ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿವಿನ ನೋವು-2: ಅಮೆರಿಕಾದಲ್ಲಿ ಹಣ ಕೊಟ್ಟರೂ ಆಹಾರ ಸಿಗುತ್ತಿಲ್ಲವೇಕೆ?

|
Google Oneindia Kannada News

ವಾಶಿಂಗ್ಟನ್, ಮೇ.14: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಅಮೆರಿಕನ್ನರನ್ನು ಕಾಡುತ್ತಿರುವ ಮತ್ತೊಂದು ಸವಾಲು ಆಹಾರ ಭದ್ರತೆ. ದೇಶದ ಪ್ರಜೆಗಳಿಗೆ ಸಂದಿಗ್ಘ ಪರಿಸ್ಥಿತಿಯಲ್ಲಿ ಆಹಾರ ಪೂರೈಸಬೇಕಿದೆ.

ವಿಶ್ವದಲ್ಲೇ ಸಾಕಷ್ಟು ಕೃಷಿಭೂಮಿಯನ್ನು ಹೊಂದಿರುವ ಅಮೆರಿಕಾದಲ್ಲಿ ಆಹಾರ ಉತ್ಪಾದನೆಗೆ ಕೊಂಚ ಬ್ರೇಕ್ ಬಿದ್ದಿದೆ. ಉತ್ಪಾದನೆಯ ಕೊರತೆ, ಆರ್ಥಿಕ ಹೊಡೆತ ಹಾಗೂ ಕೊರೊನಾ ವೈರಸ್ ಭೀತಿಯು ಜನತೆಯನ್ನು ಹಸಿವಿನಿಂದ ನರಳುವಂತೆ ಮಾಡಿದೆ.

ಹಸಿವಿನ ನೋವು-1: ವಿಶ್ವಕ್ಕೆ ಅನ್ನ ನೀಡಿದ ಅಮೆರಿಕನ್ನರಿಗಿಲ್ಲ ಆಹಾರ!ಹಸಿವಿನ ನೋವು-1: ವಿಶ್ವಕ್ಕೆ ಅನ್ನ ನೀಡಿದ ಅಮೆರಿಕನ್ನರಿಗಿಲ್ಲ ಆಹಾರ!

ಯುಎಸ್ ಡಿಎ ನಡೆಸಿರುವ ಆರ್ಥಿಕ ಸಂಶೋಧನಾ ವರದಿಯ ಪ್ರಕಾರ ಆಹಾರ ಅಭದ್ರತೆ ಸೃಷ್ಟಿಗೆ ಸಾಕಷ್ಟು ಕಾರಣಗಳಿವೆ. ದೇಶದ ಆಹಾರ ಪದ್ಧತಿಯಲ್ಲಿ ಅಭದ್ರತೆ ಗೋಚರಿಸಲು ಹಲವು ಮಾರ್ಗಗಳಿವೆ. ದೇಹ ತೂಕ ಏರಿಕೆ ಭೀತಿಯಲ್ಲಿ ಮಾಡುವ ಉಪವಾಸಕ್ಕೆ ಆಹಾರ ಅಭದ್ರತೆ ಎಂದು ಹೇಳುವುದಕ್ಕೆ ಬರುವುದಿಲ್ಲ. ನಿಜವಾಗಿಯೂ ಆಹಾರ ಅಭದ್ರತೆ ಎಂದನೇನು. ಅಮೆರಿಕಾದಲ್ಲಿನ ಆಹಾರ ಅಭದ್ರತೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ ನೋಡಿ.

ಅಮೆರಿಕಾದಲ್ಲಿ ಆಹಾರ ಅಭದ್ರತೆ ಕಾರಣ?

ಅಮೆರಿಕಾದಲ್ಲಿ ಆಹಾರ ಅಭದ್ರತೆ ಕಾರಣ?

ನೊವೆಲ್ ಕೊರೊನಾ ವೈರಸ್ ಒಂದೇ ಅಮೆರಿಕಾದಲ್ಲಿ ಆಹಾರ ಅಭದ್ರತೆ ಸೃಷ್ಟಿಗೆ ಕಾರಣವಲ್ಲವೇ ಅಲ್ಲ. ಬಹಳ ವರ್ಷಗಳಿಂದಲೂ ಜನರಿಗೆ ಹಸಿವು ನೋವು ಕೊಡುತ್ತಲೇ ಇದೆ. ತುತ್ತು ಅನ್ನಕ್ಕೆ ಪರಿತಪಿಸಲು ಕಾರಣಗಳು ಸಾಕಷ್ಟಿವೆ. ರೈತರು ಬೆಳೆಯುವ ಬೆಳೆ ಹಾನಿಯಿಂದ ಆಹಾರ ಪೂರೈಕೆಯಲ್ಲಿ ಅಭದ್ರತೆ ಸೃಷ್ಟಿಯಾಗುತ್ತದೆ. ಬೇಟೆಯಾಡುವುದಕ್ಕೆ ಯಾವುದೇ ಪ್ರಾಣಿಗಳು ಸಿಗದ ಸಂದರ್ಭದಲ್ಲಿ ಆಹಾರ ಅಭದ್ರತೆ ಜನರಿಗೆ ಕಾಡುತ್ತದೆ. ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಲೂ ಆಹಾರ ಕೊರತೆ ಎದುರಾಗುತ್ತದೆ.

ಆಹಾರ ಅಭದ್ರತೆಯ ಅರ್ಥವೇನು?

ಆಹಾರ ಅಭದ್ರತೆಯ ಅರ್ಥವೇನು?

ಆಹಾರ ಅಭದ್ರತೆ ಎನ್ನುವುದು ಒಂದು ಸರಳ ಪರಿಕಲ್ಪನೆ. ಹಸಿವು ನೀಗಿಸಿಕೊಳ್ಳಲು ಸಾಕಾಗುವಷ್ಟು ಆಹಾರ ಯಾರ ಬಳಿ ಇರುತ್ತದೆಯೋ ಅಂಥವರು ಆಹಾರ ಭದ್ರತೆಯನ್ನು ಹೊಂದಿರುತ್ತಾರೆ. ಅದೇ ರೀತಿಯ ಹಸಿವು ನೀಗಿಸಿಕೊಳ್ಳಲು ಸಾಕಾಗುವಷ್ಟೇ ಆಹಾರ ಇಲ್ಲದೇ ಇರುವವರಿಗೆ ಈ ಆಹಾರ ಅಭದ್ರತೆಯು ಕಾಡುತ್ತದೆ.

ಅಮೆರಿಕಾದ ಕೃಷಿ ಸಮೀಕ್ಷೆ ಏನು ಹೇಳುತ್ತಿದೆ ಗೊತ್ತೆ?

ಅಮೆರಿಕಾದ ಕೃಷಿ ಸಮೀಕ್ಷೆ ಏನು ಹೇಳುತ್ತಿದೆ ಗೊತ್ತೆ?

ಕಳೆದ 1995ರಿಂದ ಇಂದಿನವರೆಗೂ ಅಮೆರಿಕಾದಲ್ಲಿ ಆಹಾರದ ಅಭದ್ರತೆಯ ಪ್ರಮಾಣ ಏರಿಕೆಯಾಗುತ್ತಿದೆ. ಈ ಅವಧಿಯಲ್ಲೇ ಅಮೆರಿಕಾದ ಆರ್ಥಿಕ ಪರಿಸ್ಥಿತಿಯು ಶೇ.60ರಷ್ಟು ಸದೃಢವಾಗಿದ್ದು ಅಚ್ಚರಿ ಮೂಡಿಸುತ್ತದೆ. ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸಿದ ಅಮೆರಿಕಾದಲ್ಲಿ ಆಹಾರ ಭದ್ರತೆ ಮಾತ್ರ ಇಳಿಮುಖವಾಗುತ್ತಲೇ ಸಾಗಿದೆ. ಅಮೆರಿಕಾದಲ್ಲಿನ ಆಹಾರ ಭದ್ರತೆ ಇಳಿಮುಖವಾಗಲು ಅಸಲಿ ಕಾರಣ ಏನು ಎಂಬುದನ್ನು ಸಮೀಕ್ಷಾ ವರದಿ ವರದಿಯಲ್ಲಿ ತಿಳಿಸಲಾಗಿದೆ. ಆಹಾರ ಭದ್ರತೆ, ಕಡಿಮೆ ಆಹಾರ ಭದ್ರತೆ ಹಾಗೂ ಅತಿಕಡಿಮೆ ಆಹಾರ ಭದ್ರತೆ ಎಂಬ ಅಂಶಗಳ ಮೇಲೆ ವರದಿ ಸಿದ್ಧಪಡಿಸಲಾಗಿದೆ.

ಅಮೆರಿಕಾದಲ್ಲಿ ಆಹಾರ ಅಭದ್ರತೆ ಹೇಗಿದೆ:

- ಅಗತ್ಯ ಆಹಾರವನ್ನು ಖರೀದಿಸಲು ಹಣ ಸಂಪಾದಿಸುವ ಹೊತ್ತಿಗೆ ಆಹಾರವೇ ಖಾಲಿಯಾಗುತ್ತದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

- ಖರೀದಿಸಿದ ಆಹಾರವು ಸಾಕಾಗುವುದಿಲ್ಲ, ಇನ್ನು ಹೆಚ್ಚಿನ ಆಹಾರ ಖರೀದಿಸಬೇಕಾದರೆ ಹಣವೇ ಇರುವುದಿಲ್ಲ

- ಅಮೆರಿಕಾದಲ್ಲಿ ಸಮತೋಲನ ರೀತಿಯ ಆಹಾರ ಸೇವನೆ ಸಾಧ್ಯವಾಗುತ್ತಿಲ್ಲ

ದೇಶದಲ್ಲಿ ಬೆಳೆಯುವ ಆಹಾರವಷ್ಟೇ ಸಾಕಾಗುತ್ತಾ ಅಮೆರಿಕನ್ನರಿಗೆ?

ದೇಶದಲ್ಲಿ ಬೆಳೆಯುವ ಆಹಾರವಷ್ಟೇ ಸಾಕಾಗುತ್ತಾ ಅಮೆರಿಕನ್ನರಿಗೆ?

ಅಮೆರಿಕಾದಲ್ಲಿ ರೈತರು ಬೆಳೆಯುತ್ತಿರುವ ಆಹಾರವು ಆ ದೇಶದ ಜನರಿಗೆ ಸಾಕಾಗುವಷ್ಟು ಆಗುತ್ತದೆ. ಉದಾಹರಣೆಗೆ ಪ್ರತಿವರ್ಷ 200 ಪೌಂಡ್ಸ್ ನಷ್ಟು ಗೋಧಿ, ಅಕ್ಕಿ ಹಾಗೂ ಕೆಂಪುಗೋಧಿಯನ್ನು ಬೆಳೆಯಲಾಗುತ್ತದೆ. 250 ಪೌಂಡ್ಸ್ ನಷ್ಟು ಮಾಂಸ ಮತ್ತು ಕೋಳಿ ಮಾರಾಟವಾಗುತ್ತದೆ. ಪ್ರತಿವ್ಯಕ್ತಿಗೆ ದಿನಕ್ಕೆ 2 ಪೌಂಡ್ ನಷ್ಟು ಆಹಾರವಷ್ಟೇ ಬಳಕೆಯಾಗುತ್ತದೆ. ಇನ್ನು, ಮೂರು ಬಗೆಯ ಆಹಾರವನ್ನು ಮಾತ್ರ ಅಮೆರಿಕನ್ನರು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಉಳಿದಂತೆ ಆಹಾರ ಮತ್ತು ತರಕಾರಿಗಳನ್ನೂ ಸಹ ಅಮೆರಿಕಾದಲ್ಲಿ ಬೆಳೆಯಲಾಗುತ್ತದೆ.

English summary
Hunger Pain -2: Why Do The American People Have Enough Money But No Food?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X