ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!

|
Google Oneindia Kannada News

ವಾಷಿಂಗ್ಟನ್, ಮೇ 31: 'ಬ್ಲಾಕ್' ಮ್ಯಾನ್ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣರಾದ 'ವೈಟ್' ಪೊಲೀಸರ ಅಟ್ಟಹಾಸದ ವಿರುದ್ಧ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಭಾರತೀಯ ಹೋಟೆಲ್ 'ಗಾಂಧಿ ಮಹಲ್' ಧಗ ಧಗ ಹೊತ್ತಿ ಉರಿದಿದೆ.

ಕಳೆದ ಐದು ದಿನಗಳಿಂದಲೂ ಮಿನ್ನಿಯಾಪೊಲಿಸ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ನೂರಾರು ಪ್ರತಿಭಟನಾಕಾರರು ವಾಣಿಜ್ಯ ಮಳಿಗೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮಿನ್ನಿಯಾಪೊಲಿಸ್ ಪೋಲಿಸ್ ಡಿಪಾರ್ಟ್ಮೆಂಟ್ ಹತ್ತಿರವಿರುವ ಇಂಡಿಯನ್ ರೆಸ್ಟೋರೆಂಟ್ 'ಗಾಂಧಿ ಮಹಲ್' ಬೆಂಕಿಗೆ ಆಹುತಿಯಾಗಿದೆ.

ಅಮೇರಿಕಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಗುಂಡೇಟಿಗೆ ಓರ್ವ ಬಲಿ.!ಅಮೇರಿಕಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಗುಂಡೇಟಿಗೆ ಓರ್ವ ಬಲಿ.!

ತಮ್ಮ ರೆಸ್ಟೋರೆಂಟ್ ಬೆಂಕಿಗೆ ಆಹುತಿಯಾಗಿದ್ದರೂ, ಧೃತಿಗೆಡದ ಮಾಲೀಕರು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ರೆಸ್ಟೋರೆಂಟ್ ಮಾಲೀಕರ ಪುತ್ರಿ ಹಾಕಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆ ಗಳಿಸಿದೆ.

ಗಾಂಧಿ ಮಹಲ್ ಯಾರದ್ದು.?

ಗಾಂಧಿ ಮಹಲ್ ಯಾರದ್ದು.?

'ಗಾಂಧಿ ಮಹಲ್'.. ಎಂಬ ಪಕ್ಕಾ ಇಂಡಿಯನ್ ರೆಸ್ಟೋರೆಂಟ್ ನ ಮಾಲೀಕ ರುಹೆಲ್ ಇಸ್ಲಾಮ್. ಮಿನ್ನಿಯಾಪೊಲಿಸ್ ನಲ್ಲಿ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡ ಪರಿಣಾಮ 'ಗಾಂಧಿ ಮಹಲ್' ರೆಸ್ಟೋರೆಂಟ್ ಗೆ ಬೆಂಕಿ ತಗುಲಿದ್ದು, ಭಾರಿ ನಷ್ಟವುಂಟಾಗಿದೆ. ಈ ಕುರಿತು ರುಹೆಲ್ ಇಸ್ಲಾಮ್ ಪುತ್ರಿ 18 ವರ್ಷದ ಹಫ್ಸಾ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?

ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?

''ಗಾಂಧಿ ಮಹಲ್ ರೆಸ್ಟೋರೆಂಟ್ ಬೆಂಕಿಗೆ ಆಹುತಿಯಾಗಿದೆ. ಆದರೆ ನಾವು ಭರವಸೆಯನ್ನು ಕಳೆದುಕೊಂಡಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಗಾಂಧಿ ಮಹಲ್ ಅನ್ನು ರಕ್ಷಿಸಲು ನಮ್ಮ ನೆರೆಹೊರೆಯವರು ತೋರಿದ ಸಹಕಾರಕ್ಕೆ ನಾವು ಚಿರಋಣಿ. ನಮ್ಮ ಬಗ್ಗೆ ಚಿಂತೆಬೇಡ. ನಾವು ಗಾಂಧಿ ಮಹಲ್ ಅನ್ನು ಪುನರ್ ನಿರ್ಮಿಸುತ್ತೇವೆ.''

''ನಾನು ಹಫ್ಸಾ.. ರುಹೆಲ್ ಪುತ್ರಿ.. ನನ್ನ ತಂದೆಯ ಪಕ್ಕದಲ್ಲಿ ಕೂತು ನ್ಯೂಸ್ ನೋಡುತ್ತಾ ಈ ಪೋಸ್ಟ್ ಬರೆಯುತ್ತಿದ್ದೇನೆ. ''ನನ್ನ ಕಟ್ಟಡ ಬೆಂಕಿಗೆ ಆಹುತಿಯಾದರೂ ಚಿಂತೆಯಿಲ್ಲ. ಆದರೆ, ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಸಿಗಬೇಕು. ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು'' ಎಂದು ನನ್ನ ತಂದೆ ಫೋನ್ ನಲ್ಲಿ ಹೇಳುತ್ತಿದ್ದಾರೆ. ಗಾಂಧಿ ಮಹಲ್ ಗೆ ಬೆಂಕಿ ಬಿದ್ದಿರಬಹುದು. ಆದರೆ, ಸಮುದಾಯದ ಪರವಾಗಿ ಹೋರಾಡುವ ಕಿಚ್ಚು ಎಂದಿಗೂ ಆರಲ್ಲ'' ಎಂದು ಹಫ್ಸಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಹಫ್ಸಾ ಬರೆದಿರುವ ಈ ಫೇಸ್ ಬುಕ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಹಲವರ ಮನಮುಟ್ಟಿದೆ.

ಹಿಂಸಾತ್ಮಕ ಪ್ರತಿಭಟನೆಯಿಂದ ಓರ್ವ ಬಲಿ

ಹಿಂಸಾತ್ಮಕ ಪ್ರತಿಭಟನೆಯಿಂದ ಓರ್ವ ಬಲಿ

ಕಳೆದ ಐದು ದಿನಗಳಿಂದ ಮಿನ್ನಿಯಾಪೊಲಿಸ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಿಂಸಾತ್ಮಕ ಪ್ರತಿಭಟನೆಯಿಂದ ವಾಣಿಜ್ಯ ಮಳಿಗೆಗಳಿಗೆ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಪ್ರತಿಭಟನಾಕಾರರ ಗುಂಪಿನ ಕಡೆಗೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ ಪರಿಣಾಮ, ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿತ್ತು.

ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್

ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್

ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಶಾಂತಿ ಸ್ಥಾಪಿಸಲು ಮಿಲಿಟರಿ ನಿಯೋಜಿಸುವುದಾಗಿ ಟ್ವೀಟ್ ಮಾಡಿ ಪ್ರತಿಭಟನಾಕಾರರಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.


''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.


ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

English summary
Violent Protest against George Floyd Death In Minneapolis: Indian restaurant Gandhi Mahal was burnt down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X