• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತೀಯರಿಗೆ ಬಂಪರ್ ಆಫರ್..! ಕೆಲಸ ಖಾಲಿ ಇದೆ, ಆದರೆ ಅಭ್ಯರ್ಥಿಗಳೇ ಇಲ್ಲ..!

|

ಕೊರೊನಾ ಅಪ್ಪಳಿಸಿದ ಬಳಿಕ ಅಮೆರಿಕ ಸಾಕಷ್ಟು ಬದಲಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಮಕಾಡೆ ಮಲಗಿದ್ದ ದೇಶ ಈಗೀಗ ಚೇತರಿಕೆ ಕಾಣುತ್ತಿದೆ. ಜೋ ಬೈಡನ್ ಕೈಗೊಂಡಿರುವ ಕೆಲವು ಕಠಿಣ ಕ್ರಮ ಅಮೆರಿಕದಲ್ಲಿ ಆಸೆ ಚಿಗುರುವಂತೆ ಮಾಡಿದೆ. ಈ ಮೂಲಕ ಬರೋಬ್ಬರಿ ವರ್ಷದ ಬಳಿಕ ಅಮೆರಿಕದಲ್ಲಿ ಕೆಲಸ ಖಾಲಿ ಇದೆ ಎಂಬ ಬೋರ್ಡ್‌ಗಳು ಕಾಣುತ್ತಿವೆ. ಆದರೆ ಲಭ್ಯವಿರುವ ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳೇ ಸಿಗದೆ ಮಾಲೀಕರು ಕಂಗಾಲಾಗಿದ್ದಾರೆ.

ಏಪ್ರಿಲ್‌ನಲ್ಲಿ 2 ಲಕ್ಷ 66 ಸಾವಿರ ಜನರು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇದು ಆರ್ಥಿಕ ತಜ್ಞರು ಅಂದಾಜು ಮಾಡಿದ್ದಕ್ಕಿಂತ ಕಳಪೆ ಸಾಧನೆಯಾಗಿದ್ದರೂ, ಒಂದೇ ಶೇ. 6ರಷ್ಟು ಜನರಿಗೆ ಉದ್ಯೋಗ ದೊರೆತಿರುವುದು ಅಮೆರಿಕದ ಆರ್ಥಿಕ ಸುಧಾರಣೆಗೆ ಕೈಗನ್ನಡಿ.

ಹಳೇ ಬೇರು, ಹೊಸ ಚಿಗುರು: ಕೊರೊನಾ ಕಟ್ಟಿಹಾಕಿದ ಜೋ ಬೈಡನ್..?ಹಳೇ ಬೇರು, ಹೊಸ ಚಿಗುರು: ಕೊರೊನಾ ಕಟ್ಟಿಹಾಕಿದ ಜೋ ಬೈಡನ್..?

ಟ್ರಂಪ್ ಆಡಳಿತದ ವೇಳೆ ನಿಧಾನವಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತಾ ಸಾಗಿದ್ದ ಅಮೆರಿಕ, ಬಳಿಕ ಕೊರೊನಾ ಅಪ್ಪಳಿಸಿದ ಬಳಿಕ ತತ್ತರಿಸಿ ಹೋಗಿತ್ತು. ಕೋಟ್ಯಂತರ ಅಮೆರಿಕನ್ನರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಆದರೆ ಬೈಡನ್ ಆಡಳಿತ ಈ ಕೆಟ್ಟ ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸಿ, ನಿರುದ್ಯೋಗ ತೊಲಗಿಸಲು ಯತ್ನಿಸುತ್ತಿದೆ.

ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ..!

ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ..!

ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಸುಮಾರು 6 ಲಕ್ಷ ಜನರು ಬಲಿಯಾಗಿದ್ದಾರೆ. ಹೀಗೆ ಡೆಡ್ಲಿ ಕೊರೊನಾಗೆ ಬಲಿಯಾದವರ ಪೈಕಿ ಹಲವು ಗಣ್ಯರು ಸೇರಿದ್ದಾರೆ. ನುರಿತ ತಜ್ಞರು, ತಂತ್ರಜ್ಞರು ಹೀಗೆ ಹಲವಾರು ಕ್ಷೇತ್ರಗಳು ಅರ್ಹರನ್ನು ಕಳೆದುಕೊಂಡಿವೆ. ಆದರೆ ಇವರ ಸ್ಥಾನ ತುಂಬಲು ಈಗ ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹೀಗಾಗಿ ಕೆಲ ಕೈಗಾರಿಕೆಗಳು ತಮ್ಮಲ್ಲಿ ಕೆಲಸ ಖಾಲಿ ಇದ್ದರೂ ಅದನ್ನು ಭರ್ತಿ ಮಾಡಲು ಪರದಾಡುತ್ತಿವೆ. ನಿಧಾನವಾಗಿ ಅಮೆರಿಕದ ಆರ್ಥಿಕತೆ ಹಳಿಗೆ ಮರಳುತ್ತಿದ್ದು ಕೆಲಸ ಕಳೆದುಕೊಂಡು ಕಂಗಾಲಾಗಿದ್ದವರಲ್ಲಿ ಸಂತಸ ಮೂಡಿದೆ.

ಬೈಡನ್ ಬದ್ಧತೆ ಮಾದರಿ..!

ಬೈಡನ್ ಬದ್ಧತೆ ಮಾದರಿ..!

‘ಅಮೆರಿಕ ಮೊದಲು', ‘ಅಮೆರಿಕನ್ನರಿಗೆ ಆದ್ಯತೆ' ಹೀಗೆ ಬಾಯಿ ಬಿಟ್ಟರೆ ಸಾಕು ಅಮೆರಿಕ, ಅಮೆರಿಕ ಎನ್ನುತ್ತಿದ್ದ ಮಾಜಿ ಅಧ್ಯಕ್ಷ ಟ್ರಂಪ್ ಸಾಧಿಸಿದ್ದು ಅಷ್ಟಕ್ಕಷ್ಟೆ. ಬೇರೆ ಬೇರೆ ದೇಶಗಳನ್ನ ಬಿಡಿ, ಸ್ವತಃ ಅಮೆರಿಕದ ಪ್ರಜೆಗಳಿಗೂ ಟ್ರಂಪ್ ಹೇಳಿಕೆಗಳಿಂದ ಪ್ರಯೋಜನ ಆಗಲಿಲ್ಲ. ಮೇಕ್ ಅಮೆರಿಕ ಗ್ರೇಟ್ ಅಗೈನ್ ಹಾಗೂ ಅಮೆರಿಕ ಫಸ್ಟ್ ಎಂಬ ಟ್ರಂಪ್ ಘೋಷವಾಕ್ಯ ಪ್ರಯೋಜನಕ್ಕೆ ಬರಲಿಲ್ಲ. ಆದರೆ ಬೈಡನ್ ಗುಟ್ಟಾಗಿ ಇದನ್ನು ಸಾಧಿಸುತ್ತಿದ್ದಾರೆ. ಇತರ ದೇಶಗಳ ಉದ್ಯೋಗಿಗಳಿಗೆ ನಷ್ಟ ಆಗದ ರೀತಿಯಲ್ಲೇ ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ವಲಸಿಗರ ಪರ ಕಾನೂನು ಜಾರಿಗೆ ತಂದಿರುವ ಬೈಡನ್, ಇತರ ದೇಶಗಳ ಶತ್ರುತ್ವ ಕಟ್ಟಿಕೊಳ್ಳದೆ ಅಮೆರಿಕನ್ನರ ಉದ್ಧಾರಕ್ಕೆ ಪ್ರಯತ್ನಿಸುತ್ತಿದ್ದಾರೆ.

 ಬಡವರಿಗೆ 1 ಲಕ್ಷ ರೂಪಾಯಿ

ಬಡವರಿಗೆ 1 ಲಕ್ಷ ರೂಪಾಯಿ

ಕೊರೊನಾ ಕಂಟಕದಿಂದ ಪಾರಾಗಲು ಬೈಡನ್ ಸರ್ಕಾರ ಬೃಹತ್ ಯೋಜನೆ ಹಾಕಿಕೊಂಡು, ಸುಮಾರು 1.9 ಟ್ರಿಲಿಯನ್ ಡಾಲರ್ ಮೊತ್ತದ ಪ್ಯಾಕೇಜ್‌ ಘೋಷಿಸಿದೆ. ಬೈಡನ್ ಸರ್ಕಾರದ ಮಹತ್ವಕಾಂಕ್ಷೆಯ ಪ್ಯಾಕೇಜ್‌ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಬಡ ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹಧನ ಸಿಗುತ್ತಿದೆ. ಕೆಲಸ ಕಳೆದುಕೊಂಡು ನರಳಾಡುತ್ತಿದ್ದ ಅಮೆರಿಕದ ಬಡ ಕುಟುಂಬಗಳಿಗೆ ಸರ್ಕಾರದ ಸಹಾಯ ಒಂದಷ್ಟು ಚೇತರಿಕೆ ನೀಡಿದೆ. ಹೀಗೆ ಪ್ರೋತ್ಸಾಹಧನ ನೀಡುವ ಜೊತೆ ಉದ್ಯೋಗ ಸೃಷ್ಟಿಸುವಲ್ಲಿಯೂ ಜೋ ಬೈಡನ್ ಯಶಸ್ವಿಯಾಗುತ್ತಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯೂ ಆರ್ಥಿಕ ತಜ್ಞರಲ್ಲಿದೆ.

ಭಾರತ ಮೂಲದವರಿಗೆ ಲಾಭ

ಭಾರತ ಮೂಲದವರಿಗೆ ಲಾಭ

ಟ್ರಂಪ್ ಆಡಳಿತದಲ್ಲಿ ಕೋಟಿ ಕೋಟಿ ವಲಸಿಗರಿಗೆ ಅಮೆರಿಕ ಎಂಬ ದೈತ್ಯ ದೇಶ ಪ್ರವೇಶ ಕನಸು ಮರೀಚಿಕೆ ಆಗಿತ್ತು. ಆದರೆ ಈಗ ಅಂಧಕಾರ ತೊಲಗಲಿದ್ದು, ಅಮೆರಿಕ ಎಂಬ ಪವರ್‌ಫುಲ್ ದೇಶಕ್ಕೆ ವಲಸೆ ಹೋಗಲು ಇಚ್ಛಿಸಿದ್ದ ಟ್ಯಾಲೆಂಟ್‌ಗಳಿಗೆ ಅವಕಾಶ ಸಿಗುತ್ತಿದೆ. ಇದೀಗ H1B ವೀಸಾ ಹಂಚಿಕೆ ಟ್ರಂಪ್ ಆಡಳಿತಕ್ಕಿಂತಲೂ ಸುಲಭವಾಗಿದೆ. ಟ್ರಂಪ್ ಕೈಗೊಂಡ ಪ್ರಮುಖ 6 ವಲಸೆ ನೀತಿಗಳಲ್ಲಿ ಜೋ ಬೈಡನ್ ಬದಲಾವಣೆ ತಂದಿದ್ದಾರೆ. ಇದರಿಂದ ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಉದ್ಯೋಗಿಗಳಿಗೆ ಅವಕಾಶ ಸಿಕ್ಕಿದೆ. H1B ವೀಸಾ ಪಡೆಯುವವರಲ್ಲಿ ಹೆಚ್ಚಿನವರು ಭಾರತ ಮೂಲದವರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

English summary
USA economy slightly recovering & created more than 2.6 lac jobs in April
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X