ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ವರ್ಷದಿಂದ ಕೋಮಾದಲ್ಲಿರುವಾಕೆ ಮಗುವಿಗೆ ಜನ್ಮನೀಡಿದಳು!

|
Google Oneindia Kannada News

ವಾಷಿಂಗ್ಟನ್, ಜನವರಿ 5: ಕಳೆದ 14 ವರ್ಷಕ್ಕೂ ಹೆಚ್ಚು ಕಾಲದಿಂದ ಕೋಮಾದಲ್ಲಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಮೆರಿಕದ ಹಸೀಂಡಾದಲ್ಲಿನ ಹೆಲ್ತ್‌ಕೇರ್‌ನಲ್ಲಿ ನಡೆದಿದೆ.

42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ 42ವರ್ಷಗಳ ಕೋಮಾದಿಂದ ಚಿರನಿದ್ರೆಗೆ ಜಾರಿದ ಅರುಣಾ

ಈ ಘಟನೆ ಹೆಲ್ತ್‌ಕೇರ್‌ನಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, ಆಸ್ಪತ್ರೆ ವಿರುದ್ಧ ತನಿಖೆ ಆರಂಭಿಸಲಾಗಿದೆ.

ಮನೆಗೆಲಸದಾಕೆ ಬಗ್ಗೆ ಫಿಲಿಪೈನ್ಸ್ ಅಧ್ಯಕ್ಷರ ಹೇಳಿಕೆಗೆ ಭಾರೀ ವಿರೋಧಮನೆಗೆಲಸದಾಕೆ ಬಗ್ಗೆ ಫಿಲಿಪೈನ್ಸ್ ಅಧ್ಯಕ್ಷರ ಹೇಳಿಕೆಗೆ ಭಾರೀ ವಿರೋಧ

ವಿಶೇಷವೆಂದರೆ ಕೋಮಾದಲ್ಲಿದ್ದ ಮಹಿಳೆ, ಮಗುವಿಗೆ ಜನ್ಮನೀಡುವವರೆಗೂ ಆಕೆ ಗರ್ಭಿಣಿ ಎನ್ನುವುದೇ ತಿಳಿದಿರಲಿಲ್ಲ. ಆಕೆ ಸಣ್ಣನೆ ನರಳುವುದು ಕೇಳಿಸುತ್ತಿತ್ತು. ಆದರೆ, ಆಕೆಗೆ ಏನು ಸಮಸ್ಯೆಯಾಗುತ್ತಿದೆ ಎಂಬುದು ವೈದ್ಯರಿಗೆ ಅರಿವಾಗಿರಲಿಲ್ಲ.

ಡಿಸೆಂಬರ್ 29ರಂದು ಮಗು ಜನನವಾಗಿದ್ದು, ಆರೋಗ್ಯವಾಗಿದೆ.

US woman in coma 14 years gives birth to baby boy sexual abuse hacienda

14 ವರ್ಷದ ಹಿಂದೆ ಉಂಟಾದ ಅವಘಡದಲ್ಲಿ ನೀರಿನಲ್ಲಿ ಮುಳುಗಿದ್ದ ಮಹಿಳೆಯ ಮೆದುಳಿಗೆ ತೀವ್ರ ಹಾನಿಯಾಗಿತ್ತು. ಅಂದಿನಿಂದಲೂ ಅವರು ಕೋಮಾ ಸ್ಥಿತಿಯಲ್ಲಿಯೇ ಬದುಕಿದ್ದಾರೆ. ಸಂವಹನ ಮತ್ತು ಸ್ವಯಂ ಚಲನೆಯ ಸಾಮರ್ಥ್ಯ ಇಲ್ಲದ ಅವರಿಗೆ ದಿನದ 24 ಗಂಟೆಯೂ ಆರೈಕೆ ಬೇಕಾಗಿತ್ತು. ಹೀಗಾಗಿ ಆಸ್ಪತ್ರೆಯ ಅನೇಕ ಸಿಬ್ಬಂದಿಗೆ ಆ ಕೊಠಡಿಯೊಳಗೆ ಪ್ರವೇಶಾವಕಾಶವಿತ್ತು.

ಸಹಜೀವನದಲ್ಲಿನ ಸಹಮತದ ಸೆಕ್ಸ್ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪುಸಹಜೀವನದಲ್ಲಿನ ಸಹಮತದ ಸೆಕ್ಸ್ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬಳಿಕ ಆಸ್ಪತ್ರೆ ಎಚ್ಚರಿಕೆ ವಹಿಸಿದ್ದು, ಮಹಿಳಾ ರೋಗಿಯ ಕೊಠಡಿಗೆ ತೆರಳುವ ಪುರುಷ ಸಿಬ್ಬಂದಿಯೊಂದಿಗೆ ಮಹಿಳಾ ಉದ್ಯೋಗಿ ತೆರಳುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

English summary
A US woman who is in vegitative state gives birth to a baby boy. Incident sparked a sex abuse investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X