• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಸ್ಥಗಿತ, ಇದು ಎಚ್ಚರಿಕೆ ಗಂಟೆ: WHO

|

ವಾಷಿಂಗ್ಟನ್, ಸೆಪ್ಟೆಂಬರ್ 11: ಆಸ್ಟ್ರಾಜೆನೆಕಾ ಕೊವಿಡ್ ಲಸಿಕೆಯ ಪ್ರಯೋಗ ಸ್ಥಗಿತ, ಎಚ್ಚರಿಕೆಯ ಗಂಟೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕ್ಲಿನಿಕಲ್ ಪ್ರಯೋಗದಲ್ಲಿರುವಾಗ ಸ್ವಯಂ ಸೇವಕರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು, ಅದು ಲಸಿಕೆಯ ಅಡ್ಡಪರಿಣಾಮ ಎನ್ನಲಾಗಿತ್ತು. ತಕ್ಷಣವೇ ಲಸಿಕೆಯ ಪ್ರಯೋಗವನ್ನು ತಡೆಹಿಡಿಯಲಾಗಿತ್ತು.

ಪ್ರಯೋಗಗಳಲ್ಲಿ ಏರಿಳಿತಗಳಿವೆ ಅದನ್ನು ಎದುರಿಸಲು ನಾವು ಸಿದ್ಧರಿರಬೇಕು ಇದು ಎಚ್ಚರಿಕೆಯ ಕರೆ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ. ಈರೀತಿಯಾಯಿತು ಎಂದು ಉತ್ಸಾಹ ಕಳೆದುಕೊಳ್ಳುವುದು ಬೇಡ ಈ ರೀತಿಯ ಸಂಗತಿಗಳು ಸಂಭವಿಸುತ್ತಿರುತ್ತವೆ ಎಂದರು.

ಕೊವಿಡ್ 19 ಲಸಿಕೆಗೆ ಹಿನ್ನಡೆ: ಆಸ್ಟ್ರಾಜೆನೆಕಾ ಕ್ಲಿನಿಕಲ್ ಟ್ರಯಲ್ ಸ್ಥಗಿತ

ಕೊರೊನಾದಿಂದ 9 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಮಂದಿಯ ಸಾವಿಗೆ ಕಾರಣವಾಗಿರುವ ರೋಗವನ್ನು ನಿರ್ಮೂಲನೆ ಮಾಡುವ ಲಸಿಕೆಗಾಗಿ ಸರ್ಕಾರಗಳು ಕಾಯುತ್ತಿವೆ. ಅಸ್ಟ್ರಾಜೆನೆಕಾವನ್ನು ಭರವಸೆಯ ಲಸಿಕೆ ಎಂದೇ ಹೇಳಲಾಗಿತ್ತು. ಇದು ವೈರಸ್ ವಿರುದ್ಧದ ಓಟ ಮತ್ತು ಜೀವಗಳನ್ನು ಉಳಿಸುವ ಹೋರಾಟವಾಗಿದೆ. ಇದು ಕಂಪನಿ ಕಂಪನಿ ನಡುವಿನ ಓಟವಲ್ಲ ಹಾಗೆಯೇ ದೇಶಗಳ ನಡುವಿನ ಓಟವೂ ಕೂಡ ಅಲ್ಲ ಎಂದು ಮೈಕ್ ರಯಾನ್ ಹೇಳಿದ್ದಾರೆ.

ಬೆನ್ನುಹುರಿ ತೊಂದರೆ ಬಗ್ಗೆ ಪರೀಕ್ಷೆ ನಡೆಯಬೇಕು

ಬೆನ್ನುಹುರಿ ತೊಂದರೆ ಬಗ್ಗೆ ಪರೀಕ್ಷೆ ನಡೆಯಬೇಕು

ಪಾಸ್ಕಲ್ ಸಾರಿಯೊಟ್ ಮಾತನಾಡಿ, ಬೆನ್ನುಹುರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ. ಹಲವು ಪರೀಕ್ಷೆಗಳ ಬಳಿಕ ಅದು ಸ್ಪಷ್ಟವಾಗಲಿದ್ದು, ಪರೀಕ್ಷಾ ವರದಿಯನ್ನು ಸುರಕ್ಷತಾ ವಿಚಾರಗಳನ್ನು ಗಮನಿಸುವ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಬಳಿಕವಷ್ಟೇ ಕಂಪನಿ ಮತ್ತು ಲಸಿಕೆಯ ಪ್ರಯೋಗ ಪುನರಾರಂಭಿಸುವ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇಡೀ ಜಗತ್ತು ಆಸ್ಟ್ರಾಜೆನೆಕಾವನ್ನು ಗಮನಿಸುತ್ತಿದೆ

ಇಡೀ ಜಗತ್ತು ಆಸ್ಟ್ರಾಜೆನೆಕಾವನ್ನು ಗಮನಿಸುತ್ತಿದೆ

ಇತರೆ ಲಸಿಕೆಗಳ ಪ್ರಯೋಗಗಳಿಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ , ಇಡೀ ಜಗತ್ತು ಅವುಗಳೆಲ್ಲ ಗಮನಿಸುತ್ತಿಲ್ಲ. ಅವರು ಪ್ರಯೋಗ ನಿಲ್ಲಿಸುತ್ತಾರೆ, ಅಧ್ಯಯನ ನಡೆಸುತ್ತಾರೆ ಹಾಗೂ ಮತ್ತೆ ಆರಂಭಿಸುತ್ತಾರೆ ಎಂದು ಹೇಳಿದ್ದಾರೆ.

ಆಸ್ಟ್ರಾಜೆನೆಕಾ ಎಲ್ಲಾ ರಾಷ್ಟ್ರಗಳಿಗೂ ಒಂದೇ ಸಮಯದಲ್ಲಿ ಲಸಿಕೆ ಪೂರೈಕೆ ಮಾಡುವ ಮೂಲಕ ಸಮಾನ ವಿತರಣೆಯ ಬಗ್ಗೆ ಗಮನ ನೀಡಲಿದೆ. ಕಂಪನಿ ಜಗತ್ತಿನಾದ್ಯಂತ ಸ್ಥಾಪಿಸಿರುವ ಕೇಂದ್ರಗಳ ಮೂಲಕ ಒಟ್ಟು 300 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸಿರುವ ಸಾಮರ್ಥ್ಯ ಹೊಂದಿದೆ ಎಂದು ಪಾಸ್ಕಲ್ ವಿವರಿಸಿದ್ದಾರೆ.

ದೃಢತೆ ಕಾಪಾಡಲು ಪ್ರಯೋಗ ನಿಲ್ಲಿಸಲಾಗಿದೆ

ದೃಢತೆ ಕಾಪಾಡಲು ಪ್ರಯೋಗ ನಿಲ್ಲಿಸಲಾಗಿದೆ

ಕೊರೊನಾವೈರಸ್‌ನಿಂದ ಪಾರಾಗಲು ಯಾವಾಗ ಮಾರುಕಟ್ಟೆಗೆ ಲಸಿಕೆ ಬರುತ್ತದೆ ಎಂದು ಜನರು ತುದಿಗಾಲಿನಲ್ಲಿ ಕಾಯುತ್ತಿರುವಾಗಲೇ ಈ ಸುದ್ದಿಯು ವಿಶ್ವಮಟ್ಟದಲ್ಲಿ ಲಸಿಕೆ ತಯಾರಿಕೆಗೆ ಭಾರಿ ಹಿನ್ನಡೆಯಾಗಿದೆ.

ಕೊವಿಡ್ 19 ರೋಗವನ್ನು ತಡೆಯಲು ತಯಾರಾಗುತ್ತಿದ್ದ ಲಸಿಕೆಯು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ತಯಾರಿಸಲು ಈಗ ಹಿನ್ನಡೆಯಾಗಿದೆ. ಆಗಿರುವಂತಹ ಅನಾರೋಗ್ಯದ ಬಗ್ಗೆ ಭದ್ರತೆ ದೃಷ್ಟಿಯಿಂದ ಹೇಳಲಾಗುತ್ತಿಲ್ಲ ಎಂದು ಕಂಪನಿ ತಿಳಿಸಿದೆ.

  ಮೀಟಿಂಗ್ ನಲ್ಲಿ Chinaಗೆ ಸರಿಯಾದ ಉತ್ತರ ಕೊಟ್ಟ ಭಾರತ | Oneindia Kannada
  ಕೊವಿಡ್ ಲಸಿಕೆ ಅಡ್ಡ ಪರಿಣಾಮ ತೀವ್ರ ಸ್ವರೂಪದ್ದಾಗಿದೆ

  ಕೊವಿಡ್ ಲಸಿಕೆ ಅಡ್ಡ ಪರಿಣಾಮ ತೀವ್ರ ಸ್ವರೂಪದ್ದಾಗಿದೆ

  ಆಕ್ಸ್‌ಫರ್ಡ್ ಯೂನಿವರ್ಸಿಟಿಯು ಜೆನ್ನೆರ್ ಸಂಸ್ಥೆಯು ಎಝಡ್ ಡಿ 1222 ಪ್ರಯೋಗವನ್ನು ಆರಂಭಿಸಿದೆ. ಸಾರ್ಸ್ ಕೊವಿಡ್ 2 ಸ್ಪೈಕ್ ಪ್ರೊಟಿನ್ ಹಾಗೂ ಸಾಮಾನ್ಯ ಶೀತ ಉಂಟು ಮಾಡುವಂತಹ ಅಡೆನೊವೈರಸ್ ಸೇರಿಸಿಕೊಂಡು ಇದನ್ನು ತಯಾರಿಸಲಾಗಿದೆ.

  English summary
  AstraZeneca's pause of an experimental vaccine for the coronavirus after the illness of a participant is a "wake-up call" but should not discourage researchers, the World Health Organization's (WHO) chief scientist said on Thursday.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X