ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಸಾಂಕ್ರಾಮಿಕದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 07: ಮತ್ತೊಂದು ಸಾಂಕ್ರಾಮಿಕಕ್ಕೆ ಸಿದ್ಧರಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿಗೆ ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಎಚ್ಚರಿಕೆಯನ್ನು ರವಾನಿಸಿದೆ.ಕೊರೊನಾ ಸೋಂಕು ಎಂಬುದು ವಿಶ್ವದ ಸ್ವರೂಪವನ್ನೇ ಈ ಆರೆಂಟು ತಿಂಗಳಲ್ಲಿ ಬದಲಾಯಿಸಿದೆ.

ಯುಎಸ್ಎ ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರಿಗೆ ಕೊರೊನಾವೈರಸ್ ಯುಎಸ್ಎ ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರಿಗೆ ಕೊರೊನಾವೈರಸ್

ಕೊವಿಡ್ 19 ರೋಗದಿಂದ ಲಕ್ಷಾಂತರ ಸಾವುಗಳು ಸಂಭವಿಸಿದೆ. ವಿಶ್ವಾದ್ಯಂತ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಮಹಾಮಾರಿಯ ಸುಳಿವು ನೀಡಿದೆ.

WHO Asks World To Prepare For Next Pandemic

ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುವಂತೆ ವಿಶ್ವದ ನಾಯಕರುಗಳನ್ನು ಕೋರಿದೆ. ಮುಂದಿನ ಸಾಂಕ್ರಾಮಿಕ ರೋಗಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್ ಸೋಂಕನ್ನು ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ನಿವಾರಿಸುವಲ್ಲಿ ಬಲವಾದ ತುರ್ತು ಆರೋಗ್ಯ ಮೂಲಸೌಕರ್ಯ ಹೊಂದಿರುವ ದೇಶಗಳು ವೇಗವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ ಎಂದು ನಾವು ಈ ವರ್ಷ ನೋಡಿದ್ದೇವೆ.

ಆರೋಗ್ಯ ಸೇವೆಗಳ ಬಗ್ಗೆ ಒಂದು ದೇಶವು ಸಾಕಷ್ಟು ಗಮನ ಹರಿಸಿದಾಗ ಮಾತ್ರ ಸ್ಥಿರ ಪ್ರಪಂಚದ ಅಡಿಪಾಯ ಸಾಧ್ಯ ಎಂದು ಹೇಳಿದೆ. ಲಸಿಕೆ ಖರೀದಿ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡುತ್ತಿದೆ. ಒಟ್ಟಾರೆ ಗುಣಮಟ್ಟ ಸುಧಾರಿಸುತ್ತಿದೆ.

ಕೊರೊನಾ ಲಸಿಕೆ ಮತ್ತು ಅದರ ಪ್ರಯೋಗದ ವೇಗವನ್ನು ಹೆಚ್ಚಿಸುವ ಯೋಜನೆಯಲ್ಲಿ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡಿದೆ ಎಂದು ತನ್ನ ಹೇಳಿಕೆಯಲ್ಲಿ ಜಾಗತಿಕ ಸಂಘಟನೆ ತಿಳಿಸಿದೆ. ಆದರೆ ಈಗ ನಾವು ಲಸಿಕೆ ಜಗತ್ತಿಗೆ ಬಿಡುಗಡೆಯಾದಾಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇದು ಎಲ್ಲಾ ದೇಶಗಳಿಗೂ ಸಮನಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೊನಾ ಸಾಂಕ್ರಾಮಿಕವು ಒಂದು ರೀತಿಯಲ್ಲಿ ಜ್ಞಾಪಕವಾಗಿದ್ದು, ಆರೋಗ್ಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯ ಅಡಿಪಾಯವಾಗಿದೆ ಎಂಬುದನ್ನು ಇದು ನಮಗೆ ನೆನಪಿಸಿದೆ ಅಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೇಳಿದೆ.

ಕೊರೊನಾ ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದೇಶಗಳನ್ನು ಶ್ಲಾಘಿಸಿದೆ.

English summary
During the 73rd World Health Assembly (WHA), international agency WHO has asked World leaders to prepare for the next pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X