ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿ,ಯಾವಾಗ, ಹೇಗೆ ಮಾಸ್ಕ್ ಧರಿಸಬೇಕು?: WHO ಹೊಸ ಮಾರ್ಗಸೂಚಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 03: ಎಲ್ಲರೂ ಮಾಸ್ಕ್ ಧರಿಸುತ್ತಾರೆ ನಿಜ ಆದರೆ ಎಲ್ಲಿ, ಯಾವಾಗ, ಹೇಗೆ ಮಾಸ್ಕ್ ಧರಿಸಬೇಕು ಎನ್ನುವುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೊರೊನಾ ಸೋಂಕಿನಿಂದ ದೂರವಿರಬೇಕಾದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಫೇಸ್ ಮಾಸ್ಕ್ ಧರಿಸಬೇಕು, ಕೈಗಳನ್ನು ಪದೇ ಪದೇ ತೊಳೆಯುತ್ತಿರಬೇಕು.

 ಫೈಜರ್ ಕೊರೊನಾ ಲಸಿಕೆ ಭಾರತಕ್ಕೂ ಲಭ್ಯವಾಗಲಿದೆಯೇ? ಫೈಜರ್ ಕೊರೊನಾ ಲಸಿಕೆ ಭಾರತಕ್ಕೂ ಲಭ್ಯವಾಗಲಿದೆಯೇ?

ದಿನನಿತ್ಯ ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ಕಷ್ಟವಾಗುತ್ತದೆ, ಅದರಿಂದ ಒಳ್ಳೆಯದಕ್ಕಿಂತಲೂ ತೊಂದರೆಯೇ ಹೆಚ್ಚಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಹಾಗಾಗಿ ಯಾವ್ಯಾವ ಪ್ರದೇಶದಲ್ಲಿ, ಯಾವ ಸಂದರ್ಭದಲ್ಲಿ ಮಾಸ್ಕ್ ಧರಿಸಬೇಕು ಎನ್ನುವುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೊ ಮಾರ್ಗಸೂಚಿ ಏನು ಹೇಳುತ್ತೆ?

ವಿಶ್ವ ಆರೋಗ್ಯ ಸಂಸ್ಥೆಯ ಹೊ ಮಾರ್ಗಸೂಚಿ ಏನು ಹೇಳುತ್ತೆ?

ವಿಶ್ವ ಆರೋಗ್ಯ ಸಂಸ್ಥೆಯು ಮಾಸ್ಕ್ ಧರಿಸುವುದರ ಕುರಿತು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಕಾರು, ಸಣ್ಣ ಕೊಠಡಿ, ಏರ್ ಕಂಡೀಷನ್‌ ಇರುವ ಪ್ರದೇಶಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದ್ದು, ಇಂತಹ ಜಾಗಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿ ಎಂದು ಹೇಳಿದೆ.

ಟೈಟ್ ಮಾಸ್ಕ್

ಟೈಟ್ ಮಾಸ್ಕ್

ಟೈಟ್ ಮಾಸ್ಕ್‌ಗಳನ್ನು ಬಳಸಿ, ಏಕೆಂದರೆ ಬೇರೆ ಮಾಸ್ಕ್‌ ಧರಿಸಿದರೆ ಹೊರಗಡೆಯಿಂದ ಗಾಳಿಯು ಸುಲಭವಾಗಿ ಮಾಸ್ಕ್‌ ಒಳಗೆ ಹೋಗುತ್ತದೆ. ಅದರಿಂದ ಕೊರೊನಾವೈರಸ್ ಅಪಾಯ ಹೆಚ್ಚಿರುತ್ತದೆ.

ಜಿಮ್‌ಗೆ ತೆರಳಿದಾಗ ಮಾಸ್ಕ್ ಧರಿಸಬೇಕೆ?

ಜಿಮ್‌ಗೆ ತೆರಳಿದಾಗ ಮಾಸ್ಕ್ ಧರಿಸಬೇಕೆ?

ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಜಿಮ್‌ನಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಸಾಕು ಎಂದು ಹೇಳಿದೆ.

Recommended Video

ರೈತರ ಪ್ರತಿಭಟನೆ ಕುರಿತು Amit Shah ಮಹತ್ವದ ಸಭೆ | Oneindia Kannada
ಎಲ್ಲೆಲ್ಲಿ ಮಾಸ್ಕ್ ಧರಿಸಬೇಕು?

ಎಲ್ಲೆಲ್ಲಿ ಮಾಸ್ಕ್ ಧರಿಸಬೇಕು?

ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಒಂದೊಮ್ಮೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದರೂ ಕೂಡ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಐದು ವರ್ಷದೊಳಗಿನವರು ಮಾಸ್ಕ್ ಧರಿಸುವುದು ಬೇಡ, 6-11 ವರ್ಷದವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

English summary
Prevention from contraction, and boosting immunity have been touted as the best weapons against COVID-19, the disease caused by the novel coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X