ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಭವಿಷ್ಯಕ್ಕೆ ತನ್ನ ಕೈಯಾರೆ ಕೊಳ್ಳಿ ಇಟ್ಟುಕೊಂಡ ಟ್ರಂಪ್

|
Google Oneindia Kannada News

ಅತ್ತ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಅಂತಿಮ ಹಂತ ತಲುಪುತ್ತಿದ್ದರೆ, ಮತ್ತೊಂದು ಕಡೆ ಟ್ರಂಪ್ ರಾಜಕೀಯ ಭವಿಷ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು ಎದ್ದಿವೆ. ಅಮೆರಿಕದ ರಾಜಕೀಯ ತಜ್ಞರು, ಟ್ರಂಪ್‌ ಮಾಡಿಕೊಂಡ ಸ್ವಯಂಕೃತ ಅಪರಾಧದ ಬಗ್ಗೆ ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಕ್ಯಾಪಿಟಲ್ ಹಿಲ್' ದಾಳಿಯಿಂದ ಹಿಡಿದು, ವಾಗ್ದಂಡನೆವರೆಗೂ ಟ್ರಂಪ್ ಜೀವನದಲ್ಲಿ ಉಂಟಾದ ತಲ್ಲಣಗಳ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.

ಹಾಗಾದರೆ ಟ್ರಂಪ್ ರಾಜಕೀಯ ಭವಿಷ್ಯದ ಕಥೆ ಏನು..? ಈ ಪ್ರಶ್ನೆಗೆ ಉತ್ತರವೂ ಸ್ಪಷ್ಟವಾಗಿದೆ. ತನ್ನ ರಾಜಕೀಯ ಭವಿಷ್ಯಕ್ಕೆ ಟ್ರಂಪ್ ಕೈಯಾರೆ ಕೊಳ್ಳಿ ಇಟ್ಟುಕೊಂಡಿದ್ದಾರೆ. ಮನಸ್ಸಿಗೆ ಬಂದಂತೆ ವರ್ತಿಸುತ್ತಾ, 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಅಮೆರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದ ಟ್ರಂಪ್‌ಗೆ ಮುಟ್ಟಿದ್ದೆಲ್ಲ ಮುಳ್ಳಾಗುತ್ತಿದೆ.

ಟ್ರಂಪ್ ವಿರುದ್ಧ ವಾಗ್ದಂಡನೆ, ಮೇಲ್ಮನೆಯಲ್ಲೂ ಗೆಲುವು ಗ್ಯಾರಂಟಿ..?ಟ್ರಂಪ್ ವಿರುದ್ಧ ವಾಗ್ದಂಡನೆ, ಮೇಲ್ಮನೆಯಲ್ಲೂ ಗೆಲುವು ಗ್ಯಾರಂಟಿ..?

ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್‌ರ ಸಹಚರರು ನಡೆಸಿದ ದಾಳಿಯನ್ನು ಅಮೆರಿಕ ಸಂಸದರು ಪಕ್ಷ ಭೇದವನ್ನ ಮರೆತು ಖಂಡಿಸಿದ್ದರು. ಇದೀಗ ಸೆನೆಟ್‌ನಲ್ಲಿ ವಾಗ್ದಂಡನೆ ಚರ್ಚೆ ನಡೆಯುವ ಸಂದರ್ಭದಲ್ಲೂ ಟ್ರಂಪ್‌ರ ಎಡವಟ್ಟು ಮತ್ತು ಅಮೆರಿಕದ ವ್ಯವಸ್ಥೆಗೆ ಟ್ರಂಪ್ ಮಾಡಿದ ಘಾಸಿ ಮುನ್ನೆಲೆಗೆ ಬಂದಿದೆ. ಟ್ರಂಪ್‌ಗೆ ತಕ್ಕಪಾಠ ಕಲಿಸಬೇಕು ಎಂದು ಅಮೆರಿಕ ಸಂಸದರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಸೆನೆಟ್ ಒಳಗೆ ಟ್ರಂಪ್ ವಿಡಿಯೋ

ಸೆನೆಟ್ ಒಳಗೆ ಟ್ರಂಪ್ ವಿಡಿಯೋ

ಅಮೆರಿಕದ ಸೆನೆಟ್ ಹಿಂದೆ ಎಂದೂ ಕಾಣದ ಹಲವು ವಿಚಿತ್ರಗಳನ್ನ ಇದೀಗ ಕಾಣುತ್ತಿದೆ. ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದ್ದರೆ, ಮತ್ತೊಂದ್ಕಡೆ ಟ್ರಂಪ್ ಮಾಡಿದ ಎಡವಟ್ಟಿನ ವಿಡಿಯೋ ಕ್ಲಿಪ್‌ಗಳು ಸೆನೆಟ್‌ನ ಪ್ರೊಜೆಕ್ಟರ್‌ಗಳಲ್ಲಿ ರಾರಾಜಿಸುತ್ತಿವೆ. ಸೆನೆಟ್ ಸದಸ್ಯರು ಹಿಂಸಾಚಾರಕ್ಕೆ ಟ್ರಂಪ್ ಹೇಗೆಲ್ಲಾ ಪ್ರೋತ್ಸಾಹ ನೀಡಿದ್ದರು ಎಂಬುದನ್ನ ಪ್ರೂವ್ ಮಾಡಲು ಹಲವು ವಿಡಿಯೋ ಕ್ಲಿಪ್‌ಗಳನ್ನ ತೋರಿಸುತ್ತಿದ್ದಾರೆ. ಈ ಪೈಕಿ ಕ್ಯಾಪಿಟಲ್ ಹಿಲ್ ಗಲಾಟೆಗೂ ಮುನ್ನ ಟ್ರಂಪ್ ಮಾಡಿದ ಭಾಷಣದ ತುಣುಕು ಹೈಪ್ ಆಗುತ್ತಿದೆ.

ಟ್ರಂಪ್ ಬೆಂಬಲಿಗರ ಅಟ್ಟಹಾಸ..!

ಟ್ರಂಪ್ ಬೆಂಬಲಿಗರ ಅಟ್ಟಹಾಸ..!

ಬೇಕೆ ಬೇಕು ನ್ಯಾಯ ಬೇಕು, ಅನ್ಯಾಯ ಅನ್ಯಾಯ ಟ್ರಂಪ್‌ಗೆ ಅನ್ಯಾಯ ಅಂತೆಲ್ಲಾ ಟ್ರಂಪ್‌ರ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರುಚಾಟ ನಡೆಸುತ್ತಾ ಅಮೆರಿಕದ ಸಂಸತ್ ಸಭೆಗಳು ನಡೆಯುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಹಿಂಸಾಚಾರಕ್ಕೆ ಮುನ್ನ ಟ್ರಂಪ್ ತನ್ನ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎನ್ನಲಾಗುತ್ತಿದೆ. ಇದನ್ನು ಸಾಕ್ಷಿ ಸಮೇತ ತೋರಿಸಲು, ಟ್ರಂಪ್ ಮಾಡಿದ್ದ ಭಾಷಣ ಹಾಗೂ ಹಿಂಸಾಚಾರ ನಡೆಸಿದ್ದ ಟ್ರಂಪ್ ಬೆಂಬಲಿಗರ ಘೋಷಣೆಗಳ ನಡುವೆ ಸಾಮ್ಯತೆ ಹುಡುಕಲಾಗುತ್ತಿದೆ. ಎರಡನ್ನೂ ಹೋಲಿಕೆ ಮಾಡಿ, ಸೆನೆಟ್‌ನಲ್ಲಿ ಈ ವಿಡಿಯೋಗಳನ್ನು ಪ್ಲೇ ಮಾಡುತ್ತಿದ್ದಾರೆ ಸೆನೆಟ್ ಸದಸ್ಯರು.

ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು.

ಟ್ರಂಪ್ ರಾಜಕೀಯ ಭವಿಷ್ಯ ಖತಂ..?

ಟ್ರಂಪ್ ರಾಜಕೀಯ ಭವಿಷ್ಯ ಖತಂ..?

ಹೌದು, ಟ್ರಂಪ್ ತಮಗಾಗಿ ಉಳಿದಿದ್ದ ಕಡೆಯ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಟ್ರಂಪ್ ವಿರುದ್ಧ ಈಗ ನಡೆಯುತ್ತಿರುವ ವಾಗ್ದಂಡನೆ ಪ್ರಕ್ರಿಯೆ ಗೆದ್ದರೆ, ಟ್ರಂಪ್‌ ರಾಜಕೀಯ ಭವಿಷ್ಯವೇ ನಿರ್ಣಾಮವಾದಂತೆ. ಇದಕ್ಕೆ ರಿಚರ್ಡ್ ನಿಕ್ಸನ್, ಬಿಲ್ ಕ್ಲಿಂಟನ್ ಉದಾಹರಣೆ ಕಣ್ಣ ಮುಂದಿದೆ. ಅಮೆರಿಕದ ಇತಿಹಾಸ ಕಂಡಿರುವ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ರಿಚರ್ಡ್ ನಿಕ್ಸನ್. ಆದರೆ ನಿಕ್ಸನ್‌ರನ್ನೂ ಮೀರಿಸಿದ್ದ ಕೀರ್ತಿ ಟ್ರಂಪ್‌ಗೆ ಸಲ್ಲುತ್ತದೆ. ಹೀಗೆ ಎಡವಟ್ಟುಗಳ ಸರದಾರನಾಗಿ, ಸೋಷಿಯಲ್ ಮೀಡಿಯಾಗಳಿಂದಲೂ ಬ್ಯಾನ್ ಆಗಿರುವ ಟ್ರಂಪ್ ಮುಂದಿನ ದಿನಗಳಲ್ಲಿ ಹಲವು ರೀತಿಯ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಇದೆಲ್ಲವನ್ನೂ ಅಳೆದು, ತೂಗಿ ಹೇಳುವುದಾದರೆ ಟ್ರಂಪ್ ರಾಜಕೀಯ ಭವಿಷ್ಯ ಮುಗಿದಂತೆಯೇ.

English summary
US Senate begins the process of trump impeachment trial. But another side, Tens of questions have been raised about Trump's political future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X