ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಸ್ಟ್ ವಾಂಟೆಡ್ ಬಗ್ದಾದಿಯನ್ನು 'ಧರ್ಮಗುರು' ಎಂದು ನಗೆಪಾಟಲಾದ ವಾಷಿಂಗ್ಟನ್ ಪೋಸ್ಟ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 28: ಅಮೆರಿಕ ಸೇನಾ ಕಾರ್ಯಾಚರಣೆಗೆ ಹೆದರಿ ತನ್ನನ್ನು ತಾನು ಸ್ಫೋಟಿಸಿಕೊಂಡು ಹತನಾದ ಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್- ಬಗ್ದಾದಿಯನ್ನು 'ಧರ್ಮಗುರು' ಎಂದು ಬರೆಯುವ ಮೂಲಕ ವಾಷಿಂಗ್ಟನ್ ಪೋಸ್ಟ್ ನಗೆಪಾಟಲಿಗೀಡಾದ ಘಟನೆ ನಡೆಸಿದೆ.

ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರಂಗದೊಳಗೆ ಅವಿತಿದ್ದ ಬಗ್ದಾದಿ, ಅಮೆರಿಕ ಸೇನೆಯ ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮ, ಭಯಗೊಂಡು ಬೇರೆ ‌ ದಾರಿ ಕಾಣದ ತನ್ನ ಮೈಗೆ ಅಂಟಿಸಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ.

ಬಗ್ದಾದಿಗೆ ಆತ್ಮಹತ್ಯೆಗೆ ಕಾರಣ ಒಂದು ನಾಯಿ... ಟ್ರಂಪ್ ಹೇಳಿದ ಸತ್ಯಕತೆಬಗ್ದಾದಿಗೆ ಆತ್ಮಹತ್ಯೆಗೆ ಕಾರಣ ಒಂದು ನಾಯಿ... ಟ್ರಂಪ್ ಹೇಳಿದ ಸತ್ಯಕತೆ

ಈ ಘಟನೆಯ ವರದಿ ಮಾಡಿದ್ದ ವಾಷಿಂಗ್ಟನ್ ಪೋಸ್ಟ್, "Abu Bakr al-Baghdadi, austere religious scholar at the helm of Islamic State, dies at 48"(ಅಬು ಬಕರ್ ಅಲ್-ಬಗ್ದಾದಿ(48), ಇಸ್ಲಾಮಿಕ್ ಸ್ಟೇಟ್ ನ ಧಾರ್ಮಿಕ ವಿದ್ವಾಂಸ ಸಾವು) ಎಂಬ ತಲೆಬರಹ ನೀಡಿ ವರದಿಯನ್ನು ಬರೆದಿತ್ತು.

Washington Post calls Baghdadi, A austere religious scholar

ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಅಗ್ರಪಂಕ್ತಿಯಲ್ಲಿದ್ದ ಬಗ್ದಾದಿಯನ್ನು ಧರ್ಮಗುರು, ಧಾರ್ಮಿಕ ವಿದ್ವಾಂಸ ಎಂದು ಕರೆದ ವಾಂಷಿಂಗ್ಟನ್ ಪೋಸ್ಟ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಗೆಪಾಟಲಾಗುವ ಸಂದರ್ಭ ಎದುರಾಗಿತ್ತು.

ಅಮೆರಿಕ ದಾಳಿ ವೇಳೆ ಐಎಸ್ ಐಎಲ್ ನಾಯಕ ಅಬು ಬಕರ್ ಅಲ್- ಬಗ್ದಾದಿ ಆತ್ಮಹತ್ಯೆಅಮೆರಿಕ ದಾಳಿ ವೇಳೆ ಐಎಸ್ ಐಎಲ್ ನಾಯಕ ಅಬು ಬಕರ್ ಅಲ್- ಬಗ್ದಾದಿ ಆತ್ಮಹತ್ಯೆ

ಕೊನೆಗೆ ಆ ಶೀರ್ಷಿಕೆಯನ್ನು ಅದು ಬದಲಾಯಿಸಿತಾದರೂ, ಮೊದಲು ನೀಡಿದ್ದ ಶೀರ್ಷಿಕೆಯ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನೂ ಓಡಾಡುತ್ತಿದ್ದು, ವಿಶ್ವದ ಅಗ್ರ ಮಾಧ್ಯಮಗಳಲ್ಲೊಂದಾಗ ವಾಷಿಂಗ್ಟನ್ ಪೋಸ್ಟ್ ತೀವ್ರ ಮುಜುಗರಕ್ಕೀಡಾಗಿದೆ.

ಇಸ್ಲಾಂ ಕುರಿತು ಪಿಎಚ್ ಡಿ ಸಹ ಮಾಡಿದ್ದ ಬಗ್ದಾದಿ ಬಾಗ್ದಾದ್ ನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ. ಆದರೆ ನಂತರ ಹಾದಿ ಬದಲಿಸಿಕೊಂಡ ಆತ ತನ್ನನ್ನು ತಾನು 'ಧರ್ಮಗುರು' ಎಂದೇ ಘೋಷಿಸಿಕೊಂಡಿದ್ದ.

English summary
Washington Post calls Most Wanted Abu Bakr al-Baghdadi, A austere religious scholar, Trolls ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X