ವಿಡಿಯೋ: ಇದೇನಿದು ಡೊನಾಲ್ಡ್ ಟ್ರಂಪ್ ಕಾಲಲ್ಲಿ ಟಾಯ್ಲೆಟ್ ಪೇಪರ್!
ವಾಷಿಂಗ್ಟನ್ ಡಿಸಿ, ಅಕ್ಟೋಬರ್ 06: ಸೆಲೆಬ್ರಿಟಿಗಳು ಕೂತ್ರೂ ಸುದ್ದಿ, ನಿಂತ್ರೂ ಸುದ್ದಿ! ಅವರ ಶೂಗೆ ಕಾಗದ ಸಿಕ್ಕಿಕೊಂಡರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ!
ಇದೇನು ತಮಾಷೇನಾ ಅಂದ್ರಾ? ಖಂಡಿತ ಇಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೂಗೆ ಟಾಯ್ಲೆಟ್ ಪೇಪರ್ ವೊಂದು ಸಿಕ್ಕಿ ಹಾಕಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!
ಅಮೆರಿಕದ ಮಿನ್ನೆಪೊಲೀಸ್ ಸೇಂಟ್ ಪೌಲ್ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಡೊನಾಲ್ಡ್ ಟ್ರಂಪ್ ವಿಮಾನ ಹತ್ತುತ್ತಿದ್ದ ವೇಳೆಯಲ್ಲಿ ಅವರ ಶೂಗೆ ಟಾಯ್ಲೆಟ್ ಪೇಪರ್ ಅಂಟಿತ್ತು. ಅದನ್ನು ಅವರು ಗಮನಿಸದೆ ವಿಮಾನ ಹತ್ತಿದರು! ಸುದ್ದಿ ಇಷ್ಟೇ! ಆದರೆ ಈ ಸಿಕ್ಕ ಸುದ್ದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟು ಚರ್ಚೆಯಾಗಿದೆ ಅಂದ್ರೆ... ಟ್ವಿಟ್ಟರ್ ನಲ್ಲೆಲ್ಲ ಅದೇ ಮಾತು!
ನಾವಿಲ್ಲದೆ ನೀವು ಎರಡು ವಾರವೂ ಇರೊಲ್ಲ: ಸೌದಿ ರಾಜನಿಗೆ ಟ್ರಂಪ್ ವಾರ್ನಿಂಗ್!
ಟ್ರಂಪ್ ರನ್ನು ಕಾಲೆಳೆಯುವ ಜನರೇನು ಕಡಿಮೆಯೇ? ಇಂಥದ್ದಕ್ಕೇ ಕಾದು ಕುಳಿತಿರುವಂಥ ಎಷ್ಟೋ ಜನ ಈ ವಿಡಿಯೋ ಇಟ್ಟುಕೊಂಡು ಟ್ರಂಪ್ ರನ್ನು ಆಡಿಕೊಂಡಿದ್ದಾರೆ.
|
ವಿಡಿಯೋ ನೋಡಿ!
ಟ್ರಂಪ್ ಶೂಗೆ ಟಾಯ್ಲೆಟ್ ಪೇಪರ್ ಅಂತಿದ ವಿಡಿಯೋವನ್ನು ಜೋಯೆಲ್ ಫ್ರಾಕೋ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಮ್ಮೆ ನೋಡಿ!
ತೆರಿಗೆ ವಂಚನೆ: ಡೊನಾಲ್ಡ್ ಟ್ರಂಪ್ ವಿರುದ್ಧ ಗುರುತರ ಆರೋಪ
|
ಅವರನ್ನು ಕೇರ್ ಮಾಡೋಕೆ ಒಬ್ಬರೂ ಇಲ್ಲ!
"ಈ ವಿಡಿಯೋ ನೋಡಿದರೆ ತಿಳಿಯೋದಿಷ್ಟೆ! ಬಾತ್ ರೂಮಿನಿಂದ ವಿಮಾನದವರೆಗೆ ನಡೆದು ಬರುವವರೆಗೂ 'ನಿಮ್ಮ ಕಾಲಲ್ಲಿ ಟಾಯ್ಲೆಟ್ ಪೇಪರ್ ಅಂಟಿಕೊಂಡಿದೆ' ಎಂದು ಹೇಳುವುದಕ್ಕೆ ಅವರಿಗೆ ಯಾರೂ ಇರಲಿಲ್ಲ!" ಎಂದು ಹಿಯಾಳಿಸಿದ್ದಾರೆ ರಾಬಿಯಾ ಚೌದ್ರಿ.
ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್
|
ಟಾಯ್ಲೆಟ್ ಪೇಪರ್ ಅವರ ಕಾಲಿಗೆ ಬಿದ್ದಿದ್ದೇಕೆ?
ಛೆ, ಹೋಗಿ ಹೋಗಿ ಟ್ರಂಪ್ ಕಾಲಿಗೆ ಬೀಳುವಂಥ ಪರಿಸ್ಥಿತಿ ಆ ಟಾಯ್ಲೆಟ್ ಪೇಪರ್ ಗೆ ಬಂದಿದ್ದೇಕೆ? ಅನ್ನೋದು ನನಗೆ ಅರ್ಥವಾಗದ ಪ್ರಶ್ನೆ ಎಂದಿದ್ದಾರೆ ಸಸ್ಸಾಂಡ್ರಾ.
ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್
|
ಸ್ನೇಹಿತರಿಲ್ಲ!
ಇದರರ್ಥ ಅವರಿಗೆ ಯಾರೂ ಸ್ನೇಹಿತರಿಲ್ಲ ಎಂದು ಕಿಚಾಯಿಸಿದ್ದಾರೆ ಲ್ಯೂಕ್ ಬರ್ನೆಟ್.