ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಕೊವಿಡ್-19 ಸೋಂಕು ತಗುಲಿದರೆ ಸಾವು ಪಕ್ಕಾ?

|
Google Oneindia Kannada News

ವಾಶಿಂಗ್ಟನ್, ಅಕ್ಟೋಬರ್.27: ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿ ಹೋಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಯಲ್ಲಿ ಮಹಾಮಾರಿ ಮರಣಮೃದಂಗ ಬಾರಿಸುವ ಅಪಾಯ ಹೆಚ್ಚಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕಾಯ ಅಧ್ಯಕ್ಷೀಯ ಚುನಾವಣೆ ನಡುವೆ ಕಳೆದ 2 ವಾರಗಳಲ್ಲಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಭಾನುವಾರ 721 ರಿಂದ 794 ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಸಿಹಿಸುದ್ದಿ: ಭಾರತದಲ್ಲಿ ಇಳಿಮುಖವಾದ ಕೊರೊನಾವೈರಸ್ ಪ್ರಕರಣ ಸಿಹಿಸುದ್ದಿ: ಭಾರತದಲ್ಲಿ ಇಳಿಮುಖವಾದ ಕೊರೊನಾವೈರಸ್ ಪ್ರಕರಣ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿರುವ 47 ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. 34 ರಾಜ್ಯಗಳಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮುಂಬರುವ ಚಳಿಗಾಲದ ಸಂದರ್ಭದಲ್ಲಿ ಕೊರೊನಾವೈರಸ್ ಸೋಂಕಿಗೆ ಅತಿಹೆಚ್ಚು ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಅಮೆರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಅಮೆರಿಕಾದಲ್ಲಿ ಸದ್ಯದ ಪರಿಸ್ಥಿತಿ ಹಾಗೂ ಮುಂದೆ ಎದುರಾಗಲಿರುವ ಅಪಾಯದ ಬಗ್ಗೆ ವಿವರಿಸಿದ್ದಾರೆ.

ಕೊವಿಡ್-19 ಸಾವಿನ ಪ್ರಮಾಣದಲ್ಲಿ ಏರಿಕೆ

ಕೊವಿಡ್-19 ಸಾವಿನ ಪ್ರಮಾಣದಲ್ಲಿ ಏರಿಕೆ

ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ ಮತ್ತು ಸಾವಿನ ಪ್ರಮಾಣ ಗಮನಿಸಿದಾಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಅಪಾಯವಿದೆ. ಸಾವಿನ ಪ್ರಮಾಣ ಮಂದಗತಿ ಸೂಚಕವಾಗಿದೆ. ಆದರೆ, ಜನಸಾಮಾನ್ಯರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದಿದ್ದಾರೆ.

3 ಅಂಶಗಳ ಸಂಗಮದಿಂದ ಕೊರೊನಾವೈರಸ್ ಭೀತಿ

3 ಅಂಶಗಳ ಸಂಗಮದಿಂದ ಕೊರೊನಾವೈರಸ್ ಭೀತಿ

ಅಮೆರಿಕಾದ ಮಿನ್ನೇಸೋಟಾ ವಿಶ್ವವಿದ್ಯಾಲಯದ ತಜ್ಞ ಮೈಕೆಲ್ ಓಸ್ಟರ್ಹೋಮ್, ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುವುದರ ಹಿಂದಿನ ಮರ್ಮವನ್ನು ವಿವರಿಸಿದ್ದಾರೆ.

"ಸಾಂಕ್ರಾಮಿಕ ಆಯಾಸ" - ಕೆಲಸ ಕಾರ್ಯಗಳಿಗಾಗಿ ನಿತ್ಯ ಹೊರಗೆ ಸಂಚರಿಸುವ ಜನರಲ್ಲಿ ಹೆಚ್ಚಾಗಿ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತಿದೆ.

"ಸಾಂಕ್ರಾಮಿಕ ಕೋಪ" - ಉಪದ್ರವ ಎಂಬುವುದು ನಿಜವಾದ ಬೆದರಿಕೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ

"ಶೀತ ಹವಾಮಾನ" - ಶೀತ ಹವಾಮಾನದಿಂದಾಗಿ ಜನರು ಮನೆಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಆದರೆ ಇನ್ನೊಂದು ಕಡೆಯಲ್ಲಿ ಹೊರಗೆ ಸಂಚರಿಸುವ ಜನರಿಂದಾಗಿ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿಯ ಮೂವರನ್ನು ಒಟ್ಟಿಗೆ ಸೇರಿಸಿದಾಗ ಸಿಗುವ ಫಲಿತಾಂಶವು ನಮಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ ಎಂದು ಮೈಕಲ್ ಓಸ್ಟ್ ರ್ಹೋಮ್ ತಿಳಿಸಿದ್ದಾರೆ.

ಚಳಿಗಾಲದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯ

ಚಳಿಗಾಲದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಅಪಾಯ

ಅಮೆರಿಕಾದಲ್ಲಿ ಏಪ್ರಿಲ್ ವೇಳೆಗೆ ಪ್ರತಿನಿತ್ಯ 2200 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುವ ಅಪಾಯವಿದೆ. ಮುಂಬರುವ ಫೆಬ್ರವರಿ ವೇಳೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 386000ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಕೊವಿಡ್-19 ಸೋಂಕಿಗೆ ಮೊದಲ ಲಸಿಕೆಯು 2021ರ ಮಧ್ಯಭಾಗದಲ್ಲಿ ಲಭ್ಯವಾಗಲಿದೆ. ಆದರೆ ಅದಕ್ಕೂ ಮೊದಲು ಅಮೆರಿಕಾದಲ್ಲಿ ಎದುರಾಗುವ ಚಳಿಗಾಲದ ವೇಳೆ ಸಾವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

ಎರಡು ದಿನಗಳಲ್ಲಿ 1.60 ಲಕ್ಷ ಹೊಸ ಪ್ರಕರಣ

ಎರಡು ದಿನಗಳಲ್ಲಿ 1.60 ಲಕ್ಷ ಹೊಸ ಪ್ರಕರಣ

ಅಮೆರಿಕಾದಲ್ಲಿ ಕಳೆದ ಏಳು ದಿನಗಳ ಸರಾಸರಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯೇ 68,767 ಆಗಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವು ತಿಳಿಸಿದೆ. ಕಳೆದ ಶುಕ್ರವಾರ ಮತ್ತು ಶನಿವಾರ ಪ್ರತಿನಿತ್ಯ 80,000 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಜುಲೈ ಮಧ್ಯಭಾಗದಲ್ಲಿ ಒಂದು ದಿನ ಪತ್ತೆಯಾದ 67293 ಹೊಸ ಪ್ರಕರಣಗಳೇ ಅತಿ ಕಡಿಮೆ ಎಂದು ಹೇಳಲಾಗಿದೆ. ಇನ್ನು, ಅಮೆರಿಕಾದಲ್ಲಿ ಕೊವಿಡ್-19 ಲಕ್ಷಣಗಳಿಲ್ಲದೇ ಇರುವವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಪರೀಕ್ಷೆಗೊಳಗಾದ ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದಂತೆ ಅಂಕಿ-ಅಂಶಗಳು ಪತ್ತೆಯಾಗುತ್ತಿವೆ. ಉಳಿದಂತೆ ಸಾಕಷ್ಟು ಪ್ರಕರಣಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯೇ ಸಿಗುತ್ತಿಲ್ಲ ಎನ್ನಲಾಗಿದೆ.

ಕೊರೊನಾವೈರಸ್ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ

ಕೊರೊನಾವೈರಸ್ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ

"ನಾವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ಬದಲಿಗೆ ಕಂಟೇನ್ಮೆಂಟ್ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ ಎಂದು ಅಮೆರಿಕಾದ ವೈಟ್ ಹೌಸ್ ಸಿಬ್ಬಂದಿ ಮುಖ್ಯಸ್ಥ ಮಾರ್ಕ್ ಮೀಡೋಸ್ ಹೇಳಿದ್ದಾರೆ. ಕೊರೊನಾವೈರಸ್ ಸೋಂಕಿನಿಂದಾಗಿ ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದ ಡೊನಾಲ್ಡ್ ಟ್ರಂಪ್ ಕೂಡಾ ಡಿಸ್ಚಾರ್ಜ್ ಆಗುತ್ತಿದ್ದಂತೆ ದೇಶವು ಹೊಸ ತಿರುವು ಪಡೆದುಕೊಳ್ಳುತ್ತಿದೆ ಎಂದಿದ್ದರು.

ಕೊರೊನಾವೈರಸ್ ಸೋಂಕಿತರಿಗೆ ಬೆಡ್ ಕೊರತೆ

ಕೊರೊನಾವೈರಸ್ ಸೋಂಕಿತರಿಗೆ ಬೆಡ್ ಕೊರತೆ

ಅಮೆರಿಕಾದ ಓಕ್ಲಾಹೋಮ್ ನಗರದಲ್ಲಿ ಕೊರೊನಾವೈರಸ್ ಸ್ಫೋಟದಿಂದಾಗಿ ಸೋಂಕಿತರಿಗೆ ಬೆಡ್ ಅಭಾವ ಎದುರಾಯಿತು. ವೈದ್ಯಕೀಯ ಸಿಬ್ಬಂದಿಗೆ 25000 ಬೋನಸ್ ನೀಡಿ ನೇಮಿಸಿಕೊಳ್ಳಲಾಗಿದ್ದು, ಸೋಂಕಿತರಿಗೆ ಬೆಡ್ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ರಾಜ್ಯದ ಹಲವು ಭಾಗಗಳಿಗೆ ರವಾನಿಸಲಾಗಿತ್ತು. ರಾಜ್ಯದ ಹಲವೆಡೆ ಐಸಿಯು ಸಹಿತ ಬೆಡ್ ವ್ಯವಸ್ಥೆ ಕಲ್ಪಿಸಿದ ಹಲವು ಕಡೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿತ್ತು. ಬೆಡ್ ವ್ಯವಸ್ಥೆಯಿಲ್ಲದೇ ಸ್ಥಳೀಯ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ವೈದ್ಯ ಡಾ. ಸ್ಯಾಮ್ ರಿಟರ್ಮನ್ ಹೇಳಿದ್ದರು.

ಎಲ್ ಪ್ಯಾಸೋ ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ

ಎಲ್ ಪ್ಯಾಸೋ ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ

ಟೆಕ್ಸಾಸ್ ಗಡಿಗೆ ಹೊಂದಿಕೊಂಡಿರುವ ಎಲ್ ಪ್ಯಾಸೋ ನಗರದಲ್ಲಿ ಕೊರೊನಾವೈರಸ್ ಸೋಂಕಿನ ನಿಯಂತ್ರಿಸುವ ಉದ್ದೇಶದಿಂದ ನಿಶೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎರಡು ವಾರಗಳವರೆಗೂ ಎಲ್ಲರೂ ಮನೆಗಳಲ್ಲೇ ಇರುವಂತೆ ಸೂಚಿಸಲಾಗಿದ್ದು, ಅಗತ್ಯ ವಸ್ತುಗಳ ಖರೀದಿ, ಆಸ್ಪತ್ರೆ ಮತ್ತು ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಜೊತೆಗೆ ದಂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ಅಮೆರಿಕಾದಲ್ಲೇ ಅತಿಹೆಚ್ಚು ಕೊರೊನಾವೈರಸ್ ಪ್ರಕರಣ

ಅಮೆರಿಕಾದಲ್ಲೇ ಅತಿಹೆಚ್ಚು ಕೊರೊನಾವೈರಸ್ ಪ್ರಕರಣ

ವಿಶ್ವದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, 89,62,783 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 58,33,824 ಸೋಂಕಿತರು ಗುಣಮುಖರಾಗಿದ್ದು, 28,97,914 ಸಕ್ರಿಯ ಪ್ರಕರಣಗಳಿವೆ. ಮಹಾಮಾರಿಗೆ ದೇಶದಲ್ಲಿ 2,31,045 ಜನರು ಪ್ರಾಣ ಬಿಟ್ಟಿದ್ದಾರೆ. ಇನ್ನು, ಜಗತ್ತಿನಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 43343796ರ ಗಡಿ ದಾಟಿದೆ. ಮಹಾಮಾರಿಗೆ ಬಲಿಯಾದವರ ಸಂಖ್ಯೆಯು 11,59,082ಕ್ಕೂ ಹೆಚ್ಚಾಗಿದೆ. ಇನ್ನೊಂದು ಕಡೆಯಲ್ಲಿ 31900845 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.

Recommended Video

Rishab Pant ಅವರನ್ನು ODI ಹಾಗು T20 ಇಂದ ಕೈ ಬಿಟ್ಟ BCCI | Oneindia Kannada

English summary
USA Experts Fear About Rising Coronavirus Death Cases In America In Upcoming Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X