ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಕರೆದ USCIRF

|
Google Oneindia Kannada News

ವಾಷಿಂಗ್ಟನ್ ಡಿಸಿ, ಫೆಬ್ರವರಿ 20: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್) ಹೊಸ ವಸ್ತುಸ್ಥಿತಿ ವರದಿ ಬಿಡುಗಡೆ ಮಾಡಿದೆ.

2019ರ ಡಿಸೆಂಬರ್‌ನಲ್ಲಿ ಭಾರತದ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ತ್ವರಿತವಾಗಿ ಭಾರತದ ಪೌರತ್ವವನ್ನು ಈ ಕಾಯ್ದೆ ಒದಗಿಸಲಿದೆ. ಸಿಎಎ ಅನುಮೋದನೆಗೊಳ್ಳುತ್ತಿದ್ದಂತೆಯೇ ಭಾರತದಾದ್ಯಂತ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ಸರ್ಕಾರವು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹಿಂಸಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು USCIRF ಹೇಳಿದೆ.

ಸಾಯುವುದಕ್ಕಾಗಿಯೇ ಮನೆಯಿಂದ ಹೊರ ಬರುವ ಜನರನ್ನು ಹೇಗೆ ಬದುಕಿಸುವುದು? ಸಾಯುವುದಕ್ಕಾಗಿಯೇ ಮನೆಯಿಂದ ಹೊರ ಬರುವ ಜನರನ್ನು ಹೇಗೆ ಬದುಕಿಸುವುದು?

ಈ ಕಾಯ್ದೆಯೊಂದಿಗೆ ಉದ್ದೇಶಿತ ದೇಶ ವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನೂ ನಡೆಸಲಾಗುತ್ತಿದೆ. ಇದು ಭಾರತೀಯ ಪೌರತ್ವಕ್ಕೆ ಧಾರ್ಮಿಕ ಪರೀಕ್ಷೆಯನ್ನು ಒಡ್ಡುವ ಪ್ರಯತ್ನದ ಭಾಗ ಮತ್ತು ಇದು ಭಾರತದ ಮುಸ್ಲಿಮರನ್ನು ವ್ಯಾಪಕವಾಗಿ ಕಡೆಗಣಿಸುವಂತೆ ಮಾಡುತ್ತದೆ ಎಂಬ ಕಳವಳ ಜನರಲ್ಲಿ ಉಂಟಾಗಿದೆ. ಈ ವಸ್ತುಸ್ಥಿತಿ ವರದಿಯು ಸಿಎಎಯ ಕುರಿತಾದ ಅವಲೋಕನವನ್ನು ಒದಗಿಸುತ್ತದೆ ಮತ್ತು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯವು ಹೇಗೆ ಪ್ರಮುಖವಾಗಿ ಕುಸಿತವಾಗುತ್ತಿದೆ ಎಂಬುದನ್ನು ವಿವರಿಸುತ್ತದೆ ಎಂದು ವರದಿ ತಿಳಿಸಿದೆ.

USCIRF Relases New Factsheet On Citizenship Amendment Act

USCIRFನ 2019ರ ವಾರ್ಷಿಕ ವರದಿಯು ಭಾರತವನ್ನು ಟೈರ್ 2 ಪಟ್ಟಿಯಲ್ಲಿ ಇರಿಸಿದೆ. ಈ ಪಟ್ಟಿಯಲ್ಲಿನ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಪಾಯಕಾರಿ ಮಟ್ಟಕ್ಕೆ ಹೋಗಿಲ್ಲದೆ ಮತ್ತು ಸಿಪಿಸಿ ಹಣೆಪಟ್ಟಿ ನೀಡುವ ಅಗತ್ಯವಿಲ್ಲದೆ ಇದ್ದರೂ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸ್ವರೂಪ ಮತ್ತು ಹಿಂಸಾಚಾರಗಳನ್ನು ತೀವ್ರವಾಗಿ ಗಮನಿಸಬೇಕು ಎಂದು ಆಯೋಗ ಹೇಳುತ್ತದೆ.

ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ

2024ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿಸಲಾಗುತ್ತದೆ ಎಂಬ ಚುನಾಯಿತ ಪ್ರತಿನಿಧಿಗಳ ಹೇಳಿಕೆಗಳು, ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಅವುಗಳನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಆಧಾರಿಸಿ USCIRF ಈ ವರದಿಯನ್ನು ತಯಾರಿಸಿದೆ.

English summary
USCIRF on Wednesday released the new factsheet on India's Citizenship Amendment Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X