ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO

|
Google Oneindia Kannada News

ವಾಷಿಂಗ್ಟನ್, ಜುಲೈ 15: ವಿಶ್ವಾದ್ಯಂತ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾವು ಕೊರೊನಾ ಸೋಂಕಿನ ಮೂರನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ತಿಳಿಸಿದ್ದಾರೆ.

ಒಂದೆಡೆ ಡೆಲ್ಟಾ ರೂಪಾಂತರಿ ಸಂಖ್ಯೆ ಹೆಚ್ಚುತ್ತಿದೆ, ಇನ್ನೊಂದೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ, ಕೋವಿಡ್ ನಿಯಮಗಳನ್ನು ಮರೆಯುತ್ತಿದ್ದಾರೆ ಇದು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ, ಹಾಗೆಯೇ ಮರಣ ಪ್ರಮಾಣವೂ ಅಧಿಕವಾಗುತ್ತಿದೆ ಎಂದಿದ್ದಾರೆ.

"ಮಿಕ್ಸ್‌ ಅಂಡ್ ಮ್ಯಾಚ್" ಕೊರೊನಾ ಲಸಿಕೆ ಪ್ರಯೋಗ; WHO ಎಚ್ಚರಿಕೆ ಕಡೆಗಣಿಸುತ್ತಿದೆಯೇ ಭಾರತ?

ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಯುರೋಪ್ ಹಾಗೂ ಅಮೆರಿಕದಲ್ಲಿ ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡಿ, ಸೋಂಕು ಪ್ರಮಾಣ, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು.

Were In Early Stages Of Third Wave, Warns WHO Amid Delta Surge: Report

ಇದರ ಮಧ್ಯೆಯೇ ಡೆಲ್ಟಾ ವೈರಸ್‌ನಿಂದಾಗಿ ಪತ್ತೆ ಸೋಂಕು ಹೆಚ್ಚಳವಾಗುತ್ತಿದೆ. ಡೆಲ್ಟಾ ರೂಪಾಂತರವು 111ಕ್ಕೂ ಹೆಚ್ಚು ದೇಶಗಳಲ್ಲಿದೆ. ಇದು ಈಗಾಗಲೇ ವಿಶ್ವಾದ್ಯಂತ ಹರಡಲು ಆರಂಭವಾಗಿದೆ.

ಕಳೆದ ವಾರ ಜಾಗತಿಕವಾಗಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸತತ ನಾಲ್ಕನೇ ವಾರ ಎಂದು ಗುರುತಿಸಲಾಗಿತ್ತು. ಇನ್ನೂ ಕೆಲವು ದೇಶಗಳಲ್ಲಿ ಇದುವರೆಗೂ ಕೊರೊನಾ ಲಸಿಕೆಯನ್ನು ಪಡೆದಿಲ್ಲ, ಹಾಗೂ ಒಂದೇ ಒಂದು ಡೋಸ್ ಲಸಿಕೆಯನ್ನೂ ಅಲ್ಲಿನ ಪ್ರಜೆಗಳು ಪಡೆದಿಲ್ಲ.

ಸೆಪ್ಟೆಂಬರ್ ವರೆಗೆ ಕನಿಷ್ಠ ಶೇ.10ರಷ್ಟು ಮಂದಿಯಾದರೂ ಲಸಿಕೆ ಪಡೆದಿರಬೇಕು, 2021ರ ಅಂತ್ಯದೊಳಗೆ ಶೇ.40ರಷ್ಟು ಮಂದಿ ಲಸಿಕೆ ಪಡೆದಿರಬೇಕು. 2022ರ ಮಧ್ಯದೊಳಗೆ ಶೇ.70ರಷ್ಟು ಮಂದಿ ಲಸಿಕೆ ಪಡೆದಿರಬೇಕು ಎಂದು ಟೆಡ್ರೋಸ್ ಹೇಳಿದ್ದಾರೆ.

English summary
World Health Organisation (WHO) chief Tedros Adhanom Ghebreyesus on Thursday warned the world about the 'early stages' of COVID-19 third wave amid Delta surge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X