ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19 ಉಗಮ ಮೂಲದ ಮಧ್ಯಂತರ ವರದಿ ತೆಗೆದು ಹಾಕಲು ಮುಂದಾದ ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 05: ಕೊರೊನಾವೈರಸ್ ಉಗಮ ಮೂಲದ ಕುರಿತಾದ ತನಿಖೆಯ ಮಧ್ಯಂತರ ವರದಿಯನ್ನು ತೆಗೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ.

ಚೀನಾದ ವುಹಾನ್‌ನಲ್ಲಿ ಕೊರೊನಾವೈರಸ್ ಉಗಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡವು ಬೀಜಿಂಗ್ ಹಾಗೂ ವಾಷಿಂಗ್ಟನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ವಿಜ್ಞಾನಿಗಳ ಮನವಿ ಮಧ್ಯೆಯೇ ಅದರ ಸಂಶೋಧನೆಯ ಮಧ್ಯಂತರ ವರದಿಯನ್ನು ರದ್ದುಗೊಳಿಸಲು ಆಲೋಚಿಸಿದೆ.

7 ವಾರಗಳಲ್ಲಿ ಜಾಗತಿಕವಾಗಿ ಕೊರೊನಾ ಸೋಂಕು ಹೆಚ್ಚಳ,WHO ಆತಂಕ7 ವಾರಗಳಲ್ಲಿ ಜಾಗತಿಕವಾಗಿ ಕೊರೊನಾ ಸೋಂಕು ಹೆಚ್ಚಳ,WHO ಆತಂಕ

ಸುಮಾರು 24 ವಿಜ್ಞಾನಿಗಳ ತಂಡ ಕೊರೊನಾವೈರಸ್ ಉಗಮದ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದೆ. ಹಾಗೆಯೇ ತನಿಖಾ ತಂಡವು ಕೊರೊನಾವೈರಸ್ ಪ್ರಯೋಗಾಲಯಗಳಲ್ಲಿ ಸೃಷ್ಟಿಯಾಗಿದೆಯೇ ಎಂಬುದನ್ನು ತನಿಖೆ ಮಾಡಲು ಸಮರ್ಪಕ ಮೂಲಗಳಿಲ್ಲ ಎಂದು ಹೇಳಿವೆ.

ವೈರಸ್ ಪ್ರಾಣಿಗಳಿಂದ ಹರಡಿದೆ ಎನ್ನಲು ಪುರಾವೆಗಳಿಲ್ಲ

ವೈರಸ್ ಪ್ರಾಣಿಗಳಿಂದ ಹರಡಿದೆ ಎನ್ನಲು ಪುರಾವೆಗಳಿಲ್ಲ

ಚೀನಾದಲ್ಲಿ ಕೊರೊನಾವೈರಸ್ ಯಾವುದೇ ಪ್ರಾಣಿಗಳಿಂದ ಹರಡಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

WHO ತನಿಖೆಯಲ್ಲಿ ಚೀನಾ ಸರ್ಕಾರ ಪಾತ್ರ

WHO ತನಿಖೆಯಲ್ಲಿ ಚೀನಾ ಸರ್ಕಾರ ಪಾತ್ರ

ಕೊರೊನಾವೈರಸ್ ಉಗಮದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತಂಡವು ನಡೆಸುತ್ತಿರುವ ತನಿಖೆಯಲ್ಲಿ ಚೀನಾ ಸರ್ಕಾರದ ಪಾತ್ರವೂ ಇರಬಹುದು ಎಂದು ಅಮೆರಿಕ ಅನುಮಾನ ವ್ಯಕ್ತಪಡಿಸಿದೆ. ಒಂದೊಮ್ಮೆ ಸರ್ಕಾರದ ಪಾತ್ರವಿರದಿದ್ದರೆ ಮಧ್ಯಂತರ ವರದಿಯನ್ನು ಹಿಂಪಡೆಯುತ್ತಿರಲಿಲ್ಲ ಎಂದು ಹೇಳಲಾಗಿದೆ.

ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHOಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHO

ಅಮೆರಿಕದಲ್ಲೂ ಅಧ್ಯಯನ ನಡೆಯಲಿ

ಅಮೆರಿಕದಲ್ಲೂ ಅಧ್ಯಯನ ನಡೆಯಲಿ

ಅಮೆರಿಕವು ಚೀನಾದಲ್ಲಿ ಕೊರೊನಾವೈರಸ್ ಉದ್ಭವವಾಗಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತಯಾರಿಸಿದ್ದ ವರದಿಯನ್ನು ಕೈಬಿಡುವಂತೆ ಚೀನಾ ಸರ್ಕಾರ ಒತ್ತಡ ಹೇರಿರಬಹುದು ಎಂದು ಹೇಳಿದ್ದ ಕಾರಣ, ಇದೀಗ ಚೀನಾವು ಕೂಡ ಅಮೆರಿಕದಲ್ಲಿ ಕೊರೊನಾವೈರಸ್ ಅಧ್ಯಯನ ಮಾಡಿ ಎಂದು ಒತ್ತಾಯಿಸಿದೆ.

ಚೀನಾದ ಲ್ಯಾಬ್‌ನಿಂದ ಹುಟ್ಟಿಲ್ಲ ಕೊರೊನಾವೈರಸ್

ಚೀನಾದ ಲ್ಯಾಬ್‌ನಿಂದ ಹುಟ್ಟಿಲ್ಲ ಕೊರೊನಾವೈರಸ್

ತಂಡದ ಮುಖ್ಯಸ್ಥ ಪೀಟರ್ ಬೆನ್ ಎಂಬರೆಕ್ ಮಾತನಾಡಿ, ನಾವು ವುಹಾನ್‌ನಲ್ಲಿ ವೈರಾಲಜಿ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದ್ದೆವು. ಪ್ರಯೋಗಾಲಯವನ್ನು ಗಮನಿಸಿದಾಗ ಲ್ಯಾಬ್‌ನಿಂದ ಸೋಂಕಿನ ಹುಟ್ಟಾಗುತ್ತದೆ, ಅಲ್ಲಿಂದ ಇಡೀ ವಿಶ್ವಕ್ಕೆ ಸೋಂಕು ಹರಡಿದೆ ಎನ್ನುವ ಕುರಿತು ಯಾವುದೇ ಪುರಾವೆಗಳು ನಮಗೆ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
A World Health Organisation (WHO) team investigating the origins of coronavirus in China's Wuhan is planning to scrap an interim report on its finding amid rising tensions between Beijing and Washington, and appeals by international scientists, the Wall Street Journal reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X