ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೆ ಕೈಜೋಡಿಸಿ: ವಿವಿಧ ದೇಶಗಳಿಗೆ WHO ಆಹ್ವಾನ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 10: ಕೊರೊನಾ ಲಸಿಕೆ ತಯಾರಿಕೆ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ದೇಶಗಳಿಗೆ ಕೈ ಜೋಡಿಸುವಂತೆ ಆಹ್ವಾನ ನೀಡಿದೆ.

ನಾವೆಲ್ ಕೊರೊನಾ ವೈರಸ್ ಲಸಿಕೆ ಕೋವ್ಯಾಕ್ಸ್ ಅಭಿವೃದ್ಧಿಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದೆ.

ಮಾಡೆರ್ನಾ ಕೊರೊನಾ ಲಸಿಕೆಗೆ ದರ ನಿಗದಿ, ಆದ್ರೆ ಸಾಮಾನ್ಯ ಜನ ಕೊಳ್ಳೋಕಾಗುತ್ತಾ?ಮಾಡೆರ್ನಾ ಕೊರೊನಾ ಲಸಿಕೆಗೆ ದರ ನಿಗದಿ, ಆದ್ರೆ ಸಾಮಾನ್ಯ ಜನ ಕೊಳ್ಳೋಕಾಗುತ್ತಾ?

ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಲು ಹಣವನ್ನು ಸಂಗ್ರಹಿಸಲಾಗುತ್ತಿದೆ. ಏಪ್ರಿಲ್‌ನಲ್ಲಿ ಲಸಿಕೆಗೆ ತಯಾರಿಕೆಗೆ ಅನುಮತಿ ದೊರೆತಿತ್ತು. ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವ ಅಗತ್ಯವಿರುವ ಕಾರಣ ಎಲ್ಲಾ ದೇಶಗಳ ಬೆಂಬಲವನ್ನು ಕೋರಿದೆ.

WHO Renews Call For Countries To Join Its COVAX Platform

ಲಸಿಕೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆ ವೆಚ್ಚಗಳನ್ನು ಭರಿಸಲು 1.35 ಲಕ್ಷ ಕೋಟಿಯಷ್ಟು ಹಣ ವಚ್ಚವಾಗಲಿದೆ. ಮುಖ್ಯವಾಗಿ ಮಧ್ಯಮ ಆದಾಯದ ದೇಶಗಳಲ್ಲಿ ಮತ್ತು ವಿತರಣೆಗಾಗಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ ಎರಡು ಶತಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ.

ಈಗ ಎಷ್ಟು ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಕೈಜೋಡಿಸಿದೆ ಎಂದು ತಿಳಿದಿಲ್ಲ, ಆದರೆ ಜುಲೈ 15 ರಂದು ನೀಡಿದ್ದ ಮಾಹಿತಿ ಪ್ರಕಾರ 75 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಕೈಜೋಡಿಸಿದ್ದವು.

ಕೋವ್ಯಾಕ್ಸ್ ಲಸಿಕೆ ಉತ್ಪಾದನೆ ಜೊತೆಗೆ ಕೈಜೋಡಿಸುವುದಾಗಿ ತಿಳಿಸಿದ್ದವು. ಹಾಗೆಯೇ ಅನುದಾನವನ್ನೂ ಕೂಡ ನೀಡುವುದಾಗಿ ಘೋಷಿಸಿದ್ದವು. ಹಾಗೆಯೇ ಕೊರೊನಾ ಲಸಿಕೆಯ ಉತ್ತಮ ಫಲಿತಾಂಶ ಬಂದರೆ ಅವರನ್ನು ಮಾರಾಟ ಮಾಡುವುದಾಗಿಯೂ ಭರವಸೆ ನೀಡಿದ್ದವು.

ಕಳೆದ ವಾರ ಬಿಲ್ ಹಾಗೂ ಮೆಲೆಂಡಾ ಗೇಟ್ಸ್ ಫೌಂಡೇಶನ್ ಸೀರಮ್ ಇನ್‌ಸ್ಟಿಟ್ಯೂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, 100 ಮಿಲಿಯನ್ ಅಷ್ಟು ಡೋಸ್‌ಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

English summary
The World Health Organisation has renewed its invite to countries to join its COVAX facility, an international alliance aimed at accelerating the development and manufacture of novel Coronavirus vaccines, and ensuring equitable access to all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X