ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಿಂದ ಎಫ್-16 ಯುದ್ಧ ವಿಮಾನ ದುರ್ಬಳಕೆ: ಅಮೆರಿಕ ಸೂಕ್ಷ್ಮ ಅವಲೋಕನ

|
Google Oneindia Kannada News

ವಾಷಿಂಗ್ಟನ್​, ಮಾರ್ಚ್ 6: ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಅಮೆರಿಕದ ಅನುಮತಿ ಇಲ್ಲದೆ ಎಫ್-16 ವಿಮಾನವನ್ನು ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಅವಲೋಕನ ಮಾಡುವುದಾಗಿ ಅಮೆರಿಕ ತಿಳಿಸಿದೆ.

ಪಾಕಿಸ್ತಾನ ಸೇನೆಯು ಅಮೆರಿಕದೊಂದಿಗಿನ ನಿಯಮಗಳನ್ನು ಮೀರಿ ಭಾರತೀಯ ಸೇನೆಯ ವಿರುದ್ಧ ಎಫ್​-16 ಯುದ್ಧ ವಿಮಾನಗಳನ್ನು ಬಳಕೆ ಮಾಡಿದೆ ಎಂದು ಭಾರತವು ಸಾಕ್ಷಿ ಸಹಿತ ಆರೋಪ ಮಾಡಿತ್ತು. ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳು ಮಂಗಳವಾರ ಸುದ್ದಿಗೋಷ್ಠಿಯೊಂದರಲ್ಲಿ ಅಮೆರಿಕ ಸರ್ಕಾರದ ಉಪ ವಕ್ತಾರ ರಾಬರ್ಟ್​ ಪಲ್ಲಾಡಿನೋ ತಿಳಿಸಿದ್ದಾರೆ.

'ಅಭಿನಂದನ್ ದೈಹಿಕ ಕ್ಷಮತೆ ಆಧಾರದಲ್ಲಿ ವೃತ್ತಿಗೆ ವಾಪಸ್''ಅಭಿನಂದನ್ ದೈಹಿಕ ಕ್ಷಮತೆ ಆಧಾರದಲ್ಲಿ ವೃತ್ತಿಗೆ ವಾಪಸ್'

ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್​-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

We are closely following reports of Pakistan using F-16 against India

ಯಾವುದನ್ನೂ ಖಚಿತಪಡಿಸುವುದಿಲ್ಲ. ಆದರೆ, ಎರಡು ದೇಶಗಳ ನಡುವೆ ನಡೆದಿರುವ ದ್ವಿಪಕ್ಷೀಯ ಒಪ್ಪಂದದ ಅಂಶಗಳನ್ನು ಸಾರ್ವಜನಿಕವಾಗಿ ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ, ಒಡಂಬಡಿಕೆಯಲ್ಲಿ ಅಮೆರಿಕದ ರಕ್ಷಣಾ ತಂತ್ರಜ್ಞಾನ ಅಡಕವಾಗಿರುತ್ತದೆ.

ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್

ಇತರ ದೇಶಗಳೊಂದಿಗೂ ಇದೇ ಒಪ್ಪಂದವನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ. ಪುಲ್ವಾಮಾದಲ್ಲಿ ಉಗ್ರರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತದ 40ಕ್ಕೂ ಯೋಧರು ಹುತಾತ್ಮತಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಬಾಲಕೋಟ್‌ನಲ್ಲಿ ಫೆ.24ರಂದು ಜೈಷ್ ಸಂಘಟನೆಯ ಅಡಗುತಾಣಗಳ ಮೇಲೆ ಪ್ರತಿ ದಾಳಿ ನಡೆಸಿತ್ತು. ಈ ವೇಳೆ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಎಫ್-16 ಯುದ್ಧ ವಿಮಾನ ಬಳಕೆ ಮಾಡಿತ್ತು. ಭಾರತವು ಆ ವಿಮಾನವನ್ನು ಹೊಡೆದುರುಳಿಸಿತ್ತು.

English summary
The US is "very closely" following the reports which have claimed that Pakistan misused American-made F-16 fighter jets against India in the recent aerial confrontation between the air forces of the two countries, a top State Department official has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X