ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆಯಲು ನೌಕರರಿಗೆ ವರ್ಲ್‌ಪೂಲ್ ಆರ್ಥಿಕ ನೆರವು

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 14: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಎಲೆಕ್ಟ್ರಾನಿಕ್ ಉಪಕರಣ ತಯಾರಕ ವರ್ಲ್‌ಪೂಲ್ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪಡೆದುಕೊಳ್ಳಲು ತನ್ನ ನೌಕರರಿಗೆ ನಗದು ನೀಡುತ್ತಿದೆ.

ಈ ಹಿಂದೆಯೂ ಮೇ ತಿಂಗಳಿನಲ್ಲಿ 200 ಡಾಲರ್ ಹಣವನ್ನು ಸಂಸ್ಥೆ ನೀಡಿತ್ತು. ಈ ಬಾರಿ 1000 ಡಾಲರ್ ಬೋನಸ್ ಹಣವನ್ನು ನೌಕರರಿಗೆ ನೀಡಿರುವುದಾಗಿ ಬ್ಲೂಂಬರ್ಗ್ ವರದಿ ಮಾಡಿದೆ.

ಮೂರನೇ ಅಲೆ ಎಚ್ಚರಿಕೆ ನಡುವೆ ಮಕ್ಕಳಲ್ಲಿ ಕ್ರಮೇಣ ಕೊರೊನಾ ಹೆಚ್ಚಳಮೂರನೇ ಅಲೆ ಎಚ್ಚರಿಕೆ ನಡುವೆ ಮಕ್ಕಳಲ್ಲಿ ಕ್ರಮೇಣ ಕೊರೊನಾ ಹೆಚ್ಚಳ

'ವಿಶ್ವದಾದ್ಯಂತ ನಮ್ಮ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ನಮ್ಮ ಆದ್ಯತೆಯ ವಿಷಯವಾಗಿದೆ. ನೌಕರರ ಬದ್ಧತೆ ಹೊರತುಪಡಿಸಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಅವರಿಗೆ ಕೊರೊನಾ ಲಸಿಕೆ ಪಡೆಯಲು ನೆರವು ನೀಡಲು ತೀರ್ಮಾನಿಸಿದ್ದೇವೆ' ಎಂದು ವರ್ಲ್‌ಪೂಲ್ ಸಿಇಒ ಹಾಗೂ ಅಧ್ಯಕ್ಷ ಮಾರ್ಕ್ ಬಿಟ್ಚರ್ ತಿಳಿಸಿದ್ದಾರೆ.

Whirlpool To Pay Workers For Getting Corona Vaccine

'ರಾಷ್ಟ್ರೀಯ ರೋಗನಿಯಂತ್ರಣ ಹಾಗೂ ನಿವಾರಣಾ ಕೇಂದ್ರ ನೀಡಿದ ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ನಮ್ಮ ಕಂಪನಿಯ ಉತ್ಪಾದನಾ ಘಟಕಗಳಲ್ಲಿ ಅನುಸರಿಸುತ್ತಿದ್ದೇವೆ. ಕೊರೊನಾ ನಿಯಮಗಳ ಪಾಲನೆಯನ್ನು ಕಠಿಣವಾಗಿ ಮುಂದುವರೆಸಿದ್ದೇವೆ. ಉತ್ಪಾದನಾ ಘಟಕದಲ್ಲಿ ಶುದ್ಧತೆ ಕಾಯ್ದುಕೊಳ್ಳುತ್ತಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ' ಎಂದು ಕಂಪನಿ ತಿಳಿಸಿದೆ.

ದೇವಾನ್ ಎನರ್ಜಿ ಕಾಪರ್‌ ಹಾಗೂ ಬೋಲ್ಟ್‌ ಹೌಸ್‌ ಫಾರ್ಮ್‌ಗಳು ತಮ್ಮ ಕಾರ್ಮಿಕರಿಗೆ 500 ಡಾಲರ್ ಹಣವನ್ನು ಲಸಿಕೆ ಪಡೆಯಲು ನೀಡಿದ್ದವು.

ಕೊರೊನಾ ಲಸಿಕೆ 2 ಡೋಸ್‌ಗಳು ಸಾಕಷ್ಟು ಪರಿಣಾಮಕಾರಿ, ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್ಕೊರೊನಾ ಲಸಿಕೆ 2 ಡೋಸ್‌ಗಳು ಸಾಕಷ್ಟು ಪರಿಣಾಮಕಾರಿ, ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್

ಅಮೆರಿಕನ್ನರಿಗೆ ಕೊರೊನಾ ಲಸಿಕೆ ನೂತನ ಆದೇಶ:
ಈಚೆಗಷ್ಟೆ ಕೊರೊನಾ ಡೆಲ್ಟಾ ರೂಪಾಂತರ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೊರೊನಾ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಲು ನೂತನ ಯೋಜನೆಗಳನ್ನು ರೂಪಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುಮಾರು ನೂರು ಮಿಲಿಯನ್ ಅಮೆರಿಕನ್ನರಿಗೆ ಕೊರೊನಾ ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ. ಖಾಸಗಿ ವಲಯದ ನೌಕರರು, ಆರೋಗ್ಯ ಕಾರ್ಯಕರ್ತರು ಹಾಗೂ ಇತರೆ ಸಿಬ್ಬಂದಿಗೆ ಲಸಿಕೆಗಳನ್ನು ನೀಡಲು ತುರ್ತು ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Whirlpool To Pay Workers For Getting Corona Vaccine

ಶ್ವೇತಭವನದಲ್ಲಿ ಗುರುವಾರ ಈ ಕುರಿತು ಮಾತನಾಡಿದ ಬೈಡನ್, ಕೊರೊನಾ ಲಸಿಕೆಗಳು ಲಭ್ಯವಾಗಿ ಹಲವು ಸಮಯವೇ ಕಳೆದಿದ್ದರೂ ಇನ್ನೂ ಲಕ್ಷಾಂತರ ಅಮೆರಿಕನ್ನರು ಯಾಕೆ ಲಸಿಕೆ ಪಡೆದುಕೊಂಡಿಲ್ಲ? ಸುಮಾರು 80 ಮಿಲಿಯನ್ ಮಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹೆಚ್ಚಿನ ಜನರಿಗೆ ಲಸಿಕೆ ನೀಡಲು ಆರು ಹಂತದ ಲಸಿಕಾ ಯೋಜನೆಯ ಕುರಿತು ಪ್ರಸ್ತಾಪ ಮಾಡಿದ್ದು, ಶಾಲೆಗಳನ್ನು ಸುರಕ್ಷಿತವಾಗಿ ತೆರೆಯಲು, ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು, ರೋಗಿಗಳ ಆರೋಗ್ಯ ಸುಧಾರಣೆಗೆ ಒತ್ತು ನೀಡುವಂತೆ ಹೇಳಿದ್ದಾರೆ. ಹೊಸ ಮಾರ್ಗಸೂಚಿಯನ್ವಯ ನೂರಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ನೌಕರರಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಿರಬೇಕು ಇಲ್ಲವೇ ವಾರಕ್ಕೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ನಿಯಮ ರೂಪಿಸಲಾಗಿದೆ.

English summary
Whirlpool is offering cash bonuses for getting vaccinated against COVID-19 as cases surge in the United States,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X