ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚೀನಾದಲ್ಲಿನ ಮುಸ್ಲಿಮರ ಸ್ಥಿತಿ ಬಗ್ಗೆ ಇಮ್ರಾನ್ ಏಕೆ ತುಟಿ ಬಿಚ್ಚುವುದಿಲ್ಲ?'

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 27: ಮುಸ್ಲಿಮರ ಬಗ್ಗೆ ಪಾಕಿಸ್ತಾನದ ಇಬ್ಬಗೆ ಧೋರಣೆಯನ್ನು ಅಮೆರಿಕ ಪ್ರಶ್ನೆ ಮಾಡಿದೆ. ಚೀನಾದಲ್ಲಿ ಮುಸ್ಲಿಮರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಕಾಶ್ಮೀರದ ಮುಸ್ಲಿಮರ ಬಗ್ಗೆ ತೋರುವಷ್ಟೇ 'ಸಮಾನ ಮಟ್ಟದ' ಪ್ರೀತಿಯನ್ನು ಚೀನಾದಲ್ಲಿನ ಮುಸ್ಲಿಮರಿಗೂ ತೋರಿಸುತ್ತೀರಾ ಎಂದು ಪ್ರಶ್ನಿಸಿದೆ.

Recommended Video

ಮೋದಿ ವಿಮಾನ ಪಾಕಿಸ್ತಾನದ ಮೇಲೆ ಹೋಗುವಂತಿಲ್ಲವಂತೆ | Oneindia Kannada

ದಕ್ಷಿಣ ಹಾಗೂ ಕೇಂದ್ರ ಏಷ್ಯಾದ ಅಮೆರಿಕ ಹಂಗಾಮಿ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಚೀನಾವು ಹತ್ತು ಲಕ್ಷದಷ್ಟು ಉಯಿಘರ್ಸ್ ಹಾಗೂ ಇತರ ತುರ್ಕಿಕ್ ಮಾತನಾಡುವ ಮುಸ್ಲಿಮರನ್ನು ವಶಕ್ಕೆ ಪಡೆದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಚೀನಾವನ್ನು ಏಕೆ ಪ್ರಶ್ನೆ ಮಾಡುವುದಿಲ್ಲ ಎಂದಿದ್ದಾರೆ.

'ಕೈಗೊಂಬೆ' ಇಮ್ರಾನ್ ಖಾನ್ ಗೆ ಪ್ರಧಾನಿ ಹುದ್ದೆ ಬಿಡಲು ಡೆಡ್ ಲೈನ್'ಕೈಗೊಂಬೆ' ಇಮ್ರಾನ್ ಖಾನ್ ಗೆ ಪ್ರಧಾನಿ ಹುದ್ದೆ ಬಿಡಲು ಡೆಡ್ ಲೈನ್

ಪಶ್ಚಿಮ ಚೀನಾದಲ್ಲಿ ಅಕ್ಷರಶಃ ಯಾತನಾ ಶಿಬಿರದಂಥ ಪರಿಸ್ಥಿತಿಯಲ್ಲಿ ಇರುವ ಮುಸ್ಲಿಮರ ಬಗ್ಗೆ ಏಕೆ ಇದೇ ಮಟ್ಟದ ಕಾಳಜಿ ತೋರುವುದಿಲ್ಲ. ಕಾಶ್ಮೀರಕ್ಕಿಂತ ಚೀನಾದಲ್ಲಿ ಆಗುತ್ತಿರುವ ಮಾನವ ಹಕ್ಕು ಉಲ್ಲಂಘನೆ ಮತ್ತೂ ಭಯಾನಕವಾಗಿದೆ. ಇದರಲ್ಲಿ ಸರ್ಕಾರವೇ ಪಾಲ್ಗೊಂಡಿರುವುದನ್ನು ವಿಶ್ವಸಂಸ್ಥೆ ಅಧಿವೇಶನದಲ್ಲಿ ಪ್ರಶ್ನಿಸಿರುವುದನ್ನು ನೋಡಿದ್ದೀರಿ. ಚೀನಾದಾದ್ಯಂತ ಮುಸ್ಲಿಮರು ಅನುಭವಿಸುತ್ತಿರುವ ಯಾತನಾಮಯ ಬದುಕಿನ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ವೆಲ್ಸ್ ಹೇಳಿದ್ದಾರೆ.

Why Pakistan PM Mum On China Muslim Situation?

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಭಾರತದ ತೀರ್ಮಾನದ ವಿರುದ್ಧ ಪಾಕಿಸ್ತಾನ ದೂರಿದೆ. ಜತೆಗೆ ಕಾಶ್ಮೀರ ಮುಸ್ಲಿಮರ ಸ್ಥಿತಿಗತಿ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮನ್ನು ಕಾಶ್ಮೀರಿ ಜನರ ರಾಯಭಾರಿ ಎಂದು ಕರೆದುಕೊಂಡಿದ್ದಾರೆ. ಆ ವೇಳೆ ವೆಲ್ಸ್ ಈ ಪ್ರಶ್ನೆಗಳನ್ನು ಕೇಳಿದರು.

ಚೀನಾವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಪ್ರಶ್ನೆ ಮಾಡಿದರೆ ಪಾಕಿಸ್ತಾನ ಬಾಯಿ ತೆರೆಯುವುದಿಲ್ಲ. ಆ ಬಗ್ಗೆ ಮಾತನಾಡಿ ಅಂದರೆ, ಪಾಕಿಸ್ತಾನದ ಪ್ರಧಾನಮಂತ್ರಿ ತನ್ನದೇ ದೇಶದಲ್ಲಿ ಏನೇನೋ ಆಗುತ್ತಿದೆ ಎಂದು ತಿಪ್ಪೆ ಸಾರಿಸುವುದಕ್ಕೆ ಪ್ರಯತ್ನಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ಚೀನಾ ಡ್ರೋನ್ ಮೂಲಕ ಪಾಕಿಸ್ತಾನದಿಂದ ಪಂಜಾಬಿಗೆ ಬಂದ ಶಸ್ತ್ರಾಸ್ತ್ರಗಳು!ಚೀನಾ ಡ್ರೋನ್ ಮೂಲಕ ಪಾಕಿಸ್ತಾನದಿಂದ ಪಂಜಾಬಿಗೆ ಬಂದ ಶಸ್ತ್ರಾಸ್ತ್ರಗಳು!

ಉಯಿಘರ್ಸ್ ಬಗ್ಗೆ ಈಚೆಗೆ ಇಮ್ರಾನ್ ಖಾನ್ ಅವರನ್ನು ಪ್ರಶ್ನೆ ಮಾಡಿದಾಗ, ಚೀನಾ ಜತೆಗೆ ನಮಗೆ 'ವಿಶೇಷ ಸಂಬಂಧ' ಇದೆ. ಅದನ್ನು ಖಾಸಗಿಯಾಗಿ ಚರ್ಚೆ ನಡೆಸುತ್ತೇವೆ ಎಂದು ಉತ್ತರಿಸಿದ್ದರು. ಉಯಿಘರ್ಸ್ ಜನಾಂಗ ಮತ್ತು ಇತರ ಮುಸ್ಲಿಮರು ಕನಿಷ್ಠ ಹತ್ತು ಲಕ್ಷ ಜನರನ್ನು ಚೀನಾ ವಶಕ್ಕೆ ಪಡೆದಿದ್ದು, ಅವರು ಭಯೋತ್ಪಾದಕರು ಎಂಬ ಠಸ್ಸೆ ಹಾಕಿ, ಕೌಶಲ ಹೆಚ್ಚಿಸಲು ತರಬೇತಿ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತದೆ. ಚೀನಾದ ಬಗ್ಗೆ ವ್ಯಾಪಕ ಅಕ್ರೋಶ ವ್ಯಕ್ತವಾಗುತ್ತಿದೆ.

English summary
US questions Pakistan PM Imran Khan that, why he is not questioning Muslim situation in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X