ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡೆನ್‌ಗೆ ಪುಟಿನ್ ವಾರ್ನಿಂಗ್, ಟ್ರಂಪ್‌ಗೆ ರಷ್ಯಾ ಸಪೋರ್ಟ್!

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ 26 ದಿನಗಳು ಬಾಕಿ ಇರುವಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಹೇಗೆ ರಷ್ಯಾ ವಿರೋಧಿ ನಡೆ ಹೊಂದಿದ್ದಾರೆ ಎಂಬುದನ್ನ ಪುಟಿನ್ ವಿವರಿಸಿದ್ದಾರೆ. ಅಲ್ಲದೆ ಟ್ರಂಪ್ ಅಧಿಕಾರದಲ್ಲಿದ್ದರೆ ರಷ್ಯಾ, ಅಮೆರಿಕ ಬಾಂಧವ್ಯ ಗಟ್ಟಿಯಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಪುಟಿನ್ ಟ್ರಂಪ್‌ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಒಂದಾನೊಂದು ಕಾಲದಲ್ಲಿ ರಷ್ಯಾ-ಅಮೆರಿಕ ಶತ್ರುಗಳಂತೆ ಕಾದಾಡಿದ್ದವು. ಆದರೆ 1991ರಲ್ಲಿ ಸೋವಿಯತ್ ರಷ್ಯಾ ವಿಭಜನೆ ನಂತರ ಶೀತಲ ಸಮರ ಅಂತ್ಯವಾಗಿತ್ತು, ಅಮೆರಿಕ ಜಗತ್ತಿಗೆ ಬಾಸ್ ಆಗಿತ್ತು. ಇತ್ತೀಚಿನ ದಿನಗಳಲ್ಲಿ ರಷ್ಯಾ ಹಾಗೂ ಚೀನಾ ಒಗ್ಗಟ್ಟಿನಿಂದ ಅಮೆರಿಕದ ಬಲ ಕುಗ್ಗಿಸುವುದಕ್ಕೆ ಪ್ರಯತ್ನಿಸುತ್ತಿವೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಈ ಬೆಳವಣಿಗೆಗಳ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಗ್ಗೆ ಪುಟಿನ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ರಷ್ಯಾ ಸರ್ಕಾರಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುಟಿನ್, ಬಿಡೆನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಡೆನ್ ಹೇಗೆ ರಷ್ಯಾ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ, ಹಾಗೇ ರಷ್ಯಾ ಬಗ್ಗೆ ಬಿಡೆನ್ ಭಾವನೆ ಏನೆಂಬುದು ನನಗೆ ಗೊತ್ತು ಎನ್ನುವ ಮೂಲಕ ಪರೋಕ್ಷವಾಗಿ ಪುಟಿನ್ ಬಿಡೆನ್‌ಗೆ ವಾರ್ನ್ ಮಾಡಿದ್ದಾರೆ.

‘ನಮ್ಮ ಮಾತು ಕೇಳಲಿಲ್ಲ ಅಮೆರಿಕ’

‘ನಮ್ಮ ಮಾತು ಕೇಳಲಿಲ್ಲ ಅಮೆರಿಕ’

ಪುಟಿನ್ ಬಿಡೆನ್ ವಿಚಾರದ ಜೊತೆಯಲ್ಲೇ ಮತ್ತೊಂದು ಪ್ರಮುಖ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಪರಸ್ಪರ ಚುನಾವಣೆಗಳಲ್ಲಿ ಹಸ್ತಕ್ಷೇಪವಾಗದಂತೆ ಅಮೆರಿಕದ ಜೊತೆ ಒಪ್ಪಂದಕ್ಕೆ ಮುಂದಾಗಿದ್ದೆವು, ಆದರೆ ಈ ಕುರಿತು ವೈಟ್‌ಹೌಸ್ ಆಸಕ್ತಿ ತೋರಲಿಲ್ಲ ಎನ್ನುವ ಮೂಲಕ ರಷ್ಯಾ ಹಾಗೂ ಅಮೆರಿಕ ಸಂಬಂಧ ಹಳಸುತ್ತಿರುವ ಬಗ್ಗೆ ಮತ್ತೆ ಮುನ್ಸೂಚನೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಷ್ಯಾ ಹ್ಯಾಕರ್ಸ್ ಭಯ ಕಾಡುತ್ತಿದೆ. ಅಮೆರಿಕ ಮತದಾರರ ಡೇಟಾ ಕದ್ದು, ಟ್ರಂಪ್ ಗೆಲುವಿಗಾಗಿ ರಷ್ಯನ್ ಹ್ಯಾಕರ್ಸ್ ಗ್ಯಾಂಗ್ ಸ್ಕೆಚ್ ಹಾಕಿದೆ ಎಂಬ ಅನುಮಾನವೂ ಮೂಡಿದೆ. ಏಕೆಂದರೆ 2016ರ ಚುನಾವಣೆಯಲ್ಲೂ ಇದೇ ರೀತಿ ಆಗಿತ್ತು ಎಂಬುದಕ್ಕೆ ಬಲವಾದ ಸಾಕ್ಷ್ಯಗಳು ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ಲಭ್ಯವಾಗಿದ್ದವು.

 ಹಿಲರಿ ಸೋಲಿಗೆ ರಷ್ಯಾ ಕಾರಣ..?

ಹಿಲರಿ ಸೋಲಿಗೆ ರಷ್ಯಾ ಕಾರಣ..?

ಈ ಪ್ರಶ್ನೆ 2016ರಿಂದ ಕಾಡುತ್ತಾ ಬಂದಿದ್ದರೂ, ಸ್ಪಷ್ಟವಾದ ಉತ್ತರ ಇನ್ನೂ ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಸಾಕ್ಷಾಧಾರ ಕೊರತೆ. ಅಂದ ಹಾಗೆ 2016ರಲ್ಲಿ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್ ಎದುರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿದ್ದರು. 2016ರ ಚುನಾವಣೆಯಲ್ಲಿ ಹಿಲರಿ ಹೀನಾಯ ಸೋಲು ಕಂಡರೆ, ಟ್ರಂಪ್ ಗೆದ್ದು ಅಧಿಕಾರ ಹಿಡಿದಿದ್ದರು. ಆದರೆ 2016ರ ಚುನಾವಣೆಯಲ್ಲಿ ರಷ್ಯಾ ಹ್ಯಾಕರ್ಸ್ ಟ್ರಂಪ್ ಪರವಾಗಿ ಕೆಲಸ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಟ್ರಂಪ್‌ ಗೆಲುವಿಗೆ ವ್ಲಾದಿಮಿರ್ ಪುಟಿನ್ ಪಡೆ ಸಾಕಷ್ಟು ಶ್ರಮಿಸಿತ್ತು ಎನ್ನಲಾಗಿತ್ತು. ಅಮೆರಿಕ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪದ ಬಗ್ಗೆ ಕೆಲ ಪುರಾವೆಗಳು ಸಿಕ್ಕರೂ, ಅದನ್ನು ರಷ್ಯಾ ಒಪ್ಪದೆ ಇದು ಜೊಳ್ಳು ಆರೋಪ ಎಂದಿತ್ತು.

ಆಕಾಶದಿಂದ ಬೀಳಲಿದೆ ಮತ, ನಾಸಾ ವಿಜ್ಞಾನಿಗೂ ವೋಟಿಂಗ್ ಪವರ್..!ಆಕಾಶದಿಂದ ಬೀಳಲಿದೆ ಮತ, ನಾಸಾ ವಿಜ್ಞಾನಿಗೂ ವೋಟಿಂಗ್ ಪವರ್..!

ಈಗಲೂ ಟ್ರಂಪ್ ಪರ ರಷ್ಯಾ ಕೆಲಸ..?

ಈಗಲೂ ಟ್ರಂಪ್ ಪರ ರಷ್ಯಾ ಕೆಲಸ..?

ರಷ್ಯಾದ ಮಿಲಿಟರಿ ಮಾತ್ರ ಬಲಶಾಲಿಯಾಗಿಲ್ಲ, ರಷ್ಯಾ ಸೈಬರ್ ಪಡೆ ಕೂಡ ಪವರ್‌ಫುಲ್. ಈ ವಿಚಾರದಲ್ಲಿ ರಷ್ಯಾ ಹ್ಯಾಕರ್ಸ್‌ ಚೀನಾಗಿಂತಲೂ ಬುದ್ಧಿಶಾಲಿಗಳು. ಸ್ವತಃ ಇಂಟಲಿಜೆಂಟ್ ಏಜೆಂಟ್ ಆಗಿದ್ದ ಪುಟಿನ್ ತಮ್ಮ ಅಧಿಕಾರವಧಿಯಲ್ಲಿ ಹ್ಯಾಕರ್ಸ್ ಗ್ಯಾಂಗ್‌ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಂತಹ ಪವರ್‌ಫುಲ್ ಹ್ಯಾಕರ್ಸ್ ಗ್ಯಾಂಗ್ ಈಗಾಗಲೇ ಬಿಡೆನ್ ಹಾಗೂ ಟ್ರಂಪ್ ಬೆಂಬಲಿಗರ ಡೇಟಾ ಕದ್ದಿದೆ ಎಂಬ ಗಂಭೀರ ಆರೋಪವಿದೆ. ಇದಕ್ಕೆ ವೈಟ್‌ಹೌಸ್ ಸಾಕ್ಷಗಳನ್ನೂ ನಿಡಿದೆ. ಇಷ್ಟೇ ಅಲ್ಲ ಅಮೆರಿಕದ ನ್ಯೂಕ್ಲಿಯರ್ ಪ್ಲಾಂಟ್, ನೀರು ಪೂರೈಕೆ ವ್ಯವಸ್ಥೆಯನ್ನೇ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆಯಂತೆ. ಇನ್ನೂ ಹ್ಯಾಕರ್ಸ್‌ ತಮ್ಮ ಕೆಲಸದಲ್ಲಿ ಭಾಗಶಃ ಯಶಸ್ಸನ್ನೂ ಕಂಡಿದ್ದಾರೆ ಎಂಬುದು ಶ್ವೇತಭವನದ ಆರೋಪವಾಗಿದೆ. ಅಂದಹಾಗೆ ಈ ಎಲ್ಲಾ ಬೆಳವಣಿಗೆಗಳು ಟ್ರಂಪ್ ಮರು ಆಯ್ಕೆಗೆ ರಷ್ಯಾ ಅಧ್ಯಕ್ಷ ಪುಟಿನ್ ಯತ್ನಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.

ಡೊನಾಲ್ಡ್ ಟ್ರಂಪ್ ಏನಂತಾರೆ..?

ಡೊನಾಲ್ಡ್ ಟ್ರಂಪ್ ಏನಂತಾರೆ..?

ಇದು ಅಮೆರಿಕದ ಆರ್ಥಿಕತೆಯಂತೆ ಟ್ರಿಲಿಯನ್ ಡಾಲರ್ ಪ್ರಶ್ನೆ. ಏಕೆಂದರೆ ಅಮೆರಿಕ ಇಡೀ ಜಗತ್ತಿಗೆ ಬಾಸ್ ಆಗಿದೆ ಎಂದಾದರೆ ಆ ದೇಶದ ಅಧ್ಯಕ್ಷ ಬಾಸ್ ಸ್ಥಾನದಲ್ಲಿ ಕೂರುವ ಪವರ್‌ಫುಲ್ ವ್ಯಕ್ತಿಯಾಗಿರುತ್ತಾನೆ. ಆದರೆ 2016ರಲ್ಲಿ ಟ್ರಂಪ್ ಆಯ್ಕೆಯಾಗಿ ಬಂದಾಗಿನಿಂದಲೂ ಅವರ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಟ್ರಂಪ್ ರಷ್ಯಾ ಪರ ಮೃದುಧೋರಣೆ ತಳೆಯುತ್ತಿದ್ದಾರೆ ಎಂದು ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದೂ ಇದೆ. ಆದರೆ ಇದ್ಯಾವುದಕ್ಕೂ ಟ್ರಂಪ್ ತಲೆಕೆಡಿಸಿಕೊಂಡ ವ್ಯಕ್ತಿಯಲ್ಲ. ತಮ್ಮ ಆಯ್ಕೆಯಲ್ಲಿ ರಷ್ಯಾದ ಕೈವಾಡ ಇದೆ ಎಂಬ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಲು ಟ್ರಂಪ್ ಸಿದ್ಧರಿಲ್ಲ. ತಮ್ಮ ಬಗ್ಗೆ ಆರೋಪ ಮಾಡುತ್ತಿರುವವರೇ ಸುಳ್ಳುಗಾರರು ಎನ್ನುವ ಮೂಲಕ ಒನ್‌ಲೈನ್ ಆನ್ಸರ್ ನೀಡಿ ಸುಮ್ಮನಾಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಅಮೆರಿಕದ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪುಟಿನ್ ಶತ್ರು ನವಲ್ನಿ ಕೊಲೆಗೆ ರಷ್ಯಾ ಗುಪ್ತಚರ ಸಂಸ್ಥೆ ಸ್ಕೆಚ್..?ಪುಟಿನ್ ಶತ್ರು ನವಲ್ನಿ ಕೊಲೆಗೆ ರಷ್ಯಾ ಗುಪ್ತಚರ ಸಂಸ್ಥೆ ಸ್ಕೆಚ್..?

English summary
Vladimir Putin said he knows how Biden is an anti-Russian. Through this Putin has warned Biden, the Democratic party candidate for the US presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X