ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಜ್ಞರು ಸಲಹೆ ನೀಡಿದರೂ ಹೈಡ್ರಾಕ್ಸಿಕ್ಲೋರೊಕ್ವಿನ್ ಬಿಡಲೊಲ್ಲದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜುಲೈ 10: ಮಲೇರಿಯಾ ಟ್ರಗ್ ಹೈಡ್ರಾಕ್ಸಿಕ್ಲೋರೊಕ್ವಿನ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಜ್ಞರು ಹೇಳಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅದರ ಬಗ್ಗೆ ಒಲವು ಕಡಿಮೆಯಾಗಿಲ್ಲ.

Recommended Video

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಕಾಮೇಗೌಡರು | KameGowda | Oneindia Kannada

ಹೈಡ್ರಾಕ್ಸಿಕ್ಲೋರೊಕ್ವಿನ್ ಕೊರೊನಾ ಸೋಂಕನ್ನು ಗುಣಪಡಿಸಬಲ್ಲದು ಎಂದು ಟ್ರಂಪ್ ಈಗಲೂ ನಂಬಿದ್ದಾರೆ ಆದರೆ ಅದರಿಂದ ಕೊರೊನಾ ಗುಣವಾಗಬಲ್ಲದು ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ವೈಟ್ ಹೌಸ್ ಹೇಳಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಗನ ಗರ್ಲ್‌ಫ್ರೆಂಡ್‌ಗೂ ಕೊರೊನಾ ಪಾಸಿಟಿವ್ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಗನ ಗರ್ಲ್‌ಫ್ರೆಂಡ್‌ಗೂ ಕೊರೊನಾ ಪಾಸಿಟಿವ್

ಟ್ರಂಪ್ ಯಾವಾಗಲೂ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯಿಂದ ಸೋಮಕು ಬೇಗ ಗುಣವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ, ಭಾರತದಿಂದ ಮಾತ್ರೆಗಳನ್ನು ಆಮದು ಮಾಡಿಕೊಂಡ ಬಳಿಕ ಒಂದು ವಾರಗಳ ಕಾಲ ಟ್ರಂಪ್ ಈ ಮಾತ್ರೆಗಳನ್ನು ಸೇವಿಸಿದ್ದರು.

ಆದರೆ ಪ್ರತಿಯೊಬ್ಬರು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಮಾತ್ರೆಗಳನ್ನು ಸೇವಿಸಬೇಕು ಆದರೆ ಅದನ್ನು ಯಾರೂ ಮಾಡಿಲ್ಲ ಎಂದು ವೈಟ್‌ಹೌಸ್‌ನ ಕೇಲಿ ತಿಳಿಸಿದ್ದಾರೆ.

ಟ್ರಂಪ್ ಮಾತ್ರೆ ಸೇವಿಸಲು ಆರಂಭಿಸಿದ್ದು ಯಾವಾಗ?

ಟ್ರಂಪ್ ಮಾತ್ರೆ ಸೇವಿಸಲು ಆರಂಭಿಸಿದ್ದು ಯಾವಾಗ?

ವೈಟ್‌ಹೌಸ್‌ನಲ್ಲಿ ಓರ್ವ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಭಯದಿಂದ ಟ್ರಂಪ್ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಸೇವನೆ ಆರಂಭಿಸಿದ್ದರು.

ಯಾವುದೇ ಅಡ್ಡ ಪರಿಣಾಮ ಬೀರಿಲ್ಲ

ಯಾವುದೇ ಅಡ್ಡ ಪರಿಣಾಮ ಬೀರಿಲ್ಲ

ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯು ಟ್ರಂಪ್ ಅವರ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನೂ ಬೀರಿಲ್ಲ. ಆದರೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು.

ಬ್ರೆಜಿಲ್ ಅಧ್ಯಕ್ಷರೂ ಈ ಮಾತ್ರೆ ಸೇವಿಸುತ್ತಾರೆ

ಬ್ರೆಜಿಲ್ ಅಧ್ಯಕ್ಷರೂ ಈ ಮಾತ್ರೆ ಸೇವಿಸುತ್ತಾರೆ

ಬ್ರೆಜಿಲ್ ಅಧ್ಯಕ್ಷರಿಗೂ ಕೊರೊನಾ ಪಾಸಿಟಿವ್ ಆಗಿದ್ದು, ಅವರೂ ಕೂಡ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಸೇವಿಸಲು ಆರಂಭಿಸಿದ್ದಾರೆ.ಬೊಲ್ಸೊನಾರೋ ಈ ಕುರಿತು ಮಾತನಾಡಿದ್ದು, ಕೊರೊನಾ ಸೋಂಕು ನಿಯಂತ್ರಣ ಹಾಗೂ ಗುಣಪಡಿಸಲು ಹೈಡ್ರಾಕ್ಸಿಕ್ಲೋರೊಕ್ವಿನ್ ಬೇಕು ಹೀಗಾಗಿ ಅದನ್ನು ಎಲ್ಲೆಡೆ ಜನರಿಗೆ ಸಿಗುವಂತೆ ಮಾಡಿ ಎಂದು ಹೇಳಿದ್ದಾರೆ.

ಕೊವಿಡ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಪ್ರಯೋಗ ಇಲ್ಲ

ಕೊವಿಡ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಪ್ರಯೋಗ ಇಲ್ಲ

ಕೊವಿಡ್ 19ಗೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆಗೆ ಪ್ರಯೋಗವನ್ನು ಕೊನೆಗೊಳಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು. ಹೈಡ್ರಾಕ್ಸಿಕ್ಲೋರೊಕ್ವಿನ್ ಹಾಗೂ ಎಚ್‌ಐವಿ ರೋಗಿಗಳಿಗೆ ನೀಡಲಾಗುವ ಲೊಪಿನವಿರ್ /ರಿಟೊನವಿರ್ ಔಷಧಗಳನ್ನು ಕೊವಿಡ್ ರೋಗಿಗಳ ಮೇಲೆ ಪ್ರಯೋಗಿಸುವುದನ್ನು ಸ್ಥಗಿತಗೊಳಿಸುವಂತೆ ಈ ಪ್ರಯೋಗದ ಮೇಲ್ವಿಚಾರಣೆವಹಿಸಿದ್ದ ಸಮಿತಿಯು ನೀಡಿದ್ದ ಸಲಹೆಯನ್ನು ಸ್ವೀಕರಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊವಿಡ್ 19ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದವರ ಮೇಲೆ ಈ ಔಷಧವನ್ನೇ ಪ್ರಯೋಗಿಸಿ , ಪರಿಣಾಮಗಳ ತುಲನೆ ನಡೆಸಲಾಗುತ್ತಿತ್ತು.

English summary
President Donald Trump continues to see a malaria drug, hydroxychloroquine, as a promising drug to be used to prevent infection with the coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X