ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾವೀಗ ಆರ್ಥಿಕ ಕುಸಿತದಲ್ಲಿದ್ದೇವೆ' ಎಂದ ಐಎಂಎಫ್ ಮುಖ್ಯಸ್ಥೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 29: ಕೊರೊನಾ ವೈರಾಣು ಎಂಬ ಜಾಗತಿಕ ಪಿಡುಗು ಜಗತ್ತಿನ ಆರ್ಥಿಕತೆಯನ್ನು ಇಳಿಜಾರಿನಲ್ಲಿ ಸಾಗುವಂತೆ ಮಾಡಿದೆ. ಇದಕ್ಕೆ ಈಗ ಮುಂದುವರಿದ ರಾಷ್ಟ್ರಗಳಿಗೆ ಸಹಾಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ಹಣದ ಅವಶ್ಯಕತೆ ಇದೆ ಎಂದು ವಿಶ್ವ ಹಣಕಾಸು ಸಂಸ್ಥೆಯ ಮುಖ್ಯಸ್ಥೆ (ಐಎಂಎಫ್) ಕ್ರಿಸ್ಟಲಿನಾ ಜಾರ್ಜಿವಾ ಶುಕ್ರವಾರ ಹೇಳಿದ್ದಾರೆ.

"ನಾವು ಆರ್ಥಿಕ ಕುಸಿತದ ಪರ್ವಕ್ಕೆ ಪ್ರವೇಶಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ" ಎಂದಿರುವ ಅವರು, ಇದು 2009 ಜಾಗತಿಕ್ ಆರ್ಥಿಕ ಬಿಕ್ಕಟ್ಟಿಗಿಂತ ಭೀಕರವಾಗಿ ಇರುತ್ತದೆ ಎಂದು ಅವರು ಆನ್ ಲೈನ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

50 ಸಾವಿರ ಕೋಟಿ ನೆರವು ನೀಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ50 ಸಾವಿರ ಕೋಟಿ ನೆರವು ನೀಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ

ವಾಷಿಂಗ್ಟನ್ ಮೂಲದ ಸಮಿತಿಯೊಂದರ ಜತೆ ಸಭೆ ನಡೆಸಿದ ಬಳಿಕ ವರದಿಗಾರರ ಜತೆಗೆ ಮಾತನಾಡಿದ್ದಾರೆ ತುರ್ತು ವ್ಯವಸ್ಥೆಯನ್ನು ಒದಗಿಸಲು ಹೆಚ್ಚಿನ ಹಣಕಾಸು ಅಗತ್ಯವಿದ್ದು, 50 ಬಿಲಿಯನ್ ಅಮೆರಿಕನ್ ಡಾಲರ್ ಗಾಗಿ ಅಧಿಕೃತವಾಗಿ ಆಕೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

We Have Entered Recession Said IMF President

ಕ್ರಿಸ್ಟಲಿನಾ ಹೇಳುವಂತೆ, ವಿಶ್ವದಾದ್ಯಂತ ಆರ್ಥಿಕತೆಯಲ್ಲಿ ದಿಢೀರ್ ತಡೆ ಬಂದಿದೆ. ಈಗ ಬೆಳೆಯುತ್ತಿರುವ ಮಾರುಕಟ್ಟೆಯ ಒಟ್ಟಾರೆ ಆರ್ಥಿಕ ಅಗತ್ಯವು ಅಂದಾಜು 2.5 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟಿದೆ. ಅದನ್ನು ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 175 ಲಕ್ಷ ಕೋಟಿ ರುಪಾಯಿಗೂ ಹೆಚ್ಚು.

2021ನೇ ಇಸವಿಯಲ್ಲೂ ಈಗಿನ ಪರಿಸ್ಥಿತಿಯಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಿಸಿಕೊಳ್ಳಬಹುದು. ಅದು ಎಲ್ಲ ಕಡೆಯೂ ಕೊರೊನಾ ವೈರಾಣು ಹತೋಟಿಗೆ ಬರಬೇಕು. ನಗದು ಸಮಸ್ಯೆ ತಡೆಯಬೇಕು. ಕಡಿಮೆ ಅದಾಯ ಇರುವ 80ಕ್ಕೂ ಹೆಚ್ಚು ರಾಷ್ಟ್ರಗಳಿವೆ. ಅವುಗಳು ತುರ್ತು ನೆರವಿಗಾಗಿ ವಿಶ್ವ ಹಣಕಾಸು ಸಂಸ್ಥೆಯನ್ನು ಕೇಳಿಕೊಂಡಿವೆ ಎಂದು ಆಕೆ ಹೇಳಿದ್ದಾರೆ.

ಅವರ ಬಳಿ ಇರುವ ಸ್ವಂತ ಮೀಸಲು ನಿಧಿ, ಸಂಪನ್ಮೂಲಗಳು ಸಾಕಾಗುವುದಿಲ್ಲ ಎಂಬುದು ನಮಗೆ ಗೊತ್ತಿದೆ ಎಂದಿರುವ ಅವರು, ಎಷ್ಟು ಬೇಗ ಹಣದ ನೆರವು ನೀಡಬಹುದೋ ಅಷ್ಟು ಬೇಗ, ಅಷ್ಟು ಹೆಚ್ಚು ನೀಡಬೇಕಾದ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಇದೆ ಎಂದು ಹೇಳಿದ್ದಾರೆ.

2.2 ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೆಜ್ ಗೆ ಮಂಜೂರು ಮಾಡಿದ ಯು.ಎಸ್. ಸೆನೆಟ್ ಅನ್ನು ಅವರು ಸ್ವಾಗತಿಸಿದ್ದಾರೆ. "ದಿಢೀರ್ ಆಗಿ ಆರ್ಥಿಕ ಚಟುವಟಿಕೆಗಳು ತಡೆ ಆಗುವುದರ ವಿರುದ್ಧ ವಿಶ್ವದ ಅತಿ ದೊಡ್ಡ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಇದು ತೀರಾ ಅಗತ್ಯ" ಎಂದಿದ್ದಾರೆ.

English summary
The world economy is facing "severe" economic damage from the coronavirus pandemic that could be even more costly than in 2009- IMF chief Kristalina Georgieva said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X