• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಚ್ಚಿಬೀಳಿಸುವ ಅಮೆರಿಕ ಭೀಕರ ಭೂಕಂಪದ ವೈರಲ್ ವಿಡಿಯೋಗಳು

|
      America Earthquake : ಅಮೇರಿಕ ಅಲಾಸ್ಕಾದ ಆಂಕೊರೇಜ್ ಎಂಬಲ್ಲಿ ಭೀಕರ ಭೂಕಂಪ | ವೈರಲ್ ವಿಡಿಯೋಗಳು

      ಅಲಾಸ್ಕಾ(ಅಮೆರಿಕ), ಡಿಸೆಂಬರ್ 01: ನಿಂತ ರಸ್ತೆಗಳೇ ಬಾಯ್ತೆರೆದು ತನ್ನೊಡಲಲ್ಲಿ ವಾಹನಗಳನ್ನೂ, ಜನರನ್ನೂ ಆವಾಹಿಸಿಕೊಳ್ಳೋ ದೃಶ್ಯ ಬೆಚ್ಚಿಬೀಳಿಸುತ್ತಿದೆ!

      ಹೌದು, ಅಮೆರಿಕದ ಅಲಾಸ್ಕಾದ ನಗರದ ಆಂಕೊರೇಜ್ ಎಂಬಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದ ಇಂಥ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

      ಅಮೆರಿಕದ ಅಲಾಸ್ಕಾದಲ್ಲಿ ಮೈನಡುಗಿಸುವ ಭೀಕರ ಭೂಕಂಪ

      ಈ ಭೂಕಂಪದ ಸಾವುನೋವಿನ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಆದರೆ ಯುನೈಟೆಡ್ ಸ್ಟೇಟ್ಸ್ ಜಿಯೋಲೋಜಿಕಲ್ ಸರ್ವೆ ಪ್ರಕಾರ 6.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಯುಎಸ್ ನ್ಯಾಶನಲ್ ವೆದರ್ ಸರ್ವಿಸ್ ನೀಡಿದ ಮಾಹಿತಿ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯ ಬಗ್ಗೆ ಗೊಂದಲವಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.

      ಈ ಭೂಕಂಪದ ಭಯಹುಟ್ಟಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಭೀತಿ ಮೂಡಿಸಿವೆ.

      ಬಾಯ್ತೆರೆಯುತ್ತಿರುವ ರಸ್ತೆಗಳು!

      ಭೂಕಂಪದಿಂದ ಬಾಯ್ತೆರೆದು ನಿಂತಿರುವ ರಸ್ತೆಯ ದೃಶ್ಯ ಬೆಚ್ಚಿಬೀಳಿಸುತ್ತದೆ. ಇಲ್ಕೇ ಎಂಬುವವರೊಬ್ಬರು ಟ್ವಿಟ್ಟರ್ ನಲ್ಲಿ ಹಾಕಿರುವ ಈ ವಿಡಿಯೋ ಪ್ರಕೃತಿಯ ಅಗಾಧ ಶಕ್ತಿಗೆ ಉದಾಹರಣೆಯಾಗಿದೆ.

      ಹಿಮಾಲಯದಲ್ಲಿ 8.5ರಷ್ಟು ತೀವ್ರತೆಯ ಭೂಕಂಪ ಸಂಭವ: ವಿಜ್ಞಾನಿಗಳ ಎಚ್ಚರಿಕೆ

      ಅಲ್ಲಾಡುವ ಕಾರು!

      ನಿಂತಲ್ಲೇ ಕಾರೊಂದು ಅಲ್ಲಾಡುತ್ತಿದ್ದರೆ ಇದೇನು ದೆವ್ವ ಬಂತಾ ಅನ್ನಿಸಬೇಕು! ಆದರೆ ಭೂಕಂಪದ ತೀವ್ರತೆಗೆ ಕಾರುಗಳೆಲ್ಲ ನಿಂತಲ್ಲೇ ಅಲ್ಲಾಡುತ್ತಿರುವ, ಇಳಿಜಾರಲ್ಲಿ ನಿಲ್ಲಿಸಿದ ಕಾರುಗಳು ತಮ್ಮಷ್ಟಕ್ಕೇ ಚಲಿಸುತ್ತಿರುವ ದೃಶ್ಯಗಳೂ ಕಾಣಸಿಗುತ್ತಿವೆ.

      ನ.11 ರಂದು ನಡೆದಿತ್ತೊಂದು ವಿಲಕ್ಷಣ ಘಟನೆ! ಕಾರಣ ನಿಗೂಢ!

      ಹಿಮಕಣ್ಣಿಗೆ ತಂಪು ನೀಡುತ್ತಿಲ್ಲ!

      ಎಲ್ಲೆಲ್ಲೂ ತುಂಬಿಕೊಂಡಿರುವ ಬೆಳ್ಳನೆ ಹಿಮ ಎಂದಿನಂತೆ ಇಂದು ಕಣ್ಣಿಗೆ ತಂಪು ನೀಡುತ್ತಿಲ್ಲ! ಹಿಮದ ಆಳದಲ್ಲಿ ಎಲ್ಲೆಲ್ಲೂ ಬಿರುಕುಬಿಟ್ಟಿರುವ ಭೂಮಿ ನಡೆದು ಹೋಗುವುದಕ್ಕೂ ಭಯತರಿಸುತ್ತಿದೆ.

      ಮಂಡ್ಯದಲ್ಲಿ ಭೂಮಿ ಕಂಪಿಸಿದ ಅನುಭವ, ಆತಂಕದಲ್ಲಿ ಜನತೆ

      ದ್ವೀಪದಂತಾದ ರಸ್ತೆ!

      ರಸ್ತೆಯೆಲ್ಲ ಬಿರುಕುಬಿಟ್ಟು ನಡುಗಡ್ಡೆಯಂತಾಗಿ ಸುತ್ತಲೂ ಸಂಪರ್ಕವೇ ಕಡಿದುಹೋಗುವಂತೆ ಮಾಡಿದೆ. ಈ ರಸ್ತೆಯ ನಡುವಲ್ಲಿ ನಿಂತ ಒಂಟಿ ಕಾರೊಂದು ಎತ್ತ ಚಲಿಸಬೇಕೋ ತಿಳಿಯದೆ ನಿಂತಿದೆ!

      ಏನಾಗುತ್ತಿದೆ..?!

      ಮನೆಯೊಂದರೊಳಗೆ ವಸ್ತುಗಳೆಲ್ಲ ತೂಗುಯ್ಯಾಲೆಯಾಡುತ್ತಿದ್ದು, ಏನಾಗುತ್ತಿದೆ ಎಂಬುದೇ ಕೆಲಕಾಲ ಗೊತ್ತಾಗದಂಥ ಸೃಷ್ಟಿ ನಿರ್ಮಾಣವಾದ ವಿಡಿಯೋ ಸಹ ವೈರಲ್ ಆಗಿದೆ.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      A 6.7 magnitude earthquake jolted Anchorage, Alaska's largest city in America on friday. Here are some viral videos of Earthquake.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more