ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದ ಜೋ ಬಿಡೆನ್!

|
Google Oneindia Kannada News

ವಾಶಿಂಗ್ಟನ್, ನವೆಂಬರ್.07: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ 300 ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ನಮ್ಮ ಗೆಲುವು ಬಹುತೇಕ ಖಚಿತವಾಗಿದೆ. ಶೇ.96ರಷ್ಟು ಮತಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗಿಂತ ಮುನ್ನಡೆ ಸಾಧಿಸಿರುವ ಬಗ್ಗೆ ಜೋ ಬಿಡೆನ್ ತಿಳಿಸಿದ್ದಾರೆ.

ಯುಎಸ್ಎ ಮುಂದಿನ ಅಧ್ಯಕ್ಷ ಜೋ ಬೈಡನ್ : ನ್ಯಾನ್ಸಿ ಪೆಲೋಸಿ ಯುಎಸ್ಎ ಮುಂದಿನ ಅಧ್ಯಕ್ಷ ಜೋ ಬೈಡನ್ : ನ್ಯಾನ್ಸಿ ಪೆಲೋಸಿ

ಯುಎಸ್ಎ ಚುನಾವಣಾ ಫಲಿತಾಂಶವು ಬಲುಕಠಿಣವಾಗಿ ಎನ್ನುವುದು ನಮಗೆ ಗೊತ್ತಿದೆ. ಇದರ ನಡುವೆಯೂ ನಾವು ತಾಳ್ಮೆಯಿಂದಿದ್ದೇವೆ. ಈ ಫಲಿತಾಂಶವನ್ನು ತಡೆಯುವುದಕ್ಕೆ ಜನರು ಎಷ್ಟೇ ಹರಸಾಹಸ ಪಟ್ಟರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದ ಮೇಲೆ ನಮಗೆ ಬಲವಾದ ವಿಶ್ವಾಸವಿದೆ. ಆದರೆ ದೇಶಕ್ಕಾಗಿ ರಾಜಕೀಯ ಮಾಡುವುದು ಅಗತ್ಯವಾಗಿರುತ್ತದೆ. ನಾವು ಇಲ್ಲಿ ಸಾಕಷ್ಟು ಪ್ರತಿಸ್ಪರ್ಧಿಗಳನ್ನು ಹೊಂದಿದ್ದೇವೆ. ಆದರೆ ಅವರು ಪ್ರತಿಸ್ಪರ್ಧಿಗಳೇ ಹೊರತೂ ಶತ್ರುಗಳಲ್ಲ, ನಾವೆಲ್ಲ ಅಮೆರಿಕನ್ನರು ಎಂದು ಜೋ ಬಿಡೆನ್ ಹೇಳಿದ್ದಾರೆ.

We Are Winning From More Than 300 Electoral Votes, Says Joe Biden

ಪೆನ್ಸಿಲ್ವೇನಿಯಾದಲ್ಲಿ ಕಠಿಣ ಪೈಪೋಟಿ:

ಪೆನ್ಸಿಲ್ವೇನಿಯಾದಲ್ಲಿ 20 ಎಲೆಕ್ಟೋರಲ್ ಮತಗಳಿದ್ದು ಒಂದು ಹಂತದಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದರೆ ಅಂಚೆ ಮತಗಳ ಎಣಿಕೆ ಆರಂಭವಾಗುತ್ತಿದ್ದಂತೆ ಬಿಡೆನ್, ಟ್ರಂಪ್ ರನ್ನು ಹಿಂದಿಕ್ಕಿದ್ದಾರೆ. ಶೇ.49.60ರಷ್ಟು ಮತ ಪಡೆದಿರುವ ಜೋ ಬಿಡೆನ್ ಅವರ ಪರವಾಗಿ 33,37,069 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಪರವಾಗಿ 33,08,192 ಮತಗಳು ಬಂದಿದ್ದು, ಶೇ.49.20ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 264 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಗೆಲುವು ಸಾಧಿಸಿದ್ದೇ ಆದಲ್ಲಿ ಅಧ್ಯಕ್ಷೀಯ ಪಟ್ಟ ಅಲಂಕರಿಸುವುದು ಖಾತ್ರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2016ರವರೆಗೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಗಳನ್ನು ಶ್ವೇತಭವನಕ್ಕೆ ಕಳುಹಿಸುವ ನೀಲಿ ಗೋಡೆ ಎಂದೇ ಕರೆಯಲ್ಪಡುತ್ತಿತ್ತು. ಇನ್ನೊಂದು ಕಡೆಯಲ್ಲಿ ಮಿಚಿಗಾನ್ ಮತ್ತು ವಿಸ್ಕೊಂಸಿನ್ ನಲ್ಲಿ ಬಿಡೆನ್ ಗೆಲುವು ಸಾಧಿಸಿದ್ದಾರೆ. ಕಳೆದ 2016ರಲ್ಲಿ ಡೊನಾಲ್ಡ್ ಟ್ರಂಪ್ ಇದೇ ಪೆನ್ಸಿಲ್ವೇನಿಯಾದಲ್ಲಿ 44,300 ಮತಗಳಿಂದ ಗೆಲುವು ಸಾಧಿಸಿದ್ದರು.

English summary
US Presidential Election Updates: We Are Winning From More Than 300 Electoral Votes, Says Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X