ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHO

|
Google Oneindia Kannada News

ವಾಷಿಂಗ್ಟನ್,ಫೆಬ್ರವರಿ 13: ಕೊರೊನಾ ನಿರ್ಬಂಧ ಸಡಿಲಿಕೆ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

ಕೊರೊನಾ ವೈರಸ್ ವಿಶ್ವವ್ಯಾಪಿಯಾಗುವುದರ ಜತೆಗೆ ಬೇರೆ ಬೇರೆ ರೂಪವನ್ನು ತಾಳಿದೆ, ಇಂತಹ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದೆ.

ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ? ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ?

ಸತತ ನಾಲ್ಕನೇ ವಾರವೂ ಸೋಂಕು ಪ್ರಕರಣಗಳು ಕಡಿಮೆಯಾಗಿವೆ. ಜತೆಗೆ ಸತತ ಎರಡನೇ ವಾರವೂ ಸಾವಿನ ಪ್ರಕರಣಗಳು ಸಹ ಕಡಿಮೆಯಾಗಿವೆ. ಎಲ್ಲಾ ರಾಷ್ಟ್ರಗಳಲ್ಲಿ ಆರೋಗ್ಯ ರಕ್ಷಣೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಸೋಂಕು ಪ್ರಕರಣಗಳು ಕಡಿಮೆಯಾಗಿರಬಹುದು. ಆದರೆ, ಈ ಪರಿಸ್ಥಿತಿ ಅನಿಶ್ಚಿತತೆಯಿಂದ ಮತ್ತು ಅಪಾಯದಿಂದ ಕೂಡಿದೆ.

WHO Chief Warns Of Complacency As Global Coronavirus Cases Drop

ಹಾಗಿದ್ದರೂ ಕೂಡ ಯಾವುದೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಬೇಜಾವಾಬ್ದಾರಿಯಿಂದ ವರ್ತಿಸಿಬಾರದು, ಈ ರೀತಿ ಮನೋಭಾವ ಇಡೀ ದೇಶದ ಜನರನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ವೈರಸ್‌ನ ಮೂಲದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇನ್ನೂ ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ, ಡಿಸೆಂಬರ್‌ನಲ್ಲಿ ಮನುಷ್ಯರಿಗೆ ಯಾವ ಮಾರ್ಗದಲ್ಲಿ ವೈರಸ್ ಪ್ರವೇಶಿಸಿತು ಎನ್ನುವ ಕುರಿತು ಅಧ್ಯಯನಗಳು ನಡೆಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವೈರಸ್ ಪ್ರಾಣಿಗಳಿಂದ ಮನುಷ್ಯನಿಗೆ ಮೊದಲು ತಗುಲಿರಬಹುದು,ಚೀನಾ ಪ್ರಯೋಗಾಲಯದಿಂದ ಕೊರೊನಾ ವೈರಸ್ ಹಬ್ಬಿದೆ ಎನ್ನುವ ಸಾಧ್ಯತೆ ಕಡಿಮೆ ಎಂದು ಚೀನಾ ವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧಕರನ್ನೊಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಹೇಳಿಕೆ ನೀಡಿತ್ತು.

English summary
The head of the World Health Organization said Friday that the drop in confirmed COVID-19 infections around the world was encouraging, but cautioned against relaxing restrictions that have helped curb the spread of the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X