ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೊರೊನಾ ವೈರಸ್‌ ಮೇಲೆ ಲಸಿಕೆ ಪರಿಣಾಮದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಆತಂಕ

|
Google Oneindia Kannada News

ಹೊಸ ಮಾದರಿಯ ಕೊರೊನಾ ಸೋಂಕಿನ ವಿರುದ್ಧ ಕೊರೊನಾ ಲಸಿಕೆ ಹೋರಾಡುವುದೋ ಇಲ್ಲವೋ ಎಂಬ ಆತಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಹೊಸ ಕೊರೋನಾ ವೈರಾಣುವಿಗೆ ಈಗಾಗಲೇ ಅಭಿವೃದ್ಧಿಯಾಗಿರುವ ಲಸಿಕೆಗಳು ಕಡಿಮೆ ಪರಿಣಾಮ ಹೊಂದಿದೆ, ಇದು ಆತಂಕಕಾರಿ ಸುದ್ದಿ ಎಂದು ಹೇಳಿದ್ದಾರೆ.

ಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರುಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರು

ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದುಕೊಂಡಿದ್ದು, ದೈನಂದಿನ ಕೊರೋನಾ ಪ್ರಕರಣಗಳೂ ಇಳಿಮುಖವಾಗುತ್ತಿವೆ. ಈ ಹಂತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೊಸ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕೆ ಈಗಾಗಲೇ ಬಂದಿರುವ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸಿದೆ.

WHO Head Raises Questions About COVID-19 Vaccines

ಅಧ್ಯಯನದಲ್ಲಿ ಕೆಲವು ಮಹತ್ವಪೂರ್ಣ ಸಂಗತಿಗಳು ಬಹಿರಂಗವಾಗಿದ್ದು ಎಚ್ಚರಿಕೆ ಗಂಟೆಯಾಗಿದೆ ಎಂದು ಟೆಡ್ರೋಸ್ ಅಧನೋಮ್ ಗೇಬ್ರಿಯಾಸಿಸ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಾಣು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಆಸ್ಟ್ರಾಜೆನಿಕಾ ಲಸಿಕೆನ್ನು ನೀಡುವ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇದು ಅತ್ಯಂತ ಆತಂಕಕಾರಿ ಸುದ್ದಿಯಾಗಿದ್ದು, ಸಾಬೀತಾದ ಸಾರ್ವಜನಿಕ ಆರೋಗ್ಯ ಕ್ರಮಗಳ ಮೂಲಕವಷ್ಟೇ ವೈರಸ್ ಹರಡುವಿಕೆಯನ್ನು ಕಡಿಮೆಗೊಳಿಸುವುದಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

English summary
The head of the World Health Organization said the emergence of new COVID-19 variants has raised questions about whether or not existing vaccines will work, calling it "concerning news" that the vaccines developed so far may be less effective against the variant first detected in South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X