ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಕವಾಗಬಹುದು ಕೋವಿಡ್ ಸ್ವ್ಯಾಬ್ ಟೆಸ್ಟ್: ಇರಲಿ ಈ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 2: ಕೊರೊನಾ ವೈರಸ್ ಸೋಂಕು ಅನೇಕರಲ್ಲಿ ವಿವಿಧ ಅರೋಗ್ಯ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿ, ಲಕ್ಷಾಂತರ ಮಂದಿಯ ಜೀವ ತೆಗೆದಿದೆ. ಆದರೆ ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಮಾಡಿದ ಕೊರೊನಾ ವೈರಸ್ ಪರೀಕ್ಷೆಯೇ ಆಕೆಯ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ.

ಅಮೆರಿಕ ಮಹಿಳೆಯೊಬ್ಬರ ಮೂಗಿನ ಸ್ವ್ಯಾಬ್ ಪರೀಕ್ಷೆಯು ಆಕೆಯ ಮೆದುಳಿನ ಪದರವನ್ನು ಹರಿದು ಮೂಗಿನ ಮೂಲಕ ಸೋರಿಕೆಗೆ ಕಾರಣವಾಗಿದೆ. ಇದರಿಂದ ಆಕೆಯಲ್ಲಿ ಜೀವಕ್ಕೆ ಅಪಾಯಕಾರಿಯಾದ ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯಕೀಯ ಪತ್ರಿಕೆಯೊಂದಕ್ಕೆ ವೈದ್ಯರು ತಿಳಿಸಿದ್ದಾರೆ.

ಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದುಅಮೆರಿಕ ಚುನಾವಣೆಗೂ ಮುನ್ನ ಮಾಡೆರ್ನಾ ಕೊರೊನಾ ಲಸಿಕೆ ಸಿದ್ಧವಾಗದು

40ರ ಪ್ರಾಯದ ಮಹಿಳೆ, ಅಪರೂಪದ ಆರೋಗ್ಯ ಸಮಸ್ಯೆಯೊಂದಕ್ಕೆ ಒಳಗಾಗಿದ್ದಾರೆ. ಅವರಿಗೆ ನಡೆಸಿದ ಕೋವಿಡ್ ಪರೀಕ್ಷೆ ಸಮರ್ಪಕವಾಗಿರಲಿಲ್ಲ. ಈ ಘಟನೆಯನ್ನು ಜಗತ್ತಿನಾದ್ಯಂತ ಇರುವ ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶ ನೀಡಲು ವೈದ್ಯರು ಬಳಸಿಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಜನರ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಎಲ್ಲ ರೀತಿಯ ನೀತಿ ನಿಯಮಗಳನ್ನು ಅತ್ಯಂತ ನಿಖರವಾಗಿ ಪರಿಪಾಲಿಸುವ ಅಗತ್ಯವನ್ನು ವೈದ್ಯರು ಪ್ರತಿಪಾದಿಸಿದ್ದಾರೆ. ಮೂಗಿನ ಮೂಲಕ ನಡೆಸುವ ಕೊರೊನಾ ವೈರಸ್ ಪರೀಕ್ಷೆಯ ಅಪಾಯ ಅತ್ಯಂತ ಕಡಿಮೆಯಾಗಿದ್ದರೂ, ಈ ಘಟನೆಯು ಆತಂಕ ಮೂಡಿಸುವಂತಿದೆ. ಮುಂದೆ ಓದಿ.

ಸೈನಸ್ ಇದ್ದವರಿಗೆ ಸ್ವ್ಯಾಬ್ ಟೆಸ್ಟ್ ಬೇಡ

ಸೈನಸ್ ಇದ್ದವರಿಗೆ ಸ್ವ್ಯಾಬ್ ಟೆಸ್ಟ್ ಬೇಡ

ನಿರಂತರವಾದ ಸೈನಸ್ ಅಥವಾ ತಲೆಬುರುಡೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳಿಗೆ ಒಳಗಾದವರು ಮೂಗಿನ ಸ್ವ್ಯಾಬ್ ಟೆಸ್ಟ್‌ಗೆ ಒಳಗಾಗುವುದು ಬೇಡ. ಅದರ ಬದಲು ಮೌಖಿಕ ಪರೀಕ್ಷೆ ನಡೆಸುವುದಕ್ಕೆ ಆರೋಗ್ಯ ಸಿಬ್ಬಂದಿಗೆ ಮನವಿ ಮಾಡಿಕೊಳ್ಳುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸಿಬ್ಬಂದಿಗೆ ತರಬೇತಿ

ಆರೋಗ್ಯ ಸಿಬ್ಬಂದಿಗೆ ತರಬೇತಿ

'ಪರೀಕ್ಷೆ ನಡೆಸುವ ಆರೋಗ್ಯ ಸಿಬ್ಬಂದಿ ಸೂಕ್ತ ರೀತಿಯ ತರಬೇತಿಯನ್ನು ಪಡೆದುಕೊಳ್ಳುವುದು ಅತಿ ಅಗತ್ಯ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಹಾಗೆಯೇ ಪರೀಕ್ಷೆ ನಡೆಸಿದ ಬಳಿಕ ಅತ್ಯಂತ ಜಾಗರೂಕರಾಗಿರುವುದು ಅವಶ್ಯಕ' ಎಂದು ನ್ಯೂಯಾರ್ಕ್‌ನ ಲೆನಾಕ್ಸ್ ಹಿಲ್ ಆಸ್ಪತ್ರೆಯ ಕಣ್ಣು, ಕಿವಿ ಮತ್ತು ಗಂಟಲು ತಜ್ಞ ಡೆನ್ನಿಸ್ ಕ್ರೌಸ್ ಹೇಳಿದ್ದಾರೆ.

ಅಮೆಜಾನ್‌ನ ಸುಮಾರು 20,000 ಉದ್ಯೋಗಿಗಳಿಗೆ ಕೋವಿಡ್ -19 ಪಾಸಿಟಿವ್ಅಮೆಜಾನ್‌ನ ಸುಮಾರು 20,000 ಉದ್ಯೋಗಿಗಳಿಗೆ ಕೋವಿಡ್ -19 ಪಾಸಿಟಿವ್

ಮೂಗಿನಲ್ಲಿ ಸೋರುವಿಕೆ

ಮೂಗಿನಲ್ಲಿ ಸೋರುವಿಕೆ

ಮಹಿಳೆಯು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಪಡಬೇಕಿತ್ತು. ಅದಕ್ಕೂ ಮುನ್ನ ಅವರ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ ಅದರ ಬಳಿಕ ಅವರ ಮೂಗಿನ ಒಂದು ಬದಿಯಿಂದ ಸೋರುವಿಕೆ ಆರಂಭವಾಯಿತು. ನಂತರ ಅವರಲ್ಲಿ ವಿಪರೀತ ತಲೆನೋವು, ವಾಂತಿ, ಕುತ್ತಿಗೆ ನೋವು, ಬೆಳಕು ಕಂಡರೆ ವಿಹ್ವಲರಾಗುವಂತಹ ವಿವಿಧ ಸಮಸ್ಯೆಗಳು ಉಂಟಾಗಿದ್ದವು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಜಾರೆಟ್ ವಾಲ್ಶ್ ತಿಳಿಸಿದ್ದಾರೆ.

ಎರಡನೆಯ ಪರೀಕ್ಷೆಯಲ್ಲಿ ಸಮಸ್ಯೆ

ಎರಡನೆಯ ಪರೀಕ್ಷೆಯಲ್ಲಿ ಸಮಸ್ಯೆ

ಈ ಹಿಂದೆಯೂ ಅವರು ಕೋವಿಡ್ ಸ್ವ್ಯಾಬ್ ಪರೀಕ್ಷೆಗೆ ಬೇರೆ ಪ್ರಕ್ರಿಯೆ ಮೂಲಕ ಒಳಗಾಗಿದ್ದರು. ಅದರಿಂದ ಯಾ ಸಮಸ್ಯೆಯೂ ಉಂಟಾಗಿರಲಿಲ್ಲ. ಎರಡನೆಯ ಬಾರಿ ನಡೆಸಿದ ಸ್ವ್ಯಾಬ್ ಪರೀಕ್ಷೆ ಸಮರ್ಪಕವಾಗಿ ನಡೆದಿರಲಿಲ್ಲ. ಮೂಗಿಗೆ ತೂರಿಸುವ ಕೊಳವೆಯನ್ನು ಎತ್ತರದಲ್ಲಿ ಇರಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಕೊರೊನಾ ಬಂದರೆ ಮಮತಾರನ್ನು ಅಪ್ಪಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ಮುಖಂಡಗೆ ಕೊರೊನಾ ಸೋಂಕುಕೊರೊನಾ ಬಂದರೆ ಮಮತಾರನ್ನು ಅಪ್ಪಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ಮುಖಂಡಗೆ ಕೊರೊನಾ ಸೋಂಕು

ಇಂಟ್ರಾಕ್ರಾನಿಕಲ್ ಹೈಪರ್‌ಟೆನ್ಷನ್ ಸಮಸ್ಯೆ

ಇಂಟ್ರಾಕ್ರಾನಿಕಲ್ ಹೈಪರ್‌ಟೆನ್ಷನ್ ಸಮಸ್ಯೆ

ಮಹಿಳೆಯು ಹಲವು ವರ್ಷಗಳಿಂದ ಇಂಟ್ರಾಕ್ರಾನಿಕಲ್ ಹೈಪರ್‌ಟೆನ್ಷನ್ (ಮಿದುಳಿನ ಸುತ್ತಲೂ ಹರಿಯುವ ದ್ರವ್ಯದ ಅಧಿಕ ಒತ್ತಡದ ಸಮಸ್ಯೆ) ತೊಂದರೆಯಿಂದ ಬಳಲುತ್ತಿದ್ದರು. ಮಿದುಳನ್ನು ರಕ್ಷಿಸುವ ಮತ್ತು ಅದನ್ನು ಪೋಷಿಸುವ ಮಿದುಳುಬಳ್ಳಿಯ ದ್ರವ್ಯದ ಒತ್ತಡ ಅತಿಯಾಗಿತ್ತು. ಇದನ್ನು ವೈದ್ಯರು ಸರಿಪಡಿಸಿದ್ದರು. ಕೋವಿಡ್ ಪರೀಕ್ಷೆ ಆಕೆಯ ಎನ್ಸೆಫಾಲೊಸೆಲೆ ಅಥವಾ ಮಿದುಳಿನಿಂದ ಮೂಗಿಗೆ ಸಂಪರ್ಕಿಸುವ ಪದರಕ್ಕೆ ಹಾನಿ ಮಾಡಿತ್ತು.

ಮಿದುಳಿನ ಸೋಂಕಿನ ಅಪಾಯ

ಮಿದುಳಿನ ಸೋಂಕಿನ ಅಪಾಯ

ಹಳೆಯ ಸ್ಕ್ಯಾನ್‌ಗಳಲ್ಲಿ ಅದು ವೈದ್ಯರ ಗಮನಕ್ಕೆ ಬಂದಿರಲಿಲ್ಲ. ಬೇರೆ ವೈದ್ಯರು ಈ ಸ್ಕ್ಯಾನ್‌ಗಳನ್ನು ಗಮನಿಸಿದಾಗ ಅಲ್ಲಿ ಸಮಸ್ಯೆ ಇರುವುದು ಕಂಡುಬಂದಿತ್ತು. ಜುಲೈನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸಲಾಗಿತ್ತು. ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಹೋಗಿದ್ದರೆ ಮೂಗಿನ ಮೂಲಕ ಬೆಳೆದ ಬ್ಯಾಕ್ಟೀರಿಯಾಗಳು ಮಿದುಳಿನ ಸೋಂಕಿಗೆ ಕಾರಣವಾಗಿ ಅವರ ಜೀವಕ್ಕೆ ಎರವಾಗುವ ಅಪಾಯವಿತ್ತು.

Recommended Video

ಕಡೆಗೂ ಪ್ರಕರಣದ ಬಗ್ಗೆ ಮೌನ ಮುರಿದ UP ಮುಖ್ಯಮಂತ್ರಿ Yogi AdityaNath | Oneindia Kannada

English summary
A Covid-19 nasal swab test punctured a US woman's brain lining caused fluid to leak from her nose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X