ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO

|
Google Oneindia Kannada News

ನ್ಯೂಯಾರ್ಕ್, ಮೇ 5: ಕೊರೊನಾ ವೈರಸ್ ಮಾನವ ನಿರ್ಮಿತ ಇದು ಚೀನಾ ಲ್ಯಾಬ್‌ನಲ್ಲಿಯೇ ಸೃಷ್ಟಿಯಾಗಿದೆ ಎಂದು ಅಮೆರಿಕ ಹೇಳುತ್ತಿದ್ದು, ಆದರೆ ಯಾವುದೇ ಸಾಕ್ಷ್ಯಗಳು ಅವರ ಬಳಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Recommended Video

ಅಮೆರಿಕಾದಲ್ಲಿ ನಾವು ಆತಂಕದಿಂದ ಬದುಕ್ತಿದ್ದೀವಿ, ಭಾರತ ನೋಡಿ ಅಮೆರಿಕಾ ಬುದ್ಧಿ ಕಲಿಯಬೇಕು | California | India

ಕಳೆದ ಎರಡು ತಿಂಗಳುಗಳಿಂದ ಕೊರೊನಾ ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬ ವಾದ ವಿವಾದಗಳು ನಡೆಯುತ್ತಲೇ ಇವೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮೊದಲಿನಿಂದಲೂ ಕೊರೊನಾ ವೈರಸ್ ವುಹಾನ್‌ನಲ್ಲಿ ಲ್ಯಾಬ್‌ನಲ್ಲಿ ಉತ್ಪಾದಿಸಿ ಬಿಡಲಾಗಿದೆ ಇದು ಮಾನವ ನಿರ್ಮಿತ ಎಂದು ಹೇಳುತ್ತಲೇ ಬಂದಿದ್ದಾರೆ.

''ಸಾಕ್ಷಿ ಇದೆ'' ಎಂದ ಟ್ರಂಪ್‌ಗೆ ತಿರುಗೇಟು ನೀಡಿದ ಚೀನಾ''ಸಾಕ್ಷಿ ಇದೆ'' ಎಂದ ಟ್ರಂಪ್‌ಗೆ ತಿರುಗೇಟು ನೀಡಿದ ಚೀನಾ

ಚೀನಾ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕಾದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಡೊನಾಲ್ಡ್‌ ಟ್ರಂಪ್ ಅವರದ್ದು ಕೇವಲ ಊಹೆಯಷ್ಟೇ

ಡೊನಾಲ್ಡ್‌ ಟ್ರಂಪ್ ಅವರದ್ದು ಕೇವಲ ಊಹೆಯಷ್ಟೇ

ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಊಹಾತ್ಮಕ ಆರೋಪಗಳಿಗೆ ಸಮರ್ಪಕವಾದ ಸಾಕ್ಷ್ಯಾಧಾರಗಳಿಲ್ಲ ಎಂದು ಡಬ್ಲ್ಯು ಹೆಚ್ಒ ಹೇಳಿದೆ. ಈ ಮೂಲಕ ಕೊರೋನಾಗೆ ಸಂಬಂಧಿಸಿದಂತೆ ಅಮೆರಿಕ-ವಿಶ್ವಸಂಸ್ಥೆ ನಡುವೆ ನಡೆಯುತ್ತಿದ್ದ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.

ಕೊರೊನಾ ಜನ್ಮ ರಹಸ್ಯವಾಗಿಯೇ ಉಳಿದಿದೆ

ಕೊರೊನಾ ಜನ್ಮ ರಹಸ್ಯವಾಗಿಯೇ ಉಳಿದಿದೆ

ಕೊರೊನಾ ವೈರಸ್ ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಸೃಷ್ಟಿಯಾಗಿದ್ದು ಎಂಬುದಕ್ಕೆ ಅಮೆರಿಕ ಈ ವರೆಗೂ ಸ್ಪಷ್ಟ ದಾಖಲೆಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾ ಹೇಳುತ್ತಿರಿವ ಕೊರೊನಾ ಜನ್ಮ ರಹಸ್ಯ ಈ ವರೆಗೂ ಊಹಾತ್ಮಕವಾಗಿಯೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಅಗತ್ಯತೆಗಳ ವಿಭಾಗದ ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದಾರೆ.

ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್ಅಮೆರಿಕದಲ್ಲಿ ಕೊರೊನಾಗೆ 1 ಲಕ್ಷ ಮಂದಿ ಬಲಿಯಾಗಲಿದ್ದಾರೆ: ಡೊನಾಲ್ಡ್ ಟ್ರಂಪ್

ಟ್ರಂಪ್ ಏನು ಹೇಳಿದ್ದರು?

ಟ್ರಂಪ್ ಏನು ಹೇಳಿದ್ದರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾದ ವೈರಾಣು ಎಂದು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. ಇತ್ತೀಚೆಗೆ ಕೊರೊನಾ ಸೃಷ್ಟಿಯಾಗಿದ್ದು ಹೇಗೆ ಎಂಬ ಬಗ್ಗೆ ಅಮೆರಿಕ ಸರ್ಕಾರ ತನಿಖೆಯನ್ನೂ ಪ್ರಾರಂಭಿಸಿದ್ದಾಗಿ ಅಧ್ಯಕ್ಷರು ಹೇಳಿದ್ದರು.

ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ್ದ ನೆರವು ನಿಲ್ಲಿಸಿದ್ದ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ್ದ ನೆರವು ನಿಲ್ಲಿಸಿದ್ದ ಟ್ರಂಪ್

ಅಮೆರಿಕ, ಪ್ರತಿವರ್ಷ 400ರಿಂದ 500 ದಶಲಕ್ಷ ಡಾಲರ್ ಹಣಕಾಸು ಸಹಾಯವನ್ನು ಡಬ್ಲ್ಯೂಎಚ್‍ಒಗೆ ಒದಗಿಸುತ್ತಿತ್ತು.ಅಮೆರಿಕಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಪಸರಿಸಿದ್ದರೂ ಕೂಡ ಅದರ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ನೇರವಾಗಿಯೇ ತಮ್ಮ ಅಸಮಾಧಾನವನ್ನು ಈ ಹಿಂದೆ ತೋಡಿಕೊಂಡಿದ್ದರು.

ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!

English summary
With the war of words between the United States and China over the accountability regarding the coronavirus disease (COVID-19) pandemic outbreak reaching its zenith, the World Health Organisation (WHO) has now pitched in with its two cents about the US-China feud
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X