ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್, ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ WHO ಅನುಮತಿ

|
Google Oneindia Kannada News

ಜಿನೇವಾ, ಜನವರಿ 01: ಫೈಜರ್ ಹಾಗೂ ಬಯೋಎನ್‌ಟೆಕ್ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ.

ಚೀನಾದಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ಪಡೆದುಕೊಂಡ ಮೊದಲ ಲಸಿಕೆ ಇದಾಗಿದೆ.

ಜ. 2ರಿಂದ ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಲಸಿಕೆ ಪೂರ್ವಾಭ್ಯಾಸಜ. 2ರಿಂದ ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಲಸಿಕೆ ಪೂರ್ವಾಭ್ಯಾಸ

ತನ್ನ ತುರ್ತು ಬಳಕೆಯ ಪಟ್ಟಿಯಲ್ಲಿ ವಿವಿಧ ದೇಶಗಳಲ್ಲಿನ ಔಷಧ ನಿಯಂತ್ರಕರಿಗೆ ಲಸಿಕೆ ಆಮದು ಮತ್ತು ವಿತರಣೆಗೆ ಅನುಮೋದನೆ ನೀಡಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ.

WHO Grants Emergency Validation To Pfizer-BioNTech Vaccine

ಕೊರೊನಾ ಲಸಿಕೆಗಳಿಗೆ ಜಾಗತಿಕ ಬಳಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಇದು ಅತ್ಯಂತ ಸಕಾರಾತ್ಮಕ ಹೆಜ್ಜೆಯಾಗಿದೆ. ಇಂಗ್ಲೆಂಡ್, ಅಮೆರಿಕ, ಕೆನಡಾ ಸೇರಿದಂತೆ ಯುರೋಪ್ ದೇಶಗಳಲ್ಲಿ ಡಿಸೆಂಬರ್ 8 ರಿಂದಲೇ ಈ ಲಸಿಕೆಗೆ ಚಾಲನೆ ನೀಡಲಾಗಿದೆ.

ಇದೀಗ ಬ್ರಿಟನ್‌ನಲ್ಲಿ ರೂಪಾಂತರಿತ ಕೊರೊನಾವೈರಸ್ ಪತ್ತೆಯಾಗಿದ್ದು, ವಿವಿಧ ದೇಶಗಳಿಗೆ ಮತ್ತೆ ಕೊರೊನಾ ಸೋಂಕನ್ನು ಪಸರಿಸುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಗೆ ಅನುಮತಿ ನೀಡಿದೆ.

ಮೊದಲ ಡೋಸ್ ಇಂದು ಬಿಡುಗಡೆಯಾಗಿದೆ. ಯುಕೆ ಮೆಡಿಸಿನ್ಸ್ ಆಂಡ್ ಹೆಲ್ತ್ ಕೇರ್ ಪ್ರೊಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ(ಎಂಎಚ್‌ಆರ್‌ಎ) ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. 18 ವರ್ಷಕ್ಕಿಂತ ದೊಡ್ಡವರಿಗೆ ಈ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯನ್ನು ನೀಡಬಹುದಾಗಿದೆ ಎಂದು ಹೇಳಲಾಗಿದೆ.

ಒಟ್ಟು ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ನಾಲ್ಕರಿಂದ 12 ವಾರಗಳ ಕಾಲ ಅವರ ಮೇಲೆ ನಿಗಾ ಇಡಲಾಗುತ್ತದೆ. ಪ್ರಕರಣಗಳು ಸಂಭೀರವಾಗಿರದಿದ್ದರೆ 14 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರು ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Recommended Video

ಬೆಂಗಳೂರು: ಇಂದಿನಿಂದ ಶಾಲೆಗಳು ಆರಂಭ, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ | Oneindia Kannada

English summary
The World Health Organization on Thursday granted emergency validation to the Pfizer-BioNTech vaccine, paving the way for countries worldwide to quickly approve its import and distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X