ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಓದಲ್ಲ ಎಂದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 25: ಅಮೆರಿಕ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಗೆ ದೇಶದ ಪ್ರಮುಖ ಪತ್ರಿಕೆಗಳ ಮೇಲೆ ಇರುವ ಸಿಟ್ಟು ಮತ್ತೊಂದು ಮಜಲು ತಲುಪಿದೆ. ಅಮೆರಿಕದ ಎರಡು ಅತಿ ದೊಡ್ಡ ಪತ್ರಿಕೆಗಳಾದ 'ದ ನ್ಯೂಯಾರ್ಕ್ ಟೈಮ್ಸ್' ಮತ್ತು 'ವಾಷಿಂಗ್ಟನ್ ಪೋಸ್ಟ್'ನಲ್ಲಿ ಬರುವುದನ್ನು ಓದಲು ಟ್ರಂಪ್ ಗೆ ಇಷ್ಟವಿಲ್ಲದ ಕಾರಣಕ್ಕೆ ಅವುಗಳ ಚಂದಾವನ್ನು ವೈಟ್ ಹೌಸ್ ಸ್ಥಗಿತಗೊಳಿಸಿದೆ.

ನಮ್ಮ ಚಂದಾ ನವೀಕರಿಸಿಲ್ಲ. ಅದು ಸರಿ. ಇದರಿಂದ ತೆರಿಗೆದಾರರ ಮಹತ್ವದ ವೆಚ್ಚ ಉಳಿತಾಯ ಆಗುತ್ತದೆ ಎಂದು ವೈಟ್ ಹೌಸ್ ನ ವಕ್ತಾರೆ ಸ್ಟೆಫಾನಿ ಗ್ರೀಶಂ ಮಾಧ್ಯಮ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ

ಈಚೆಗೆ ಫಾಕ್ಸ್ ನ್ಯೂಸ್ ಜತೆ ಮಾತನಾಡಿದ ಟ್ರಂಪ್, ತಾವು ಆ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ಸುದ್ದಿಯನ್ನು ನೋಡುವುದಾಗಿ, ನಂಬುವುದಾಗಿ ಹೇಳಿದ್ದಾರೆ. 'ನಕಲಿ' ಸುದ್ದಿ ಬರುವುದರಿಂದ ಆ ಪತ್ರಿಕೆಗಳನ್ನು ಓದಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ ಎಂಬುದನ್ನು ಗ್ರೀಶಂ ಹೇಳಿದ್ದು, ಸರ್ಕಾರಿ ಇಲಾಖೆಗಳಲ್ಲಿ ಎಲ್ಲೆಲ್ಲಿ ಈ ಎರಡು ಪತ್ರಿಕೆ ಚಂದಾ ಇದೆಯೋ ಎಲ್ಲವನ್ನೂ ಸ್ಥಗಿತಗೊಳಿಸುವ ಆಲೋಚನೆ ಇದೆ ಎಂದಿದ್ದಾರೆ.

White House Cancelled The Subscription Of The New York Times, Washington Post

"ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಷಿಂಗ್ಟನ್ ಪೋಸ್ಟ್ ನ ಹಾರ್ಡ್ ವರ್ಕಿಂಗ್ ವರದಿಗಾರರ ಬಗ್ಗೆ ನನಗೆ ಯಾವ ಅನುಮಾನ ಇಲ್ಲ. ಅವೆರಡನ್ನು ಅಧ್ಯಕ್ಷರು ಓದುತ್ತಾರೆ ಎಂದು ಖಾತ್ರಿ ಪಡಿಸದಿದ್ದರೂ ಗುಣಮಟ್ಟದ ಪತ್ರಿಕೋದ್ಯಮವನ್ನು ಮುಂದುವರಿಸುತ್ತಾರೆ" ಎಂದು ವೈಟ್ ಹೌಸ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಜೊನಾಥನ್ ಕಾರ್ಲ್ ಹೇಳಿದ್ದಾರೆ.

ಮುಕ್ತ ಮಾಧ್ಯಮದ ಕೆಲಸವನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೂ ಸುದ್ದಿ ಎಲ್ಲೂ ಹೋಗಲ್ಲ ಅಥವಾ ಸಾರ್ವಜನಿಕರಿಗೆ ಸುದ್ದಿ ತಲುಪಿಸುವುದನ್ನು ನಿಲ್ಲಿಸಲು ಆಗಲ್ಲ ಮತ್ತು ಯಾರು ಅಧಿಕಾರದಲ್ಲಿ ಇರುತ್ತಾರೋ ಅವರೇ ಅದಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಅವರು ಸೇರಿಸಿದ್ದಾರೆ.

ವೈಟ್ ಹೌಸ್ ಪಾಲಿಗೆ ಕಪ್ಪು ಚುಕ್ಕೆ, ಟ್ರಂಪ್ ಆಡಳಿತದ ವಿರುದ್ಧ ಸಿಎನ್ ಎನ್ ಕೋರ್ಟ್ ಗೆವೈಟ್ ಹೌಸ್ ಪಾಲಿಗೆ ಕಪ್ಪು ಚುಕ್ಕೆ, ಟ್ರಂಪ್ ಆಡಳಿತದ ವಿರುದ್ಧ ಸಿಎನ್ ಎನ್ ಕೋರ್ಟ್ ಗೆ

ಮುದ್ರಣ ಸಂಖ್ಯೆಯಿಂದ ದ ಟೈಮ್ಸ್ ಮತ್ತು ಪೋಸ್ಟ್ ದೊಡ್ಡ ನಿಯತಕಾಲಿಕೆಗಳು ಅಲ್ಲ. ಆದರೆ ಅಮೆರಿಕದ ರಾಷ್ಟ್ರೀಯ ರಾಜಕಾರಣ ಹಾಗೂ ವೈಟ್ ಹೌಸ್ ಸುದ್ದಿ ಕವರೇಜ್ ನಲ್ಲಿ ಅವುಗಳದೇ ಪ್ರಭಾವ ಹೊಂದಿವೆ.

English summary
The New York Times, Washington Post subscription cancelled by America White house. Here is the reason, why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X