ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸ್ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಲಿದೆ ಭಾರತ

|
Google Oneindia Kannada News

ಜಿನೆವಾ, ಸೆಪ್ಟೆಂಬರ್ 08: ಕೋವ್ಯಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಯೋಜನೆಗೆ ಸೇರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ಸಲಹೆಗಾರರೊಬ್ಬರು ತಿಳಿಸಿದ್ದಾರೆ.

Recommended Video

Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

ಕೋವ್ಯಾಕ್ಸ್ ಲಸಿಕೆಯ ಭಾಗವಾಗಲು ಭಾರತವು ಖಂಡಿತವಾಗಿಯೂ ಅರ್ಹವಾಗಿದೆ ಮತ್ತು ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಬ್ರೂಸ್ ಐಲ್ವರ್ಡ್ ಹೇಳಿದ್ದಾರೆ. ನಾವು ಭಾರತೀಯರ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ, ಲಸಿಕೆಗಳ ಕುರಿತು ಭಾರತಕ್ಕೆ ಹೆಚ್ಚಿನ ಅನುಭವವಿದೆ ಎಂದಿದ್ದಾರೆ.

ಕೊರೊನಾ ಲಸಿಕೆ ಅಭಿವೃದ್ಧಿ : WHO ಜೊತೆ ಕೈಜೋಡಿಸಲ್ಲ ಎಂದ ಅಮೆರಿಕಕೊರೊನಾ ಲಸಿಕೆ ಅಭಿವೃದ್ಧಿ : WHO ಜೊತೆ ಕೈಜೋಡಿಸಲ್ಲ ಎಂದ ಅಮೆರಿಕ

ವಿಶ್ವ ಆರೋಗ್ಯ ಸಂಸ್ಥೆ ಹಾಗೂ GAVI ಲಸಿಕೆ ಒಕ್ಕೂಟವು ಕೋವ್ಯಾಕ್ಸ್ ಅಭಿವೃದ್ಧಿಪಡಿಸುತ್ತಿದೆ. ಇದು ವಿಶ್ವದಾದ್ಯಂತ ಇರುವ ಜನರಿಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.

ಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿಕೋವಿಡ್ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು ಯಾವುದು ಎಂದು ವಿವರಿಸಿದ WHO ವಿಜ್ಞಾನಿ

ಕೆಲವು ರಾಷ್ಟ್ರಗಳು ಕೋವ್ಯಾಕ್ಸ್ ಮಾರಾಟದಲ್ಲಿ ಅಥವಾ ಕೊಂಡುಕೊಳ್ಳುವುದರಲ್ಲಿ ತಾವು ಯಾವುದೇ ಸಹಾಯ ಮಾಡುವುದಿಲ್ಲ ಎಂದು ಹೇಳಿವೆ. ಇನ್ನು ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆ ಅಭಿವೃದ್ಧಿಪಡಿಸುವ ಯಾವುದೇ ಲಸಿಕೆಯಲ್ಲಿ ತಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.

170 ದೇಶಗಳು ವಿಶ್ವ ಆರೋಗ್ಯ ಸಂಸ್ಥೆಗೆ ಸಹಕಾರ

170 ದೇಶಗಳು ವಿಶ್ವ ಆರೋಗ್ಯ ಸಂಸ್ಥೆಗೆ ಸಹಕಾರ

ಲಸಿಕೆ ಅಭಿವೃದ್ಧಿ ಮತ್ತು ಎಲ್ಲಾ ದೇಶಗಳಿಗೆ ಕೊರೊನಾ ಲಸಿಕೆ ಹಂಚಿಕೆ ಕುರಿತು 170ಕ್ಕೂ ಹೆಚ್ಚು ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಮಾತುಕತೆ ನಡೆಸುತ್ತಿದೆ. ಆದರೆ ಅಮೆರಿಕ ಮಾತ್ರ ವಿಶ್ವ ಆರೋಗ್ಯ ಸಂಸ್ಥೆ ಜೊತೆ ಸೇರಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿಲ್ಲ.

ಕೊರೊನಾ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು

ಕೊರೊನಾ ಲಸಿಕೆ ಸಿಕ್ಕ ಬಳಿಕ ದೊಡ್ಡ ಸವಾಲು

ಕೊರೊನಾ ವೈರಸ್‌ಗೆ ವಿವಿಧ ದೇಶಗಳಲ್ಲಿನ ಅನೇಕ ಔಷಧ ಸಂಸ್ಥೆಗಳು ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ನಿರತವಾಗಿವೆ. 20ಕ್ಕೂ ಹೆಚ್ಚು ಲಸಿಕೆಗಳನ್ನು ತಯಾರಿಸಿದ್ದು, ಅವುಗಳ ವಿವಿಧ ಹಂತಗಳ ಪ್ರಯೋಗಗಳು ನಡೆಯುತ್ತಿವೆ. ಕೋವಿಡ್‌ಅನ್ನು ಸುಲಭವಾಗಿ ಹಿಮ್ಮೆಟ್ಟಿಸುವ ಲಸಿಕೆ ತಯಾರಿಕೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು ಎಂಬ ಅಭಿಪ್ರಾಯವಿದೆ.

ಭಾರತದಲ್ಲಿ ಉತ್ತಮ ಪ್ರಯತ್ನ

ಭಾರತದಲ್ಲಿ ಉತ್ತಮ ಪ್ರಯತ್ನ

ಲಸಿಕೆ ವಿಚಾರದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಏಕೆಂದರೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಕಂಪೆನಿಗಳು ಸ್ವಂತ ಪ್ರಯತ್ನ ಅಥವಾ ಸಹಯೋಗದೊಂದಿಗೆ ಕೆಲಸ ಮಾಡುತ್ತಿವೆ. ಭಾರತವು ಲಸಿಕೆಗಳ ಉತ್ಪಾದನೆಯ ಹಬ್ ಆಗಿದೆ. ಕೊರೊನಾ ವೈರಸ್ ಬಿಕ್ಕಟ್ಟು ಅಸಮಾನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಕೋವ್ಯಾಕ್ಸ್ ಲಸಿಕೆ ಅಭಿವೃದ್ಧಿಗೆ ತಗುಲುವ ವೆಚ್ಚ

ಕೋವ್ಯಾಕ್ಸ್ ಲಸಿಕೆ ಅಭಿವೃದ್ಧಿಗೆ ತಗುಲುವ ವೆಚ್ಚ

ಲಸಿಕೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆ ವೆಚ್ಚಗಳನ್ನು ಭರಿಸಲು 1.35 ಲಕ್ಷ ಕೋಟಿಯಷ್ಟು ಹಣ ವಚ್ಚವಾಗಲಿದೆ. ಮುಖ್ಯವಾಗಿ ಮಧ್ಯಮ ಆದಾಯದ ದೇಶಗಳಲ್ಲಿ ಮತ್ತು ವಿತರಣೆಗಾಗಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ ಎರಡು ಶತಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ.

100 ಮಿಲಿಯನ್ ಡೋಸ್ ಒಪ್ಪಂದ

100 ಮಿಲಿಯನ್ ಡೋಸ್ ಒಪ್ಪಂದ

ಕೋವ್ಯಾಕ್ಸ್ ಲಸಿಕೆ ಉತ್ಪಾದನೆ ಜೊತೆಗೆ ಕೈಜೋಡಿಸುವುದಾಗಿ ತಿಳಿಸಿದ್ದವು. ಹಾಗೆಯೇ ಅನುದಾನವನ್ನೂ ಕೂಡ ನೀಡುವುದಾಗಿ ಘೋಷಿಸಿದ್ದವು. ಹಾಗೆಯೇ ಕೊರೊನಾ ಲಸಿಕೆಯ ಉತ್ತಮ ಫಲಿತಾಂಶ ಬಂದರೆ ಅವರನ್ನು ಮಾರಾಟ ಮಾಡುವುದಾಗಿಯೂ ಭರವಸೆ ನೀಡಿದ್ದವು. ಕಳೆದ ವಾರ ಬಿಲ್ ಹಾಗೂ ಮೆಲೆಂಡಾ ಗೇಟ್ಸ್ ಫೌಂಡೇಶನ್ ಸೀರಮ್ ಇನ್‌ಸ್ಟಿಟ್ಯೂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, 100 ಮಿಲಿಯನ್ ಅಷ್ಟು ಡೋಸ್‌ಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

English summary
The World Health Organization is in talks with India about joining the "COVAX" global vaccine allocation plan, a senior WHO adviser said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X