ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆ: ವಾಷಿಂಗ್ಟನ್ ಪೋಸ್ಟ್ - ಎಬಿಸಿ ಸಮೀಕ್ಷಾ ಫಲಿತಾಂಶ

|
Google Oneindia Kannada News

ವಾಷಿಂಗ್ಟನ್, ಆ 19: ಕೊರೊನಾ ಆರ್ಭಟದ ನಡುವೆಯೂ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎರಡು ಪ್ರಮುಖ ಪಕ್ಷಗಳು, ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.

ಉಪಾಧ್ಯಕ್ಷ ಹುದ್ದೆಯ ರೇಸ್ ನಲ್ಲಿರುವ ಡೆಮೊಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರ ಜನ್ಮಮೂಲವನ್ನು ರಿಪಬ್ಲಿಕನ್ ಪಕ್ಷದ ಮುಖಂಡರು ಕೆದಕುತ್ತಿದ್ದಾರೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಜೋ ಬಿಡನ್ ಮತ್ತು ಹ್ಯಾರಿಸ್ ನಾಮಪತ್ರ ಸಲ್ಲಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಕಿರಿಯ ಸೋದರ ರಾಬರ್ಟ್ ನಿಧನಡೊನಾಲ್ಡ್ ಟ್ರಂಪ್ ಕಿರಿಯ ಸೋದರ ರಾಬರ್ಟ್ ನಿಧನ

ಎರಡು ಪ್ರಮುಖ ರಾಜಕೀಯ ಪಕ್ಷಗಳು ತಮ್ಮತಮ್ಮ ಪಕ್ಷದ ರಾಷ್ಟ್ರೀಯ ಸಮಾವೇಶಗಳನ್ನು ಆರಂಭಿಸಲು ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ, ವಾಷಿಂಗ್ಟನ್ ಪೋಸ್ಟ್ ಮತ್ತು ಎಬಿಸಿ ನ್ಯೂಸ್ ಜಂಟಿಯಾಗಿ ನಡೆಸಿದ ಸಮೀಕ್ಷಾ ಫಲಿತಾಂಶ ಹೊರಬಿದ್ದಿದೆ.

ಸದ್ಯದ ಅಮೆರಿಕಾದ ಮತದಾರ ಮೂಡ್ ಪ್ರಕಾರ, ಶ್ವೇತಭವನದಲ್ಲಿ ಡೆಮೊಕ್ರೆಟಿಕ್ ಪಕ್ಷ ತಮ್ಮ ಛಾಪು ಬೀರುವ ಸಾಧ್ಯತೆಯಿದೆ. ರೇಸ್ ನಲ್ಲಿ ಆ ಪಕ್ಷದ ನಾಯಕರು ಮುನ್ನಡೆಯನ್ನು ಸಾಧಿಸುತ್ತಿದ್ದಾರೆ.

'ನಿಮ್ಮ ಸುಳ್ಳುಗಳ ಬಗ್ಗೆ ನಿಮಗೆ ವಿಷಾದವಿಲ್ಲವೇ?': ಪತ್ರಕರ್ತನ ಪ್ರಶ್ನೆಗೆ ಟ್ರಂಪ್ ಕಕ್ಕಾಬಿಕ್ಕಿ'ನಿಮ್ಮ ಸುಳ್ಳುಗಳ ಬಗ್ಗೆ ನಿಮಗೆ ವಿಷಾದವಿಲ್ಲವೇ?': ಪತ್ರಕರ್ತನ ಪ್ರಶ್ನೆಗೆ ಟ್ರಂಪ್ ಕಕ್ಕಾಬಿಕ್ಕಿ

ಚೆನ್ನೈ ಮೂಲದ ಕಮಲಾ ಹ್ಯಾರಿಸ್

ಚೆನ್ನೈ ಮೂಲದ ಕಮಲಾ ಹ್ಯಾರಿಸ್

ಡೆಮಾಕ್ರೆಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಚೆನ್ನೈ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾದ ನಂತರ, ಅವರ ಜನಪ್ರಿಯತೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ, ರಿಪಬ್ಲಿಕನ್ ಪಾರ್ಟಿಯವರು ಅವರ ಜನ್ಮಮೂಲವನ್ನು ಕೆದಕಲು ಆರಂಭಿಸಿದ್ದರು.

ಡೆಮಾಕ್ರೆಟಿಕ್ ಪಕ್ಷದ ಬಿಡನ್ ಮತ್ತು ಹ್ಯಾರಿಸ್

ಡೆಮಾಕ್ರೆಟಿಕ್ ಪಕ್ಷದ ಬಿಡನ್ ಮತ್ತು ಹ್ಯಾರಿಸ್

ನೊಂದಾಯಿತ ಮತದಾರರ ವರ್ಗದಲ್ಲಿ ಡೆಮಾಕ್ರೆಟಿಕ್ ಪಕ್ಷದ ಬಿಡನ್ ಮತ್ತು ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಟ್ರಂಪ್ ಮತ್ತು ಪೆನ್ಸ್ ವಿರುದ್ದ ಪ್ರತಿಶತ ಶೇ. 53ರಷ್ಟು ಮುನ್ನಡೆಯಲಿದ್ದಾರೆ. ಟ್ರಂಪ್ ಪರವಾಗಿ ಪ್ರತಿಶತ ಶೇ. 41 ಒಲವಿದೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ಎಬಿಸಿ ನ್ಯೂಸ್ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಬಿಡನ್ ಸ್ವಲ್ಪ ಮುನ್ನಡೆಯಲ್ಲಿದ್ದಾರೆ

ಬಿಡನ್ ಸ್ವಲ್ಪ ಮುನ್ನಡೆಯಲ್ಲಿದ್ದಾರೆ

ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಗೂ ಈಗಿನ ಸಮೀಕ್ಷೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಧ್ಯಕ್ಷ ಹುದ್ದೆಗೆ ಯಾರು ಸೂಕ್ತ ಎನ್ನುವ ಪ್ರಶ್ನೆಗೆ ಬಿಡನ್ ಸ್ವಲ್ಪ ಮುನ್ನಡೆಯಲ್ಲಿದ್ದಾರೆಂದು ಸರ್ವೇಯಲ್ಲಿ ಹೇಳಲಾಗಿದೆ. ಆದರೆ, ಕೊರೊನಾ ಹಾವಳಿ ಆರಂಭವಾದ ನಂತರ, ಬಿಡನ್ ಪ್ರಭಾವ ಹೆಚ್ಚಾಗುತ್ತಿದೆ.

ಕೊರೊನಾ ವಿಚಾರದಲ್ಲಿ ಟ್ರಂಪ್ ಜನಪ್ರಿಯತೆ ಕುಗ್ಗಿಸಿಕೊಂಡಿದ್ದಾರೆ

ಕೊರೊನಾ ವಿಚಾರದಲ್ಲಿ ಟ್ರಂಪ್ ಜನಪ್ರಿಯತೆ ಕುಗ್ಗಿಸಿಕೊಂಡಿದ್ದಾರೆ

ಇನ್ನು ಆಫ್ರಿಕನ್ ವೋಟರ್ಸ್ ಅವರ ಹೆಚ್ಚಿನ ಬೆಂಬಲ ಕಮಲಾ ಹ್ಯಾರಿಸ್ ಪರವಾಗಿದೆ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಟ್ರಂಪ್ ತಮ್ಮ ಜನಪ್ರಿಯತೆಯನ್ನು ಭಾರೀ ಪ್ರಮಾಣದಲ್ಲಿ ಕುಗ್ಗಿಸಿಕೊಂಡಿದ್ದಾರೆ. ಇನ್ನು ಹ್ಯಾರಿಸ್ ಅವರ ಜನ್ಮಮೂಲವನ್ನು ಕೆದಕುತ್ತಿರುವುದು ಟ್ರಂಪ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.

English summary
Washington Post - ABC Poll Survey Report On USA General Elections 2020,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X