ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WHOಗೆ ಮತ್ತೆ ಸೇರ್ಪಡೆಗೊಳ್ಳಲು ಅಮೇರಿಕಾ ಹಾಕಿದೆ ಹೊಸ ಕಂಡೀಷನ್!

|
Google Oneindia Kannada News

ವಾಷಿಂಗ್ಟನ್, ಜೂನ್ 1: ಚೀನಾ ಪರ ಪಕ್ಷಪಾತ ಮತ್ತು ಭ್ರಷ್ಟಾಚಾರ ಕೊನೆಗೊಳಿಸಿದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಮತ್ತೆ ಸೇರ್ಪಡೆಗೊಳ್ಳಲು ಯು.ಎಸ್.ಎ ಪರಿಗಣಿಸಬಹುದು ಎಂದು ಭಾನುವಾರ ವೈಟ್ ಹೌಸ್ ವಕ್ತಾರ ತಿಳಿಸಿದ್ದಾರೆ.

''ವಿಶ್ವದಾದ್ಯಂತ 370,000 ಕ್ಕೂ ಅಧಿಕ ಮಂದಿಯ ಪ್ರಾಣವನ್ನು ನುಂಗಿರುವ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ತಪ್ಪು ಮಾಹಿತಿಯನ್ನು ಜಗತ್ತಿಗೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿದೆ'' ಎಂದು ಆರೋಪಿಸಿ ಕಳೆದ ಶುಕ್ರವಾರವಷ್ಟೇ, WHO ಜೊತೆಗಿನ ಸಂಬಂಧಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡ್ ಬೈ ಹೇಳಿದ್ದರು.

ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್

''WHO ಗೆ ಸುಧಾರಣೆಯ ಅಗತ್ಯವಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಹಾಗೆ, ಚೀನಾ ಮೇಲಿನ ಅವಲಂಬನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೊನೆಗೊಳಿಸಿದರೆ, ನಾವು ಮತ್ತೆ ಸೇರ್ಪಡೆಗೊಳ್ಳಲು ಗಂಭೀರವಾಗಿ ಪರಿಗಣಿಸಬಹುದು'' ಎಂದು ಯು.ಎಸ್ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ರಾಬರ್ಟ್ ಓಬ್ರಿಯೆನ್ ತಿಳಿಸಿದ್ದಾರೆ.

ಫ್ರಂಟ್ ಲೈನ್ ಹೆಲ್ತ್ ಕೇರ್ ವರ್ಕರ್ ಗೆ ನೀಡುತ್ತೇವೆ

ಫ್ರಂಟ್ ಲೈನ್ ಹೆಲ್ತ್ ಕೇರ್ ವರ್ಕರ್ ಗೆ ನೀಡುತ್ತೇವೆ

''ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ 400 ಮಿಲಿಯನ್ ಡಾಲರ್ ಅನ್ನು ನಾವು ಫ್ರಂಟ್ ಲೈನ್ ಹೆಲ್ತ್ ಕೇರ್ ವರ್ಕರ್ ಗಳ ಆರೋಗ್ಯ ರಕ್ಷಣೆಗೆ ನೀಡುತ್ತೇವೆ''

''ಆಫ್ರಿಕಾದಲ್ಲಿ ಏಡ್ಸ್ ಮತ್ತು ಎಚ್.ಐ.ವಿ ಪೀಡಿತರ ಪ್ರಾಣವನ್ನು ವಿಶ್ವ ಆರೋಗ್ಯ ಸಂಸ್ಥೆ ಉಳಿಸುತ್ತಿಲ್ಲ. ಯುಎಸ್ ಮತ್ತು ಉದಾರ ತೆರಿಗೆದಾರರಿಂದ ಆಫ್ರಿಕಾದಲ್ಲಿ ಎಚ್.ಐ.ವಿ ಪೀಡಿತರ ಪ್ರಾಣ ಉಳಿದಿದೆ'' ಎಂದಿದ್ದಾರೆ ರಾಬರ್ಟ್ ಓಬ್ರಿಯೆನ್

ವಿಶ್ವ ಆರೋಗ್ಯ ಸಂಸ್ಥೆಗೆ ಕೊಡುವ ಹಣವನ್ನು ವೈದ್ಯರಿಗೆ ನೀಡಬಹುದು!

ವಿಶ್ವ ಆರೋಗ್ಯ ಸಂಸ್ಥೆಗೆ ಕೊಡುವ ಹಣವನ್ನು ವೈದ್ಯರಿಗೆ ನೀಡಬಹುದು!

''ವಿಶ್ವ ಆರೋಗ್ಯ ಸಂಸ್ಥೆಗೆ ಹಣ ಕೊಡುವ ಬದಲು, ಅದೇ ಹಣವನ್ನು ನಾವು ವೈದ್ಯರಿಗೆ, ರೆಡ್ ಕ್ರಾಸ್ ಸಂಸ್ಥೆಗೆ, ವಿಶ್ವದಾದ್ಯಂತ ಹಲವು ಆಸ್ಪತ್ರೆಗೆ ನೀಡುತ್ತೇವೆ'' ಎಂದು ರಾಬರ್ಟ್ ಓಬ್ರಿಯೆನ್ ಹೇಳಿದ್ದಾರೆ.

WHOಗೆ ಅಮೆರಿಕ ಅನುದಾನ ಕೊಡ್ದಿದ್ರೇನಾಯ್ತು ನಾವು ಕೊಡ್ತೀವಿ ಎಂದ ಚೀನಾWHOಗೆ ಅಮೆರಿಕ ಅನುದಾನ ಕೊಡ್ದಿದ್ರೇನಾಯ್ತು ನಾವು ಕೊಡ್ತೀವಿ ಎಂದ ಚೀನಾ

ಕಿಡಿಕಾರಿದ್ದ ಡೊನಾಲ್ಡ್ ಟ್ರಂಪ್

ಕಿಡಿಕಾರಿದ್ದ ಡೊನಾಲ್ಡ್ ಟ್ರಂಪ್

''ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಗಿಂತ ಹೆಚ್ಚು ಹಣ ಯುಎಸ್ ನಿಂದ ಹೋಗುತ್ತದೆ. ಆದರೂ, ವಿಶ್ವ ಆರೋಗ್ಯ ಸಂಸ್ಥೆಯನ್ನು ಚೀನಾ ನಿಯಂತ್ರಿಸುತ್ತಿದೆ'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು.

ಮೊದಲು ಅನುದಾನ ಸ್ಥಗಿತ ಗೊಳಿಸಿದ್ದ ಅಮೇರಿಕಾ

ಮೊದಲು ಅನುದಾನ ಸ್ಥಗಿತ ಗೊಳಿಸಿದ್ದ ಅಮೇರಿಕಾ

ಕೋವಿಡ್-19 ಬಗ್ಗೆ ಜಾಗತಿಕ ಸಮುದಾಯವನ್ನು ಎಚ್ಚರಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂಬ ಕಾರಣಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೇರಿಕಾದಿಂದ WHOಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದರು. ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಸಂಬಂಧಕ್ಕೆ ಗುಡ್ ಬೈ ಹೇಳಿದ್ದರು.

ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHOಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO

English summary
Will Consider rejoining WHO if it ends Reliance on China says US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X