ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಭದ್ರತಾ ವಲಯದಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದ ಕೋಳಿ ಬಂಧನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಕೆಲವೊಂದು ದೇಶಗಳಲ್ಲಿರುವ ನಿಯಮವೇ ವಿಚಿತ್ರ, ಭದ್ರತಾ ವಲಯದಲ್ಲಿ ಮನುಷ್ಯರಲ್ಲ ಪ್ರಾಣಿಗಳು ಆಗಮಿಸಿದರೂ ಬಂಧನ ಗ್ಯಾರಂಟಿ. ಅಮೆರಿಕಾದ ಪೆಂಟಗಾನ್‌ನಲ್ಲಿ ತುಂಟ ಕೋಳಿಯೊಂದು ಭದ್ರತಾ ವಲಯದಲ್ಲಿ ಜಾಲಿಯಾಗಿ ಸುತ್ತುತ್ತಿತ್ತು ಈ ಕೋಳಿಯ ಬಂಧಿಸಿರುವ ಘಟನೆ ವರದಿಯಾಗಿದೆ.

ಭದ್ರತಾ ವಲಯ ಅಂದರೆ ಅಲ್ಲಿನ ನಿಯಮಗಳ ಕುರಿತು ವಿವರಿಸಬೇಕಾಗಿಲ್ಲ, ಸ್ವತಃ ಅಲ್ಲಿನ ಸಿಬ್ಬಂದಿಗಳೇ ಒಳಗೆ ಸೇರುವುದು ಕಷ್ಟ, ಅದು ಯಾವುದೇ ದೇಶವಿರಲಿ, ಭದ್ರತಾ ವಲಯಗಳಲ್ಲಿ ವಿಶೇಷ ನಿಯಮಗಳಿರುತ್ತವೆ.

ಅಲ್ಲಿನ ಆಸುಪಾಸಿನಲ್ಲಿ ಅನುಸರಿಸಲೇಬೇಕಾದ ನಿಯಮಗಳಿರುತ್ತವೆ. ಇದೀಗ ಅಮೆರಿಕದ ಪೆಂಟಗಾನ್‌ನ ತುಂಟ ಕೋಳಿ ಸರಿಯಾಗಿ ಸಿಕ್ಕಿ ಹಾಕಿಕೊಂಡಿದೆ. ಆದರೆ ಪ್ರಾಣಿಗಳಿಗೇನು ನಿಯಮ.

Chicken

ವಿಶ್ವಾದ್ಯಂತ ರಾಷ್ಟ್ರಗಳು ಅನುಸರಿಸುವ ನಿಯಮಗಳು ಬಹಳಷ್ಟು ಭಿನ್ನವಾಗಿವೆ. ಕೆಲವು ಕೆಲವು ಕ್ರೂರ, ಇನ್ನೂ ಕೆಲವು ಫನ್ನಿಯಾಗಿರುತ್ತವೆ, ಆದರೆ ನಿಯಮಗಳನ್ನು ಫಾಲೋ ಮಾಡುವಾಗ ಬಹಳಷ್ಟು ಅದನ್ನು ಒಪ್ಪಲು ಸಾಧ್ಯವಾಗುವುದಿಲ್ಲ.

ಪೆಂಟಗಾನ್‌ನಲ್ಲಿರುವ ಅಮೆರಿಕಾದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ಸುತ್ತಮುತ್ತ ಬೆಳ್ಳಂಬೆಳಗ್ಗೆ ಸುತ್ತುತ್ತಿದ್ದ ಕೋಳಿಯನ್ನು ಅಧಿಕಾರಿಗಳು ಕಂಡಿದ್ದಾರೆ. ಏರ್‌ಲಿಂಗ್ಟನ್ ವರ್ಜಿನಿಯಾದ ಪ್ರಾಣಿ ಸಂರಕ್ಷಣಾ ಸಂಘ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಅಂದ ಹಾಗೆ ಕೋಳಿ ರೋಡ್ ಕ್ರಾಸ್ ಮಾಡಿದ್ದು ಪೆಂಟಗಾನ್‌ಗೆ ಬರುವುದಕ್ಕಂತೆ. ನಂತರ ವ್ಯಕ್ತಿಯೊಬ್ಬರು ಕೋಳಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಂಘಟನೆಯ ವಕ್ತಾರ ಚೆಸ್ಲಿಯಾ ಜೋನ್ಸ್ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಕೋಳಿ ಸಿಕ್ಕಿಕೊಂಡಿರುವ ಸ್ಥಳದ ಮಾಹಿತಿಯನ್ನು ರಿವೀಲ್ ಮಾಡಲು ಸಾಧ್ಯವಿಲ್ಲ. ಇದು ಸೆಕ್ಯುರಿಟಿ ಚೆಕ್ ಪಾಯಿಂಟ್‌ನಲ್ಲಿತ್ತು ಎಂದಷ್ಟೇ ಹೇಳಬಲ್ಲೆವು ಎಂದಿದ್ದಾರೆ. ಕೋಳಿ ಎಲ್ಲಿಂದ ಬಂತು, ಪೆಂಟಗಾನ್‌ಗೆ ಹೇಗೆ ಬಂತು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕೋಳಿಗೆ ಹೆನ್ನಿ ಪೆನ್ನಿ ಎಂದು ಹೆಸರಿಡಲಾಗಿದ್ದು, ಈ ಹೆಸರು ಸ್ಕೈ ಈಸ್ ಫಾಲಿಂಗ್ ಜನಪದ ಕಥೆಯಲ್ಲಿ ಬರುವಂತಹ ಹೆಸರು ಇದಾಗಿದೆ. ಕೋಳಿ ಸದ್ಯ ಎಲ್ಲೆಡೆ ಖ್ಯಾತಿಯನ್ನು ಗಳಿಸಿದೆ.

ಜಿಮ್ಮಿ ಫಾಲನ್ ಕೋಳಿ ಬಗ್ಗೆ 'ದಿ ಟುನೈಟ್ ಶೋ' ನಲ್ಲಿ ಒಂದು ಸಾಂಗ್ ಪ್ರೆಸಂಟ್ ಮಾಡಿದ್ದಾರೆ. ಪಶ್ಚಿಮ ವರ್ಜೀನಿಯಾದಲ್ಲಿ ಸಣ್ಣ ಫಾರ್ಮ್ ಹೊಂದಿರುವ ಸಿಬ್ಬಂದಿಯೊಬ್ಬರು ಹೆನ್ನಿ ಪೆನ್ನಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋನ್ಸ್ ಹೇಳಿದ್ದಾರೆ.

Recommended Video

ಮಾರುಕಟ್ಟೆಗೆ ಬಂತು ಬರೀ ಮೂಗನ್ನು ಮುಚ್ಚಿಕೊಳ್ಳೊ‌ ಮಾಸ್ಕ್,ಇದ್ರ‌ ಸ್ಪೆಷಾಲಿಟಿ ಏನು? | Oneindia Kannada

ಬ್ರೌನ್ ಕಲರ್ ಗರಿಗಳನ್ನು ಹೊಂದಿದ್ದ, ಕೆಂಬಣ್ಣದ ಜುಟ್ಟಿನ ಚಂದದ ಕೋಳಿಯ ಬಣ್ಣ ರೋಡ್ ಐಲ್ಯಾಂಡ್ ರೆಡ್. ಮುದ್ದಾಗಿದ್ದ ಕೋಳಿ ಬಹಳ ಹೆದರಿಕೊಂಡಿತ್ತು, ಆದರೂ ಒಂದಷ್ಟು ಜನರಿಗೆ ಅದನ್ನು ಮುದ್ದು ಮಾಡುವುದಕ್ಕೆ ಅವಕಾಶ ಕೊಟ್ಟಿತ್ತು ಎಂದಿದ್ದಾರೆ ಜೋನ್ಸ್.

English summary
Why did the chicken cross the road? To break into the Pentagon, apparently. Or is it now the Hentagon – and is America about to have a new peck-retary of defense?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X