• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಪಿಟಲ್ ಹಿಲ್ಸ್ ಬಳಿ ತ್ರಿವರ್ಣ ಧ್ವಜ ಹಿಡಿದವ ಟ್ರಂಪ್ ಭಕ್ತ!

|
Google Oneindia Kannada News

ವಾಷಿಂಗ್ಟನ್, ಜನವರಿ 8: ಯುಎಸ್ಎನಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಹೊತ್ತಿಗೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಪುಂಡಾಟ ಹೆಚ್ಚಾಗಿ ಕ್ಯಾಪಿಟಲ್ ಹಿಲ್ಸ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ ಘಟನೆ ನೆನಪಿರಬಹುದು. ಇದರಿಂದಾಗಿ ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿಯನ್ನು ಮೇಯರ್ ಮುರಿಯಲ್ ಬೌಸರ್ ಘೋಷಿಸಿದ್ದಾರೆ. ಈ ನಡುವೆ ಕ್ಯಾಪಿಟಲ್ ಹಿಲ್ಸ್ ಬಳಿ ಭಾರತದ ತ್ರಿವರ್ಣ ಧ್ವಜ ಕಂಡು ಬಂದು ಭಾರಿ ಚರ್ಚೆಗೆ ಕಾರಣವಾಗಿತ್ತು. ಈಗ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದ ವ್ಯಕ್ತಿ ಪತ್ತೆಯಾಗಿದ್ದು, ತಾವೇಕೆ ಅಲ್ಲಿ ಭಾರತದ ಬಾವುಟ ಹಿಡಿದು ನಿಂತಿದ್ದು ಎಂಬುದನ್ನು ವಿವರಿಸಿದ್ದಾರೆ.

ಈ ದುರ್ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, ಮೊದಲಿಗೆ ಮೃತಪಟ್ಟ ಮಹಿಳೆಯನ್ನು ವಾಯುಸೇನೆಯ ಹಿರಿಯ ಅಧಿಕಾರಿ ಅಶ್ಲಿ ಬಾಬಿಟ್ ಎಂದು ಗುರುತಿಸಲಾಗಿದೆ. ಕ್ಯಾಪಿಟಲ್ ಹಿಲ್ಸ್ ಸಂಘರ್ಷ ಘಟನೆಗೆ ಸಂಬಂಧಿಸಿದಂತೆ ಸುಮಾರು 52ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮುಖ್ಯಸ್ಥ ರಾಬರ್ಟ ಜೆ ಕಾಂಟಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದಿದ್ದಾರೆ ಎಂದು ಈಗಾಗ್ಲೇ ಎಲೆಕ್ಟೊರಾಲ್ ಕಾಲೇಜು ಸ್ಪಷ್ಟಪಡಿಸಿದೆ. 46ನೇ ಅಧ್ಯಕ್ಷರಾಗಿ ಬೈಡನ್ ಗೆಲುವನ್ನು ಅಮೆರಿಕ ಚುನಾವಣಾ ಆಯೋಗ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಅಮೆರಿಕನ್ ಕಾಂಗ್ರೆಸ್ ಅಥವಾ ಜನಪ್ರತಿನಿಧಿಗಳ ಸಭೆಯಲ್ಲಿ ಬೈಡನ್ ಗೆಲುವನ್ನು ಅಂಗೀಕರಿಸಿ ಪ್ರಮಾಣ ಪತ್ರ ನೀಡಿದೆ.

ತ್ರಿವರ್ಣ ಧ್ವಜ ಬಳಕೆ ಏಕೆ ಎಂಬ ಪ್ರಶ್ನೆ

ತ್ರಿವರ್ಣ ಧ್ವಜ ಬಳಕೆ ಏಕೆ ಎಂಬ ಪ್ರಶ್ನೆ

1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಅಡಾಲ್ಫ್ ಹಿಟ್ಲರ್ ಮುಂದೆ ಭಾರತ ಧ್ವಜ ಹಿಡಿದು ನಡೆದ ಘಟನೆಯನ್ನು ಕ್ಯಾಪಿಟಲ್ ಹಿಲ್ಸ್ ಪ್ರತಿಭಟನೆಗೆ ಹೋಲಿಸಲಾಗಿದೆ. ಹಲವಾರು ಮಂದಿ ಭಾರತದ ಧ್ವಜ ತಂದು ಗೊಂದಲ ಮೂಡಿಸಲಾಗುತ್ತಿದೆ. ಇದು ಅನಗತ್ಯ ಎಂದಿದ್ದರು. ಇಂಥ ಪ್ರತಿಭಟನೆಗಳನ್ನು ಬೆಂಬಲಿಸುವ ಆರೆಸ್ಸೆಸ್ ನೆರವು ಪಡೆದುಕೊಳ್ಳುವ ಇಂಡೋ ಅಮೆರಿಕನ್ನರನ್ನು ಉಗ್ರರ ಪಟ್ಟಿಗೆ ಸೇರಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು. ಬಹುಶಃ ಇದು ಕ್ರಿಕೆಟ್ ಮ್ಯಾಚ್ ಎಂದು ತಿಳಿದು ಬಾವುಟ ಹಿಡಿದುಕೊಂಡು ಬಂದಿರಬಹುದು ಎಂದು ತಮಾಷೆ ಮಾಡಿದ್ದರು.

ನಾವೇನು ವರ್ಣದ್ವೇಷಿಗಳಲ್ಲ

ನಾವೇನು ವರ್ಣದ್ವೇಷಿಗಳಲ್ಲ

ಆದರೆ, ನಾವೇನು ವರ್ಣದ್ವೇಷಿಗಳಲ್ಲ (racist) ಎಂಬು ತೋರಿಸಲು ಟ್ರಂಪ್ ಅನುಯಾಯಿಗಳಾಗಿ ನಮ್ಮಹೆಮ್ಮೆಯ ಭಾರತ ಧ್ವಜವನ್ನು ಅಲ್ಲಿ ಎತ್ತಿ ಹಿಡಿದಿದ್ದೆವು ಎಂದು ಟ್ರಂಪ್ ಅವರ ಪರಮ ಭಕ್ತ ವಿನ್ಸೆಂಟ್ ಕ್ಸೇವಿಯರ್ ಹೇಳಿದ್ದಾರೆ. ಭಾರತದ ಕೇರಳದ ಕೊಚ್ಚಿಯ ಚಂಬಕ್ಕಾರ ಮೂಲದ ವಿನ್ಸೆಂಟ್ ಅವರು ಟ್ರಂಪ್ ಅವರ ಶಿಫಾರಸ್ಸಿನ ಮೇರೆಗೆ ರಿಪಬ್ಲಿಕನ್ ಪಕ್ಷದ ವರ್ಜಿನಿಯಾ ಕೇಂದ್ರ ಸಮಿತಿಯ ಸದಸ್ಯರಾಗಿ ಉನ್ನತ ಹುದ್ದೆಯಲ್ಲಿದ್ದ ಅನುಭವ ಹೊಂದಿದ್ದಾರೆ. ಭಾರತದಲ್ಲಿ 25 ವರ್ಷ ವಾಸಿಸಿದ್ದಾರೆ.

ಟ್ರಂಪ್ ಪರವಾಗಿ ಪ್ರತಿಭಟನೆ ನಡೆಸಲು ಬಂದಿದ್ದ ತಂಡ

ಟ್ರಂಪ್ ಪರವಾಗಿ ಪ್ರತಿಭಟನೆ ನಡೆಸಲು ಬಂದಿದ್ದ ತಂಡ

ಅಮೆರಿಕಕ್ಕೆ ತೆರಳಿದ ಬಳಿಕ ಟ್ರಂಪ್ ಆಡಳಿತಕ್ಕೆ ಮಾರು ಹೋಗಿ ಟ್ರಂಪ್ ಪರವಾಗಿ ಪ್ರತಿಭಟನೆ ನಡೆಸಲು ಕ್ಯಾಪಿಟಲ್ ಹಿಲ್ಸ್ ಬಳಿ ಬಂದಿದ್ದರು. ಆದರೆ, ಹಿಂಸಾತ್ಮಕ ಪ್ರತಿಭಟನೆ ನಡೆಸಿಲ್ಲ, ಎಲ್ಲೋ 7-8 ಮಂದಿ ಸ್ಪೈಡರ್ ಮ್ಯಾನ್ ಗಳ ಥರಾ ಗೋಡೆ ಹತ್ತಿದರು. ಒಟ್ಟಾರೆ 40-50 ಮಂದಿ ಹಿಂಸಾತ್ಮಕವಾಗಿ ಸಂಘರ್ಷಕ್ಕೆ ಮುಂದಾದರು. ನಮ್ಮ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು ಎಂದು ವಿನ್ಸೆಂಟ್ ವಿವರಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮವಾಗಿದೆ, ಪ್ರತಿ ಮತವು ಎಣಿಕೆಯಾಗಬೇಕು ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗಿತ್ತು ಎಂದರು.

ಕಪ್ಪು ಜನಾಂಗದ ವಿರೋಧಿ ಎಂಬ ತಪ್ಪು ಭಾವನೆ

ನಾವು 10 ಮಂದಿಯ ಗುಂಪು ಮಾಡಿಕೊಂಡು ಪ್ರತಿಭಟನೆಯಲ್ಲಿ ತೊಡಗಿದ್ದೆವು. ಕೇರಳದ ಐವರು, ಕೊರ್ಇಯನ್, ವಿಯೆಟ್ನಾಮೀಸ್, ಪಾಕಿಸ್ತಾನಿ ಕೂಡ ತಮ್ಮ ದೇಶಗಳ ಧ್ವಜಗಳನ್ನು ಅಲ್ಲಿ ಪ್ರದರ್ಶಿಸಿದರು. ಟ್ರಂಪ್ ಅವರು ಕಪ್ಪು ಜನಾಂಗದ ವಿರೋಧಿ ಎಂಬ ತಪ್ಪು ಭಾವನೆ ಹೋಗಲಾಡಿಸಲು ನಾವು ವಿವಿಧ ವರ್ಣೀಯರು ಅಲ್ಲಿ ನೆರೆದಿದ್ದೆವು ಎಂದು ವಿನ್ಸೆಂಟ್ ಹೇಳಿದರು.

English summary
Vincent Xavier, the Indian-Origin Man held Indian tricolor Flag at Capitol Hill Riot. He said there were about 10 Indians in the group of Trump loyalists, and five of them were from Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X