ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಕ್ಸಿನ್ ಪಡೆಯುವ ಯುವಕರಿಗೆ 7500 ರೂಪಾಯಿ ಬಹುಮಾನ ಘೋಷಣೆ..!

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 27: ಕೊರೊನಾ ಮಹಾಮಾರಿ ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ ವ್ಯಾಕ್ಸಿನ್ ರಾಮಬಾಣವಾಗಿದೆ. ಹೀಗಾಗಿ ಲಸಿಕೆ ಪಡೆಯುವ ಯುವಕರಿಗೆ 7500 ರೂಪಾಯಿ ನೀಡುವುದಾಗಿ ಘೋಷಿಸಿದೆ ಅಮೆರಿಕದ ವರ್ಜೀನಿಯ. ಜುಲೈ 4ರ ಒಳಗೆ ಕೊರೊನಾ ತೊಲಗಿಸಲು ಅಮೆರಿಕ ಅಧ್ಯಕ್ಷ ಬೈಡನ್ ಪಣತೊಟ್ಟಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಅಮೆರಿಕನ್ನರಿಗೆ ಸೋಂಕಿನಿಂದ ಸ್ವಾತಂತ್ರ್ಯ ಸಿಗಬೇಕಿದೆಂದು ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಇದಕ್ಕಾಗಿ ಅಮೆರಿಕದಲ್ಲಿ ಉಚಿತ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಅದ್ರಲ್ಲೂ ವರ್ಜೀನಿಯ ವ್ಯಾಕ್ಸಿನ್ ವಿತರಣೆಯಲ್ಲಿ ಅಮೆರಿಕದ ಇತರ ರಾಜ್ಯಗಳಿಗಿಂತ ಮುಂದಿದೆ. ಆದರೆ ಇತ್ತೀಚೆಗೆ ಯುವಕರು ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಕೊವಿಡ್ 19: ಏಪ್ರಿಲ್ 27ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?ಕೊವಿಡ್ 19: ಏಪ್ರಿಲ್ 27ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?

ಹೀಗಾಗಿ ಉಚಿತವಾಗಿ ಲಸಿಕೆ ಪಡೆದವರಿಗೆ ಸುಮಾರು 7500 ರೂಪಾಯಿ ನೀಡಲು ವರ್ಜೀನಿಯ ಮುಂದಾಗಿದೆ. ಯುವಕರು ಅಮೆರಿಕ ಭವಿಷ್ಯ ರೂಪಿಸಬೇಕಿದೆ. ಆದರೆ ಅವರಲ್ಲಿ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಸಿಕೆ ಪಡೆಯಲು ಯುವ ಸಮುದಾಯವನ್ನು ಆಕರ್ಷಿಸಿ, ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ ವರ್ಜೀನಿಯ ಅಧಿಕಾರಿಗಳು.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು

ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ.

5 ಲಕ್ಷ 80 ಸಾವಿರಕ್ಕೂ ಹೆಚ್ಚು ಜನ ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 3 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು.

ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

 3 ಕೋಟಿ ಕೊರೊನಾ ಸೋಂಕಿತರು..!

3 ಕೋಟಿ ಕೊರೊನಾ ಸೋಂಕಿತರು..!

ಅಮೆರಿಕದ ಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಜಗತ್ತಿನಾದ್ಯಂತ 14 ಕೋಟಿ 87 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, ಕೇವಲ ಅಮೆರಿಕದಲ್ಲೇ ಈ ಸಂಖ್ಯೆ 3 ಕೋಟಿಗೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಜೊತೆ ಸಕ್ರಿಯ ಕೇಸ್‌ಗಳ ಸಂಖ್ಯೆ ಕೂಡ ಭಯ ಹುಟ್ಟಿಸುತ್ತಿದೆ. 68 ಲಕ್ಷ ಆಕ್ಟಿವ್ ಕೇಸ್‌ಗಳು ಅಮೆರಿಕದ ಆಸ್ಪತ್ರೆಗಳನ್ನೆಲ್ಲಾ ತುಂಬುವಂತೆ ಮಾಡಿದೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತೋ ಏನೋ, ಆದರೆ ಈವರೆಗೂ 5 ಲಕ್ಷ 86 ಸಾವಿರ ಅಮೆರಿಕನ್ನರು ಡೆಡ್ಲಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ. ಇದು ಪರಿಸ್ಥಿತಿಯ ಭಯಾನಕತೆಯನ್ನು ಬಿಡಿಸಿಡುತ್ತಿದೆ.

Recommended Video

#Positive Story: ಮೇ ತಿಂಗಳಿನಲ್ಲಿ ಆಕ್ಸಿಜನ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಳ | Oneindia Kannada
ನಂ. 2 ಆಗತ್ತಾ ಅಮೆರಿಕ..?

ನಂ. 2 ಆಗತ್ತಾ ಅಮೆರಿಕ..?

ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನು ಹಾಗೂ ಉದ್ಯಮಿಗಳನ್ನ ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.

English summary
US State Virginia offered 100 dollars to youth’s who takes corona vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X