ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಸುರಕ್ಷಿತ ಸ್ವರ್ಗ ತಾಣ ಪಾಕ್‌, ನಮ್ಮ ಕಾಳಜಿ ಪ್ರಾಮಾಣಿಕ ಎಂದ ಯುಎಸ್‌

|
Google Oneindia Kannada News

ವಾಷಿಂಗ್ಟನ್‌, ಅಕ್ಟೋಬರ್‌ 01: "ಪಾಕಿಸ್ತಾನವು ಭಯೋತ್ಪಾದಕರಿಗೆ ಸ್ವರ್ಗವಾಗಿರುವ ಬಗ್ಗೆ, ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಭಯೋತ್ಪಾದಕರಿಗೆ ಸುರಕ್ಷಿಯ ತಾಣವಾಗಿರುವ ಬಗ್ಗೆ ಯುಎಸ್‌ನ ಕಾಳಜಿಯು ಪ್ರಾಮಾಣಿಕವಾಗಿದೆ," ಎಂದು ಪೆಂಟಗನ್‌ ಹೇಳಿದೆ.

ತಾಲಿಬಾನ್‌ ಉಗ್ರರ ಪೋಷಣೆ ಮಾಡಿದ ಕಾರಣಕ್ಕೆ ಅಫ್ಘಾನಿಸ್ತಾನ ಹಾಗೂ ಯುಎಸ್‌ ಹಲವಾರು ಬಾರಿ ಪಾಕಿಸ್ತಾನನ್ನು ಟೀಕೆ ಮಾಡಿದೆ. ಪಾಕಿಸ್ತಾನವು ತಾಲಿಬಾನ್‌ ಉಗ್ರರಿಗೆ ಸ್ವರ್ಗವಾದಂತೆ ಆಗಿದ್ದು, ಅಲ್ಲಿ ಭಯೋತ್ಪಾದಕರಿಗೆ ಚಿಕಿತ್ಸೆಯನ್ನು ಕೂಡಾ ನೀಡಲಾಗುತ್ತಿದೆ.

ಪ್ರತಿದಿನ ಗಡಿಯತ್ತ 8-9 ಸಾವಿರ ಅಫ್ಘಾನಿಗಳು: ಪಾಕ್‌ಗೆ ಹೋಗುವವರನ್ನು ತಡೆದ ತಾಲಿಬಾನ್‌ಪ್ರತಿದಿನ ಗಡಿಯತ್ತ 8-9 ಸಾವಿರ ಅಫ್ಘಾನಿಗಳು: ಪಾಕ್‌ಗೆ ಹೋಗುವವರನ್ನು ತಡೆದ ತಾಲಿಬಾನ್‌

"ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಬಗ್ಗೆ ಹಲವಾರು ಸಮಯದಿಂದ ನಾವು ಹೊಂದಿರವು ಕಾಳಜಿಯು ಪ್ರಾಮಾಣಿಕವಾಗಿದೆ. ಪಾಕಿಸ್ತಾನದ ಗಡಿ ಪ್ರದೇಶವು ಭಯೋತ್ಪಾದಕರಿಗೆ ಸ್ವರ್ಗವಾಗಿದೆ. ಆ ಕಾಳಜಿಯೂ ಈಗಲೂ ಇದೆ," ಎಂದು ಪೆಟಂಗನ್‌ನ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದಾರೆ.

Very Honest About Concerns On Terrorist Safe Havens In Pakistan said US

"ಈ ಕಾಳಜಿಯ ವಿಚಾರವಾಗಿ ಪಾಕಿಸ್ತಾನ ನಾಯಕರುಗಳೊಂದಿಗೆ ನಾವು ಮಾತುಕತೆಯನ್ನು ನಡೆಸುತ್ತಿದ್ದೇವೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಗೆ ನೆರೆಯ ದೇಶವಾಗಿರುವ ಪಾಕಿಸ್ತಾನವೂ ಕೂಡಾ ಹೊಣೆಯಾಗಿದೆ," ಎಂದು ಆರೋಪ ಮಾಡಿದ್ದಾರೆ. "ಈ ಹಿಂದಿನಂತೆ ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ತಾನಕ್ಕೆ ನಾವು ಎಚ್ಚರಿಕೆಯನ್ನು ನೀಡುತ್ತಿದ್ದೇವೆ," ಎಂದು ಕೂಡಾ ತಿಳಿಸಿದ್ದಾರೆ.

"ಪಾಕಿಸ್ತಾನವು ತಾಲಿಬಾನ್‌ ಉಗ್ರರಿಗೆ ಸಹಕರಿಸುತ್ತಿದೆ, ಚಿಕಿತ್ಸೆ, ವಸತಿ ಸೌಲಭ್ಯವನ್ನು ಒದಗಿಸುತ್ತಿದೆ. ಪಾಕಿಸ್ತಾನ ತಾಲಿಬಾನ್‌ ಉಗ್ರರಿಗೆ ಸ್ವರ್ಗವಾಗಿದೆ. ಅಫ್ಘಾನ್‌ಗೆ ಮಿಲಿಟರಿ ಪಡೆಯನ್ನು ಕಳುಹಿಸುತ್ತಿದೆ," ಎಂದು ಅಫ್ಘಾನಿಸ್ತಾನವು ಆರೋಪ ಮಾಡಿದೆ. ಈ ನಡುವೆ ಪಾಕಿಸ್ತಾನ, "ತೆಹ್ರೀಕ್-ಇ-ತಾಲಿಬಾನ್ ಎಂಬ ಪಾಕ್‌ ವಿರೋಧಿ ಸಂಘಟನೆಯನ್ನು ಅಫ್ಘಾನಿಸ್ತಾನ ಪೋಷಿಸುತ್ತಿದೆ," ಎಂದು ಹೇಳಿದೆ. ಪ್ರತ್ಯೇಕತಾವಾದಿ ಬಲೂಚಿಸ್ತಾನ ವಿಮೋಚನಾ ಸೇನೆಗೂ ಅಫ್ಘಾನಿಸ್ತಾನ ಸಹಕಾರ ನೀಡುತ್ತಿದೆ ಎಂದು ದೂರಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೈಡನ್‌ ಕರೆ ಮಾಡುತ್ತಾರಾ?ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೈಡನ್‌ ಕರೆ ಮಾಡುತ್ತಾರಾ?

"ತಾಲಿಬಾನ್‌ ಉಗ್ರರ ವಶದಲ್ಲಿ ಇರುವ ಅಫ್ಘಾನಿಸ್ತಾನದಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಹಕ್ಕಿಗೆ ಅನುಸಾರವಾಗಿ ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಯನ್ನು ಮುಂದುವರಿಸಲಿದೆ. ಅಫ್ಘಾನಿಸ್ತಾನವ್ನನು ರಕ್ಷಿಸುವ ಜವಾಬ್ದಾರಿ ನಮಗೂ ಇದೆ ಎಂದು ನಾವು ನಂಬುತ್ತೇವೆ," ಎಂದು ಪೆಟಂಗನ್‌ನ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದರು.

ಅಫ್ಘಾನಿಸ್ತಾನದ ಮೇಲೆ ಡ್ರೋನ್‌ ದಾಳಿಯನ್ನು ನಡೆಸುವ ಮೂಲಕ ಯುಎಸ್ ತನ್ನ ಒಪ್ಪಂದವನ್ನು ಮುರಿಯುತ್ತಿದೆ ಎಂದು ತಾಲಿಬಾನ್‌ ಆರೋಪ ಮಾಡಿದೆ. ಹಾಗೆಯೇ ಭವಿಷ್ಯದಲ್ಲಿ ಅಮೆರಿದ ವಿರುದ್ದ ನಾವು ಪ್ರತೀಕಾರ ತೀರಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದೆ. ಆದರೆ ಈ ಬಗ್ಗೆ ಮಾತನಾಡಿರುವ ಪೆಟಂಗನ್‌ನ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ , "ಅಫ್ಘಾನಿಸ್ತಾನದಲ್ಲಿ ನಾವು ರಕ್ಷಣಾ ಕಾರ್ಯವನ್ನು ಮಾಡುವ ಹಕ್ಕು ನಮಗೆ ಇದೆ. ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ನರ ಸುರಕ್ಷಿತವನ್ನು ನೋಡಿಕೊಳ್ಳುವ ಹಕ್ಕು ಕೂಡಾ ನಮಗ ಇದೆ. ನಾವು ಅದನ್ನು ಮಾಡುತ್ತೇವೆ," ಎಂದು ತಿಳಿಸಿದರು.

ಇನ್ನು ಹವಲಾರು ಅಫ್ಘಾನಿಸ್ತಾನಿಗಳು ಪಾಕಿಸ್ತಾನದ ಗಡಿಯತ್ತ ದಾವಿಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತದಿಂದಾಗಿ ಆತಂಕಕ್ಕೆ ಒಳಗಾಗಿರುವ ಸಾವಿರಾರು ಅಫ್ಘಾನಿಸ್ಥಾನಿಗಳು ದೇಶವನ್ನು ಬಿಟ್ಟು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ದೇಶದ ದಕ್ಷಿಣ ಗಡಿಯಾದ ಸಾವಿರಾರು ಅಫ್ಘಾನಿಸ್ಥಾನಿಗಳು ಪಾಕಿಸ್ತಾನದತ್ತ ಧಾವಿಸಿದ್ದಾರೆ. ಆದರೆ ತಾಲಿಬಾನ್‌ ಮಾತ್ರ ಯಾವುದೇ ಅಫ್ಘಾನಿಸ್ತಾನಿಗಳನ್ನು ಗಡಿ ದಾಟಲು ಬಿಟ್ಟಿಲ್ಲ, ತಡೆದು ನಿಲ್ಲಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಿಂದ ಕೆಲವು ಕಿಲೋ ಮೀಟರ್‌ ದೂರದಲ್ಲಿ ಇರುವ ಸ್ಪಿನ್‌ ಬೋಡಾಕ್‌ನ ವ್ಯಾಪಾರಿ ಪಟ್ಟಣದಲ್ಲಿ ದಾರಿಯಲ್ಲಿ ಕೂತಿರುವ ಝಕ್ಕೀರುದ್ದೀನ್‌ ಎಂಬಾ ಅಫ್ಘಾನಿಸ್ತಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ನಾನು ಅದೇಷ್ಟೋ ಬಾರಿ ಪಾಕಿಸ್ತಾನ ಗಡಿಯನ್ನು ದಾಟಲು ಸಾಧ್ಯವಾಗದೆ ಹಿಂದಕ್ಕೆ ಬಂದಿದ್ದೇನೆ, ಕೆಲವೊಮ್ಮೆ ಹಿಂಸಾತ್ಮಕವಾಗಿ ನನ್ನನ್ನು ಹಿಂದೆ ಕಳುಹಿಸಿದ್ದಾರೆ," ಎಂದು ತಿಳಿಸಿದ್ದಾರೆ.

ಗುರುವಾರ ತಾಲಿಬಾನ್‌, "ಪಾಕಿಸ್ತಾನವು ಪದೇ ಪದೇ ಅಫ್ಘಾನಿಸ್ತಾನದ ನಿರಾಶ್ರಿತರನ್ನು ನಾವು ದೇಶಕ್ಕೆ ಬರಲು ಬಿಡಲ್ಲ ಎಂದು ಹೇಳುತ್ತಿದೆ. ಆದ್ದರಿಂದ ಅವರ ವಿರುದ್ದವಾಗಿ ನಾವು ನಡೆಸುವ ಪ್ರತಿಭಟನೆಯ ಭಾಗವಾಗಿ ಗಡಿಯಲ್ಲಿ ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಿದ್ದೇವೆ," ಎಂದು ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Very Honest About Concerns On Terrorist Safe Havens In Pakistan said US. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X