ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

|
Google Oneindia Kannada News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ 2ನೇ ಬಾರಿಗೆ ವಾಗ್ದಂಡನೆ ಪ್ರಕ್ರಿಯೆಗೆ ಅಮೆರಿಕ ಸಂಸತ್ತಿನಲ್ಲಿ ಚಾಲನೆ ಸಿಕ್ಕಿದೆ. ಅಮೆರಿಕದ 45ನೇ ಅಧ್ಯಕ್ಷರಾಗಿರುವ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆ ಪಕ್ಷಾತೀತವಾಗಿ ನಿರ್ಧಾರವಾಗಲಿದೆ ಎಂದು ಸೆನೆಟ್ ಹೇಳಿದೆ. ಒಂದು ವೇಳೆ ಮಹಾಭಿಯೋಗ ಸಫಲವಾಗಿ ಟ್ರಂಪ್ ಕೆಳಗಿಳಿದರೆ ಮುಂದಿನ ಪ್ರಕ್ರಿಯೆ, ನಡೆ ಏನು. ಟ್ರಂಪ್ ಭವಿಷ್ಯವೇನು? ಇಲ್ಲಿದೆ ವಿವರಣೆ...

ಸಮಯ 3:10-ಸುಮಾರು 2 ಗಂಟೆಗಳ ಚರ್ಚೆ ಬಳಿಕ 433 ಸದಸ್ಯರು ಹಾಜರಿದ್ದ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ 232 ಮತಗಳು (ಡೆಮಾಕ್ರೆಟ್ಸ್) ಬಂದಿವೆ. ಈ ಪೈಕಿ 10 ರಿಪಬ್ಲಿಕನ್ಸ್ ಮತಗಳು ಸೇರಿವೆ. ಟ್ರಂಪ್ ಪರ 197 ಮತ ಬಿದ್ದಿವೆ. ಈ ಮೂಲಕ ಎರಡು ಬಾರಿ ವಾಗ್ದಂಡನೆ ಎದುರಿಸಿದ ಮೊದಲ ಯುಎಸ್ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಒಳಗಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಎದುರಿಸುತ್ತಿರುವ ಪರಿಸ್ಥಿತಿ ಅಮೆರಿಕದಲ್ಲಿ ಹೊಸದೇನಲ್ಲ. ಇದಕ್ಕೂ ಮುನ್ನ 1868ರಲ್ಲಿ ಆಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಮೆರಿಕದ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು. ಆದರೆ ಇಬ್ಬರಿಗೂ ಸೆನೆಟ್ ಕ್ಲೀನ್ ಚಿಟ್ ನೀಡಿತ್ತು. ಈಗ ಟ್ರಂಪ್ ಕೂಡಾ ಇದೇ ಭೀತಿಯಲ್ಲಿದ್ದಾರೆ. ಟ್ರಂಪ್ ಅಧಿಕಾರ ಅವಧಿ ಮುಗಿಯಲು ಇನ್ನೊಂದು ವಾರ ಮಾತ್ರ ಬಾಕಿಯಿದೆ.

ಟ್ರಂಪ್ ಓಡಿಸಲು ಅವರದ್ದೇ ಪಕ್ಷದ ಹಿರಿಯ ನಾಯಕಿಯ ಬೆಂಬಲ!ಟ್ರಂಪ್ ಓಡಿಸಲು ಅವರದ್ದೇ ಪಕ್ಷದ ಹಿರಿಯ ನಾಯಕಿಯ ಬೆಂಬಲ!

ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಬೆಂಬಲಿಗರು ದಾಳಿ ನಡೆಸಿದ ನಂತರ ಡೆಮಾಕ್ರಟಿಕ್ ಪಕ್ಷದ ಸಂಸದರು ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಸಲು ಯೋಜನೆ ರೂಪಿಸಿದ್ದಾರೆ. ಆದರೆ, ಇದರಲ್ಲಿ ಸಫಲರಾಗಲು ರಿಪಬ್ಲಿಕನ್ಸ್ ಬೆಂಬಲವೂ ಅಗತ್ಯವಿದೆ.

25ನೇ ತಿದ್ದುಪಡಿ ಜಾರಿಗೆ ಮೈಕ್ ಪೆನ್ಸ್ ಒಪ್ಪಿಲ್ಲ

25ನೇ ತಿದ್ದುಪಡಿ ಜಾರಿಗೆ ಮೈಕ್ ಪೆನ್ಸ್ ಒಪ್ಪಿಲ್ಲ

ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಸಹಕಾರದೊಂದಿಗೆ 25ನೇ ತಿದ್ದುಪಡಿ ಅನ್ವಯಿಸಿ ಟ್ರಂಪ್ ಕಿತ್ತೊಗೆಯಲು ಸಂಸದರು ಪ್ಲಾನ್ ಮಾಡಿದ್ದರು. ಆದರೆ ಮೈಕ್ ಪೆನ್ಸ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ.

ಟ್ರಂಪ್‌ರನ್ನು ಅಧಿಕಾರದಿಂದ ಕಿತ್ತೊಗೆಯುವುದು ಅನಿವಾರ್ಯವಾಗಿದ್ದು, ವಾಗ್ದಂಡನೆ ಅಥವಾ ಇಂಪೀಚ್‌ಮೆಂಟ್ (Impeachment) ಮೂಲಕ ಕಾರ್ಯ ಸಾಧಿಸಲು ಅಮೆರಿಕ ಸಂಸದರು ಚರ್ಚೆ ನಡೆಸಿದರು.

ಟ್ರಂಪ್ ವಿರುದ್ಧದ ವಾಗ್ದಂಡನೆಗೆ ಖುದ್ದು ಟ್ರಂಪ್ ಪಕ್ಷವಾದ ರಿಪಬ್ಲಿಕನ್ಸ್ ಸಂಸದರು ಕೂಡ ಬೆಂಬಲ ಘೋಷಿಸುತ್ತಿದ್ದು, ಈ ಸಾಲಿಗೆ ಹಿರಿಯ ಸಂಸದೆ ಲಿಝ್ ಚೇನಿ ಕೂಡ ಸೇರ್ಪಡೆಗೊಂಡಿದ್ದು ಕುತೂಹಲ ಕೆರಳಿಸಿತ್ತು.

ಟ್ರಂಪ್ ವಿರುದ್ಧ ಆರೋಪ ಹೊರಿಸಿ ಈಗಾಗಲೇ ಅಮೆರಿಕ ಕಾಂಗ್ರೆಸ್‌ನ 200ಕ್ಕೂ ಹೆಚ್ಚು ಸದಸ್ಯರು ವಾಗ್ದಂಡನೆಗೆ ಸಹಿಹಾಕಿದ್ದಾರೆ. ಇದು ಡೆಮಾಕ್ರಟಿಕ್ ಹುರಿಯಾಳುಗಳ ಬಲ ಹೆಚ್ಚಿಸಿತ್ತು.

ಡೊನಾಲ್ಡ್ ಟ್ರಂಪ್ ವಿರುದ್ಧ ಐತಿಹಾಸಿಕ ವಾಗ್ದಂಡನೆ ಪ್ರಕ್ರಿಯೆ

ವಿಚಾರಣೆ ನಡೆಸಲು ಕಾಲಾವಕಾಶ ಕಡಿಮೆ

ವಿಚಾರಣೆ ನಡೆಸಲು ಕಾಲಾವಕಾಶ ಕಡಿಮೆ

ಜನವರಿ 20ರ ನಂತರ ಕೂಡ ಟ್ರಂಪ್ ಅಧಿಕಾರ ಬಿಡದೇ ಇದ್ದರೆ, ವಾಗ್ದಂಡನೆ ಮೂಲಕ ಹೊರಗೆ ಕಳುಹಿಸಬಹುದು. ಜನವರಿ 20ರ ನಂತರ ಟ್ರಂಪ್ ಕಿರಿಕ್ ಮಾಡಿದರೆ ವೈಟ್‌ಹೌಸ್ ಖಾಲಿ ಮಾಡಿಸಲು ವಾಗ್ದಂಡನೆಯ ಬಲ ಸಿಗುತ್ತದೆ ಎಂಬುದು ಡೆಮಾಕ್ರಟಿಕ್ ಪಕ್ಷದ ಸಂಸದರು ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. ಆದರೆ, ಸದ್ಯ ಕಾಲಾವಕಾಶ(ಒಂದು ವಾರದೊಳಗೆ ಟ್ರಂಪ್ ವಿಚಾರಣೆ ನಡೆದು, ಪರ ವಿರೋಧ ಮತದಾನ ನಡೆಯಬೇಕು) ಇಲ್ಲ, ವಿಶೇಷ ಅಧಿವೇಶನ ಕರೆಯಲು ಕನಿಷ್ಠ 100ಕ್ಕೂ ಅಧಿಕ ಸೆನೆಟರ್ ಗಳ ಒಪ್ಪಿಗೆ ಬೇಕಾಗುತ್ತದೆ. ಇದು ಸಾಧ್ಯವಿಲ್ಲದ ಮಾತು. ಒಂದು ವೇಳೆ ಜನವರಿ 14ರಂದು ವಾಗ್ದಂಡನೆಗೆ ಒಪ್ಪಿಗೆ ಸಿಕ್ಕರೂ ಅದನ್ನು ರಿಪಬ್ಲಿಕನ್ ಸೆನೆಟ್ ನಾಯಕ ಮಿಚ್ ಮೆಕ್ ಕೊನೆಲ್ ಅವರು ವಿಶೇಷ ಅಧಿವೇಶನ ಹಾಗೂ ವಿಚಾರಣೆಗೆ ಒಪ್ಪಿಗೆ ಸೂಚಿಸಬೇಕು. ಮೆಕ್ ಕೊನೆಲ್ ಅವರು ಆತುರದ ವಿಚಾರಣೆಗೆ ಸಮ್ಮತಿಸುವುದಿಲ್ಲ ಸುದ್ದಿ ಸಿಕ್ಕಿದೆ.

2019ರಲ್ಲಿ ನಡೆದಿದ್ದ ಮಹಾಭಿಯೋಗ

2019ರಲ್ಲಿ ನಡೆದಿದ್ದ ಮಹಾಭಿಯೋಗ

ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್‌ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿತ್ತು. ಬಳಿಕ ಇದು ಜನಪ್ರತಿನಿಧಿಗಳ ಸಭೆಗೆ (ಕೆಳಮನೆ) ಬಂದಿತ್ತು. ಹತ್ತು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮತ ಪ್ರಕ್ರಿಯೆ ನಡೆದಿದೆ.

ಮೊದಲು ಅಧಿಕಾರ ದುರುಪಯೋಗದ ವಿರುದ್ಧದ ಮತ ಚಲಾವಣೆಯಾಯಿತು. ಟ್ರಂಪ್ ವಿರುದ್ಧ 230 ಮತಗಳು ಬಿದ್ದರೆ, ಅವರ ಪರ 197 ಮತಗಳು ಚಲಾವಣೆಗೊಂಡವು.

ಎರಡನೆಯ ಆರೋಪವಾದ ಕಾಂಗ್ರೆಸ್ ಕಾರ್ಯಕ್ಕೆ ಅಡ್ಡಿಪಡಿಸಿದ್ದರ ಕುರಿತು ನಡೆದ ಮತ ಚಲಾಚಣೆಯಲ್ಲಿ 229-198 ಮತಗಳಿಂದ ಟ್ರಂಪ್‌ಗೆ ಸೋಲಾಯಿತು. ವಿವರ ಇಲ್ಲಿದೆ

ಟ್ರಂಪ್ ಬಚಾವಾಗಿದ್ದರು, ಈ ಬಾರಿ ಆತುರದ ಕ್ರಮವೇಕೆ?

ಟ್ರಂಪ್ ಬಚಾವಾಗಿದ್ದರು, ಈ ಬಾರಿ ಆತುರದ ಕ್ರಮವೇಕೆ?

'ಎರಡು ದಶಕಗಳಲ್ಲಿ ಮೊದಲ ಬಾರಿಗೆ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಟ್ರಂಪ್ ಅವರು ನಮ್ಮ ರಾಷ್ಟ್ರೀಯ ಭದ್ರತೆಗೆ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ' ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದನ್ನು ಸ್ಮರಿಸಬಹುದು.

ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಲು ಸೆನೆಟ್ ನಲ್ಲಿ ಮೂರನೇ ಎರಡರಷ್ಟು ಮತಗಳು ಅವರ ವಿರುದ್ಧ ಬೀಳಬೇಕಾಗುತ್ತದೆ. ಆದರೆ ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು 53-47 ಮತಗಳ ಬಹುಮತ ಹೊಂದಿದೆ. ಹೀಗಾಗಿ ಟ್ರಂಪ್ ವಿರುದ್ಧದ ವಾಗ್ದಂಡನೆ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ನವೆಂಬರ್ ಚುನಾವಣೆ ಬಳಿಕ ರಿಪಬ್ಲಿಕನ್ ಬಲ ಹೆಚ್ಚಿದೆ. ಆದರೆ, ಮತಗಳ ಲೆಕ್ಕಾಚಾರದಲ್ಲಿ ಕನಿಷ್ಠ 17 ಮಂದಿ ರಿಪಬ್ಲಿಕನ್ ಬೆಂಬಲ ಡೆಮಾಕ್ರಾಟಿಕ್ಸ್ ಗಳಿಗೆ ಸಿಗಬೇಕಾಗುತ್ತದೆ.

ಜನವರಿ 20 ರ ತನಕ ಸೆನೆಟ್ ವಿಚಾರಣೆ ಸಾಧ್ಯವೇ?

ಜನವರಿ 20 ರ ತನಕ ಸೆನೆಟ್ ವಿಚಾರಣೆ ಸಾಧ್ಯವೇ?

ಕಳೆದ ಎರಡು ಪ್ರಕರಣದಲ್ಲಿ ಹೌಸ್ ಆಫ್ ಕಾಂಗ್ರೆಸ್ ನಿಂದ ವಾಗ್ದಂಡನೆಗೆ ಆಂಡ್ರೂ ಜಾನ್ಸನ್ ಹಾಗೂ ಬಿಲ್ ಕ್ಲಿಂಟನ್ ಒಳಗಾಗಿದ್ದರು. ಇಬ್ಬರ ಅಧಿಕಾರ ಅವಧಿ ಇನ್ನೂ ಪೂರ್ಣಗೊಂಡಿರಲಿಲ್ಲ. ಜೊತೆಗೆ ಸೆನೆಟ್ ಬಲ ಸಿಕ್ಕಿತ್ತು. ಟ್ರಂಪ್ ಅವರ ವಿಚಾರಣೆ ನಡೆಸಲು ಒಂದು ವಾರ ಮಾತ್ರ ಅಧಿಕಾರ ಇರುವುದು ಅಡ್ಡಿಯಾಗಿದೆ. ಒಂದು ವೇಳೆ ವಿಶೇಷ ಅಧಿವೇಶನ ಕರೆದು ವಿಚಾರಣೆಗೆ ಒಳಪಡಿಸಿ ಟ್ರಂಪ್ ದೋಷಿ ಎಂದು ಸಾಬೀತು ಮಾಡಬಹುದು. ಹೀಗೆ ಮಾಡುವುದರಿಂದ ಇನ್ಮುಂದೆ ಶ್ವೇತಭವನದತ್ತ ಟ್ರಂಪ್ ಸುಳಿಯಲು ಸಾಧ್ಯವಾಗುವುದಿಲ್ಲ. ಜೊತೆಗೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳ್ಳಲಿದ್ದಾರೆ. ಟ್ರಂಪ್ ವಿರುದ್ಧ ಸೆನೆಟ್ ಬಹುಮತದಲ್ಲಿ ಮತ ಚಲಾಯಿಸಿದರೆ ಇದು ಸಾಧ್ಯವಿದೆ. ಇದೆಲ್ಲದರ ಹೊರತಾಗಿ ವಾಗ್ದಂಡನೆ ಮತದಾನದ ತನಕ ಕಾಯದೆ ಜನವರಿ 20ರೊಳಗೆ ಟ್ರಂಪ್ ರಾಜೀನಾಮೆ ಸಲ್ಲಿಸಬಹುದಾಗಿದೆ. ಆದರೆ, ಕ್ಷಮೆಯಾಚನೆ, ರಾಜೀನಾಮೆ ಸಲ್ಲಿಕೆ ಟ್ರಂಪ್ ಕಡೆಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ.

English summary
With the US House of Representatives impeach President Donald Trump for a second time -- just days before he is to leave office -- questions are being raised about what happens next.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X