಹಲವು ಮಂದಿ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ ಅನ್ನು ಮುಕ್ತ ವಾಕ್ ಸ್ವಾತಂತ್ರ್ಯದ ವೇದಿಕೆಯಾಗಿ ರೂಪಿಸುತ್ತೇನೆ ಎಂದು ಎಲಾನ್ ಮಸ್ಕ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಟ್ವಿಟ್ಟರ್ ಖಾತೆ ಮರುಸ್ಥಾಪನೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರು ತಮ್ಮ ಸಿಬ್ಬಂದಿವರ್ಗದ ಜೊತೆಗಿನ ಸಂವಾದದಲ್ಲಿ ಮಾತನಾಡುವಾಗ ಇದೇ ಪ್ರಶ್ನೆ ಎದುರಾಗಿದೆ. "ಈ ಪ್ರಶ್ನೆಯನ್ನು ಎಲಾನ್ ಮಸ್ಕ್ ಅವರಿಗೆ ಕೇಳಬೇಕು. ಈ ಮಾರಾಟ ಪ್ರಕ್ರಿಯೆ ಮುಗಿದ ಬಳಿಕ ಈ ಟ್ವಿಟ್ಟರ್ ಯಾವ ದಿಕ್ಕಿಗೆ ಹೋಗುತ್ತದೆ ಎಂಬುದು ಗೊತ್ತಾಗಬಹುದು" ಎಂದು ಸಿಇಒ ಹೇಳಿದ್ದಾರೆಂದು ಸಿಎನ್‌ಎನ್ ವರದಿ ಮಾಡಿದೆ.

ಹಂತಹಂತವಾಗಿ ಮಸ್ಕ್ ವಶಕ್ಕೆ ಟ್ವಿಟ್ಟರ್, ಇದು ಸೋಷಿಯಲ್ ವಾರ್ಹಂತಹಂತವಾಗಿ ಮಸ್ಕ್ ವಶಕ್ಕೆ ಟ್ವಿಟ್ಟರ್, ಇದು ಸೋಷಿಯಲ್ ವಾರ್

ಹಾಗೆಯೇ, ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಟ್ವಿಟ್ಟರ್ ನಿರ್ಧಾರಗಳಿಗೆ ಕಾರಣವಾದ ನೀತಿ, ತತ್ವಗಳೇನು ಎಂಬುದನ್ನು ತಿಳಿಸುತ್ತೇನೆ ಎಂದು ಪರಾಗ್ ಅಗರ್ವಾಲ್ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮೊದಲಾದವರನ್ನು ಟ್ವಿಟ್ಟರ್‌ನಲ್ಲಿ ನಿಷೇಧ ಮಾಡಿದ್ದರ ಬಗ್ಗೆ ಪರಾಗ್ ಅಗರ್ವಾಲ್ ಇಲ್ಲಿ ಪರೋಕ್ಷವಾಗಿ ಉಲ್ಲೇಖ ಮಾಡಿದ್ದಾರೆ.

ಅಚ್ಚರಿ ಹುಟ್ಟಿಸಿದ ಡೊನಾಲ್ಡ್ ಟ್ರಂಪ್:

ಟ್ವಿಟ್ಟರ್ ಅವಕಾಶ ಕೊಟ್ಟರೆ ಡೊನಾಲ್ಡ್ ಟ್ರಂಪ್ ಬರುತ್ತಾರಾ? ಫಾಕ್ಸ್ ನ್ಯೂಸ್ ವರದಿ ಪ್ರಕಾರ ಟ್ರಂಪ್ ಅವರಿಗೆ ಟ್ವಿಟ್ಟರ್‌ಗೆ ಮರಳುವ ಆಸಕ್ತಿ ಇಲ್ಲವಂತೆ. "ನಾನು ಟ್ವಿಟ್ಟರ್‌ಗೆ ಹೋಗುವುದಿಲ್ಲ.." ಎಂದು ಟ್ರಂಪ್ ಹೇಳಿದರೆಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಟ್ರಂಪ್ ಟ್ವಿಟ್ಟರ್‌ಗೆ ಯಾಕೆ ಬರಲ್ಲ?

ಡೊನಾಲ್ಡ್ ಟ್ರಂಪ್ ಅವರನ್ನ ಕಳೆದ ವರ್ಷ ಟ್ವಿಟ್ಟರ್ ನಿಷೇಧಿಸಿತ್ತು. ಆಗ ಟ್ರಂಪ್ ಅವರು ಟ್ವಿಟ್ಟರ್‌ನಲ್ಲಿ ಉತ್ತುಂಗದಲ್ಲಿದ್ದ ಯೂಸರ್ ಆಗಿದ್ದರು. ಅವರಿಗೆ ೮.೯ ಕೋಟಿ ಮಂದಿ ಫಾಲೋಯರ್ಸ್ ಇದ್ದರು. ಟ್ವೀಟ್‌ಗಳ ಮೂಲಕವೇ ಅವರು ಅನೇಕ ಪಾಲಿಸಿ ಡಿಸಿಶನ್ಸ್ ಪ್ರಕಟಿಸುತ್ತಿದ್ದರು. ಒಮ್ಮಿಂದೊಮ್ಮಲೇ ಅವರನ್ನ ಟ್ವಿಟ್ಟರ್ ನಿಷೇಧಿಸಿದಾಗ ಟ್ರಂಪ್ ಅವರಿಗೆ ಒಂದು ಧ್ವನಿಪೆಟ್ಟಿಗೆ ನಿಂತಂತಾಗಿತ್ತು.

Will Donald Trump return to Twitter? Here is what he said

ಇತ್ತೀಚೆಗೆ ಅವರು ಟ್ರೂತ್ ಸೋಷಿಯಲ್ ಎಂಬ ಟ್ವಿಟ್ಟರ್‌ಗೆ ಪರ್ಯಾಯ ತಾಣವನ್ನು ಆರಂಭಿಸಿದ್ದಾರೆ. ಇನ್ನೂ ಆರಂಭಿಕ ಹಂತದಲ್ಲಿರುವ ಮತ್ತು ಗೋಜಲುಗಳಿಂದ ಇನ್ನೂ ಮುಕ್ತವಾಗದ ಟ್ರೂತ್ ಸೋಷಿಯಲ್‌ನಲ್ಲೇ ಉಳಿಯಲು ಟ್ರಂಪ್ ನಿರ್ಧರಿಸಿದ್ದಾರೆ.

ಟ್ವಿಟ್ಟರ್ ಈಗ ಮಸ್ಕ್ ಪಾಲು, ಸಿಇಒ ಪರಾಗ್ ಅಗರವಾಲ್ ಪರಿಪಾಟಲುಟ್ವಿಟ್ಟರ್ ಈಗ ಮಸ್ಕ್ ಪಾಲು, ಸಿಇಒ ಪರಾಗ್ ಅಗರವಾಲ್ ಪರಿಪಾಟಲು

"ಎಲಾನ್ ಮಸ್ಕ್ ನನ್ನ ಸ್ನೇಹಿತನಾದರೂ, ಟ್ವಿಟ್ಟರ್ ನನಗೆ ಮತ್ತೆ ಅವಕಾಶ ಕೊಟ್ಟರೂ ನಾನು ಟ್ವಿಟ್ಟರ್‌ಗೆ ಬರಲಾರೆ. ನಾನು ಟ್ರೂತ್ ಸೋಷಿಯಲ್‌ನಲ್ಲೇ ಉಳಿಯುತ್ತೇನೆ. ಟ್ರೂತ್ ಸೋಷಿಯಲ್ ನನಗೆ ಧ್ವನಿಯಾಗಿರುತ್ತದೆ," ಎಂದು ಟ್ರಂಪ್ ಅವರು ಫಾಕ್ಸ್ ನ್ಯೂಸ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಟ್ರಂಪ್ ನಿಷೇಧವಾಗಿದ್ದು ಯಾಕೆ?
ಅಮೆರಿಕದ ಅಧ್ಯಕ್ಷರಾಗಿದ್ದಾಗಲೂ ಡೊನಾಲ್ಡ್ ಟ್ರಂಪ್ ಬಹಳ ತೀವ್ರತರವೆನಿಸುವ ಹೇಳಿಕೆಗಳನ್ನ ಟ್ವೀಟ್ ಮೂಲಕ ನೀಡುತ್ತಿದ್ದರು. ಟ್ವಿಟ್ಟರ್‌ನ ಕಮ್ಯೂನಿಟಿ ಗೈಡೆನ್ಸ್ ನಿಯಮಾವಳಿಗಳಿಗೆ ಸಂಬದ್ಧವಾಗದ ಉದ್ರೇಕಕಾರಿ ಎನಿಸುವ ಹೇಳಿಕೆಗಳು ಇರುತ್ತಿದ್ದವು. ಕೆಲ ಬಾರಿ ಅವರ ಟ್ವೀಟ್‌ಗಳನ್ನ ಡಿಲೀಟ್ ಮಾಡಿ ಪರೋಕ್ಷವಾಗಿ ಎಚ್ಚರಿಲಾಗಿತ್ತು. ಆದರೂ ಟ್ರಂಪ್ ತಮ್ಮ ದಾರಿಯಲ್ಲೇ ಮುಂದುವರಿದಿದ್ದರು. ಒಮ್ಮೆ ಅವರ ಟ್ವಿಟ್ಟರ್ ಅಕೌಂಟ್ ಅನ್ನ ತಾತ್ಕಾಲಿಕವಾಗಿ ಅಮಾನತನ್ನೂ ಮಾಡಲಾಯಿತು. ಆದರೆ, ಟ್ರಂಪ್ ಉದ್ರೇಕಕಾರಿ ಹೇಳಿಕೆಗಳು ನಿಲ್ಲಲಿಲ್ಲ.

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಸೋಲನುಭವಿಸಿದ ಬಳಿಕ ಅವರ ಬೆಂಬಲಿಗರು ಕ್ಯಾಪಿಟಲ್ ಹೌಸ್‌ಗೆ ಮುತ್ತಿಗೆ ಹಾಕಿದರು. ಅಮೆರಿಕದ ಸಂಸತ್ತಿನ ಮೇಲೆ ದಾಳಿ ಮಾಡಲು ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರಚೋದನೆ ಕೊಡುವಂಥ ಟ್ವೀಟ್‌ಗಳನ್ನ ಮಾಡಿದ್ದರೆಂಬ ಆರೋಪ ಬಂದಿತ್ತು. ಆಗ ಟ್ವಿಟ್ಟರ್ ಖಾಯಂ ಆಗಿ ಟ್ರಂಪ್ ಅವರ ಅಕೌಂಟ್ ಅನ್ನು ತೆಗೆದುಹಾಕಿತು.

(ಒನ್ಇಂಡಿಯಾ ಸುದ್ದಿ)

English summary
Former President Donald Trump said Monday that he has no intention of rejoining Twitter even if his account is reinstated following Elon Musk's agreement to buy the social media giant for roughly $44 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X