ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಅಮೆರಿಕ ಬೆಂಬಲ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 4: ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಅನೇಕ ವಿದೇಶಿ ಸೆಲೆಬ್ರಿಟಿಗಳು ರೈತರ ಪರ ಧ್ವನಿ ಎತ್ತಿರುವುದರ ನಡುವೆಯೇ ಭಾರತದ ಹೊಸ ಕೃಷಿ ಕಾಯ್ದೆಗಳನ್ನು ಅಮೆರಿಕ ಬೆಂಬಲಿಸಿದೆ. ಈ ಕಾಯ್ದೆಗಳು ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಭಾರಿ ಪ್ರಮಾಣದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಸ್ವಾಗತಾರ್ಹ ಹೆಜ್ಜೆಗಳಾಗಿವೆ ಎಂದು ಅಮೆರಿಕ ಹೇಳಿದೆ.

ಭಾರತದಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆಗಳ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರು, ಯಾವುದೇ ಬೆಳೆಯುತ್ತಿರುವ ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗಳು ಹೆಗ್ಗುರುತಾಗಿರುತ್ತವೆ ಎಂಬುದನ್ನು ಅಮೆರಿಕ ಪರಿಗಣಿಸಿದೆ. ಪಕ್ಷಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿ

'ಯಾವುದೇ ಅಭಿವೃದ್ಧಿಶೀಲ ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗಳು ಮುಖ್ಯ ಗುರುತು ಎಂದು ನಾವು ಪರಿಗಣಿಸುತ್ತೇವೆ. ಅದನ್ನು ಭಾರತದ ಸುಪ್ರೀಂಕೋರ್ಟ್ ಕೂಡ ಹೇಳಿರುವುದನ್ನು ಗಮನಿಸಬೇಕು' ಎಂದು ವಕ್ತಾರರು ತಿಳಿಸಿದ್ದಾರೆ. ಮುಂದೆ ಓದಿ.

ಸುಧಾರಣೆಗಳನ್ನು ಸ್ವಾಗತಿಸುತ್ತದೆ

ಸುಧಾರಣೆಗಳನ್ನು ಸ್ವಾಗತಿಸುತ್ತದೆ

'ಪಕ್ಷಗಳ ನಡುವೆ ಇರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ನಾವು ಉತ್ತೇಜನ ನೀಡುತ್ತೇವೆ. ಸಾಮಾನ್ಯವಾಗಿ ಭಾರತದ ಮಾರುಕಟ್ಟೆಯ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಪ್ರಮಾಣದ ಖಾಸಗಿ ವಲಯದ ಬಂಡವಾಳವನ್ನು ಆಕರ್ಷಿಸುವ ಕ್ರಮಗಳನ್ನು ಅಮೆರಿಕ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.

ಅಂತರ್ಜಾಲ ಕಡಿತಕ್ಕೆ ಪ್ರತಿಕ್ರಿಯೆ

ಅಂತರ್ಜಾಲ ಕಡಿತಕ್ಕೆ ಪ್ರತಿಕ್ರಿಯೆ

'ಬೆಳವಣಿಗೆಯಾಗುತ್ತಿರುವ ಪ್ರಜಾಪ್ರಭುತ್ವದಲ್ಲಿ ಅಂತರ್ಜಾಲ ಸೇರಿದಂತೆ ಮಾಹಿತಿಯ ತಡೆಯಿಲ್ಲದ ಲಭ್ಯತೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಅಗತ್ಯ ಎಂಬುದನ್ನು ನಾವು ಪರಿಗಣಿಸಿದ್ದೇವೆ' ಎನ್ನುವ ಮೂಲಕ ದೆಹಲಿಯ ಗಡಿಗಳಲ್ಲಿನ ಪ್ರತಿಭಟನಾ ಸ್ಥಳಗಳಲ್ಲಿ ಅಂತರ್ಜಾಲ ಕಡಿತಗೊಳಿಸಲಾಗಿದೆ ಎಂಬ ವರದಿಗಳಿಗೆ ಅಮೆರಿಕ ಪ್ರತಿಕ್ರಿಯೆ ನೀಡಿದೆ.

ಗ್ರೆಟಾ ಟ್ವೀಟ್‌ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?ಗ್ರೆಟಾ ಟ್ವೀಟ್‌ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?

ಸಾಕಷ್ಟು ಚರ್ಚೆ ನಡೆಸಲಾಗಿದೆ

ಸಾಕಷ್ಟು ಚರ್ಚೆ ನಡೆಸಲಾಗಿದೆ

'ಭಾರತೀಯ ಸಂಸತ್ತು ಸಂಪೂರ್ಣ ಚರ್ಚೆ ಹಾಗೂ ಸಂವಾದದ ಬಳಿಕ ಕೃಷಿ ವಲಯಕ್ಕೆ ಸಂಬಂಧಿಸಿದ ಸುಧಾರಣೆಯ ಮಸೂದೆಯನ್ನು ಅಂಗೀಕರಿಸಿದೆ. ಈ ಸುಧಾರಣೆಗಳು ವಿಸ್ತರಿಸಿದ ಮಾರುಕಟ್ಟೆ ಲಭ್ಯತೆ ಮತ್ತು ರೈತರಿಗೆ ಬಹುದೊಡ್ಡ ಸವಲತ್ತುಗಳನ್ನು ಒದಗಿಸಿದೆ. ಅವರು ಕೂಡ ಆರ್ಥಿಕ ಸದೃಢತೆಯ ಮತ್ತು ಪರಿಸರ ಸುಸ್ಥಿರತೆಯ ಕೃಷಿ ನಡೆಸಲು ಇದು ಅವಕಾಶ ಮಾಡಲಿದೆ' ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹಲವು ಮಾತುಕತೆಗಳನ್ನು ನಡೆಸಿದೆ

ಹಲವು ಮಾತುಕತೆಗಳನ್ನು ನಡೆಸಿದೆ

'ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸುವ ಮೂಲಕ ಭಾರತ ಸರ್ಕಾರವು ಅವರ ಪ್ರತಿನಿಧಿಗಳ ಜತೆ ಸರಣಿ ಮಾತುಕತೆಗಳನ್ನು ನಡೆಸಿದೆ. ಸಂಧಾನಗಳಲ್ಲಿ ಕೇಂದ್ರ ಸಚಿವರು ಭಾಗಿಯಾಗಿದ್ದಾರೆ. ಈಗಾಗಲೇ ಹನ್ನೊಂದು ಸುತ್ತಿನ ಮಾತುಕತೆಗಳು ನಡೆದಿವೆ. ಸರ್ಕಾರವು ಕಾನೂನುಗಳನ್ನು ತಡೆಹಿಡಿಯ ಆಫರ್ ಕೂಡ ನೀಡಿದೆ. ಇದನ್ನು ಸ್ವತಃ ಪ್ರಧಾನಿ ಕೂಡ ನೀಡಿದ್ದಾರೆ' ಎಂದು ಸಚಿವಾಲಯ ಹೇಳಿದೆ.

"ಭಾರತದ ಪ್ರತಿಷ್ಠೆಗಾಗಿರುವ ಧಕ್ಕೆಗೆ ಕ್ರಿಕೆಟಿಗರ ಟ್ವೀಟ್‌ಗಳು ಪರಿಹಾರವಲ್ಲ"

English summary
America extended its support to Indian government for new farm laws, saying that would improve the efficiency of Indian market and attract greater private sector investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X