ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪದ್ಭರಿತ ದೇಶಗಳು ಕೊವ್ಯಾಕ್ಸ್ ಜೊತೆ ಕೈಜೋಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮನವಿ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 15: ಸಂಪದ್ಭರಿತ ದೇಶಗಳು ಕೋವ್ಯಾಕ್ಸ್ ಕೊರೊನಾ ಲಸಿಕೆ ಉತ್ಪಾದನೆಗೆ ಕೈಜೋಡಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. ಶುಕ್ರವಾರ ಡೆಡ್‌ಲೈನ್ ನೀಡಲಾಗಿದ್ದು, ಅಷ್ಟರೊಳಗೆ ವಿವಿಧ ದೇಶಗಳು ಸಹಕಾರ ನೀಡಿ ಎಂದು ಕೇಳಿದೆ.

ಕೋವ್ಯಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಯೋಜನೆಗೆ ಸೇರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ಸಲಹೆಗಾರರೊಬ್ಬರು ತಿಳಿಸಿದ್ದಾರೆ.

ಕೋವ್ಯಾಕ್ಸ್ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಲಿದೆ ಭಾರತಕೋವ್ಯಾಕ್ಸ್ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೈಜೋಡಿಸಲಿದೆ ಭಾರತ

ಕೋವ್ಯಾಕ್ಸ್ ಲಸಿಕೆಯ ಭಾಗವಾಗಲು ಭಾರತವು ಖಂಡಿತವಾಗಿಯೂ ಅರ್ಹವಾಗಿದೆ ಮತ್ತು ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಬ್ರೂಸ್ ಐಲ್ವರ್ಡ್ ಹೇಳಿದ್ದಾರೆ. ನಾವು ಭಾರತೀಯರ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ, ಲಸಿಕೆಗಳ ಕುರಿತು ಭಾರತಕ್ಕೆ ಹೆಚ್ಚಿನ ಅನುಭವವಿದೆ ಎಂದಿದ್ದಾರೆ.

WHO Head Urges Rich Nations To Join Vaccine Scheme

ವಿಶ್ವ ಆರೋಗ್ಯ ಸಂಸ್ಥೆ ಹಾಗೂ GAVI ಲಸಿಕೆ ಒಕ್ಕೂಟವು ಕೋವ್ಯಾಕ್ಸ್ ಅಭಿವೃದ್ಧಿಪಡಿಸುತ್ತಿದೆ. ಇದು ವಿಶ್ವದಾದ್ಯಂತ ಇರುವ ಜನರಿಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ.

ಕಡಿಮೆ ಆದಾಯವಿರುವ ದೇಶಗಳು ಈ ಲಸಿಕೆಯಿಂದ ದೂರ ಉಳಿಯುವುದು ಬೇಡ, ಹಾಗೆಯೇ ಲಸಿಕೆ ತಡವಾದಷ್ಟು ಇನ್ನಷ್ಟು ಮಂದಿಯ ಜೀವ ಹೋಗುತ್ತದೆ ಎಂದು ಹೇಳಿದ್ದಾರೆ.

Recommended Video

India-China ಸಂಘರ್ಷದ ಬಗ್ಗೆ ಮಾತನಾಡಲಿದ್ದಾರೆ Rajnath Singh | Oneindia Kannada

ಲಸಿಕೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆ ವೆಚ್ಚಗಳನ್ನು ಭರಿಸಲು 1.35 ಲಕ್ಷ ಕೋಟಿಯಷ್ಟು ಹಣ ವಚ್ಚವಾಗಲಿದೆ. ಮುಖ್ಯವಾಗಿ ಮಧ್ಯಮ ಆದಾಯದ ದೇಶಗಳಲ್ಲಿ ಮತ್ತು ವಿತರಣೆಗಾಗಿ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ ಎರಡು ಶತಕೋಟಿ ಡೋಸ್ ಕೊರೊನಾವೈರಸ್ ಲಸಿಕೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ.

English summary
Countries should join the World Health Organization's (WHO) COVAX vaccine facility by a Friday deadline to help ensure that immunizations are fairly and efficiently distributed, WHO Director General Tedros Adhanom Ghebreyesus said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X