ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸೋತರೂ ಎರಡನೇ ಅವಧಿ ಸೇವೆಗೆ ಶ್ವೇತಭವನ ತಯಾರಿ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮರು ಆಯ್ಕೆಯ ಪ್ರಯತ್ನದಲ್ಲಿ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಎರಡನೆಯ ಅವಧಿಗೂ ಟ್ರಂಪ್ ಅವರಿಗೆ ಸೇವೆ ಸಲ್ಲಿಸಲು ಶ್ವೇತಭವನ ತಯಾರಿ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಅವಧಿಯಲ್ಲಿಯೂ ಇರಲಿದ್ದರೆ ಎಂಬ ಕಲ್ಪನೆಯೊಂದಿಗೆ ನಾವು ಶ್ವೇತಭವನದಲ್ಲಿ ಚಟುವಟಿಕೆಗಳನ್ನು ನಡೆಸುವುದನ್ನು ಮುಂದುವರಿಸುತ್ತಿದ್ದೇವೆ' ಎಂದು ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರ್ರೋ ಅವರು ಫಾಕ್ಸ್ ಬ್ಯುಸಿನೆಸ್ ನೆಟ್ವರ್ಕ್‌ಗೆ ತಿಳಿಸಿದ್ದಾರೆ.

ವಿಚ್ಛೇದನದ ಬಳಿಕ ಮೆಲಾನಿಯಾ ಟ್ರಂಪ್ ಪಡೆಯುವ ಪರಿಹಾರವೆಷ್ಟು ಗೊತ್ತೇ?ವಿಚ್ಛೇದನದ ಬಳಿಕ ಮೆಲಾನಿಯಾ ಟ್ರಂಪ್ ಪಡೆಯುವ ಪರಿಹಾರವೆಷ್ಟು ಗೊತ್ತೇ?

ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲೆಕ್ಟೊರಲ್ ಮತಗಳಲ್ಲಿಯೂ ಸ್ಪಷ್ಟ ಸೋಲು ಅನುಭವಿಸಿದರೂ, ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರಿನ ಸೋಲನ್ನು ಇದುವರೆಗೂ ಒಪ್ಪಿಕೊಂಡಿಲ್ಲ. ಚುನಾವಣೆ ಬಳಿಕ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಟ್ರಂಪ್, ವಿವಿಧ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶದ ವಿರುದ್ಧ ಕಾನೂನು ಸಮರ ಆರಂಭಿಸಿದ್ದಾರೆ. ಜತೆಗೆ ಚುನಾವಣಾ ವಂಚನೆಯ ಆರೋಪ ಮಾಡಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ.

White House Planning To Serve A Second Term Despite Defeat In US Elections

'ನಾವು ಸರಿಯಾದ ಮತಪತ್ರಗಳು, ಪ್ರಮಾಣೀಕೃತ ಮತಪತ್ರಗಳ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳು ಸಹಿ ಮಾಡಿರುವ ಅಫಿಡವಿಟ್‌ಗಳ ಆಧಾರದಲ್ಲಿ ನಾವು ಈ ಆರೋಪಗಳನ್ನು ಮಾಡುತ್ತಿದ್ದೇವೆ' ಎಂದು ನವಾರ್ರೋ ತಿಳಿಸಿದ್ದಾರೆ.

English summary
US Elections 2020: The White House is planning to serve Donald Trump a second term despite his defeat in presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X