ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 22: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಪಾಕಿಸ್ತಾನಕ್ಕೆ ಮುಂದೆ ಮಾರಕವಾಗಲಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಅಮೆರಿಕದ ವೂಡ್‌ರಾ ವಿಲ್ಸನ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಾತನಾಡಿದ ದಕ್ಷಿಣ ಏಷ್ಯಾದ ಅಮೆರಿಕದ ರಾಯಭಾರಿ ಅಲೈಸ್ ವೆಲ್ಸ್, ಚೀನಾವು ತನ್ನ ಈ ಬೃಹತ್ ಮೂಲಸೌಕರ್ಯ ಯೋಜನೆಯನ್ನು ಮುಂದುವರಿಸಿದ್ದೇ ಆದಲ್ಲಿ, ಪಾಕಿಸ್ತಾನ ಸುದೀರ್ಘಾವಧಿಯ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಸಿಗುವ ಲಾಭ ಅತ್ಯಲ್ಪ ಎಂದು ಹೇಳಿದ್ದಾರೆ.

ಭಾರತದ ಮೇಲಿದ್ದ ಅಂಚೆ ನಿಷೇಧ ತೆರವುಗೊಳಿಸಿದ ಪಾಕ್ ಭಾರತದ ಮೇಲಿದ್ದ ಅಂಚೆ ನಿಷೇಧ ತೆರವುಗೊಳಿಸಿದ ಪಾಕ್

ಏಷ್ಯಾದ ಎರಡು ದೇಶಗಳ ನಡುವೆ ನಿರ್ಮಾಣವಾಗಲಿರುವ ಈ ಕಾರಿಡಾರ್ ಉಭಯ ದೇಶಗಳ ಪರಿಸ್ಥಿತಿಯನ್ನು ಬದಲಿಸಲಿದೆ ಎಂದೇ ಹೇಳಲಾಗುತ್ತಿದೆ. ಆದರೆ ಇದರಿಂದ ಚೀನಾಕ್ಕೆ ಮಾತ್ರ ಲಾಭ ಸಿಗಲಿದೆ. ಸಿಪಿಇಸಿ ಯಾವುದೇ ಅನುದಾನಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟ ಎಂದು ತಿಳಿಸಿದ್ದಾರೆ.

US Warns Pakistan About CPEC With China

ಬಹುಕೋಟಿ ಡಾಲರ್ ವೆಚ್ಚದ ಈ ಯೋಜನೆಯು ರಿಯಾಯಿತಿ ರಹಿತ ಸಾಲದಿಂದ ನಡೆಯುತ್ತಿದ್ದು, ಚೀನಾದ ಕಂಪೆನಿಗಳು ಇದಕ್ಕೆ ತಮ್ಮದೇ ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ಕಳುಹಿಸುತ್ತಿದೆ. ಪಾಕಿಸ್ತಾನದಲ್ಲಿ ನಿರುದ್ಯೀಗದ ಪ್ರಮಾಣ ಹೆಚ್ಚುತ್ತಿರುವುದರ ನಡುವೆಯೂ ಸಿಪಿಇಸಿ ಪ್ರಾಥಮಿಕವಾಗಿ ಚೀನಾದ ಕೆಲಸಗಾರರು ಮತ್ತು ಪೂರೈಕೆಯನ್ನು ಅವಲಂಬಿಸಿದೆ. ಇದು ಮುಂದೆ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಇನ್ನಷ್ಟು ಹೊರೆ ಬೀಳಿಸಲಿದೆ. ಮುಂದಿನ ನಾಲ್ಕರಿಂದ ಆರು ವರ್ಷಗಳಲ್ಲಿ ಪಾಕಿಸ್ತಾನ ಬಾಕಿ ಉಳಿಸಿಕೊಂಡ ಮೊತ್ತಗಳನ್ನು ಪಾವತಿಸಬೇಕಾದಾಗ ಇದರ ಅರಿವಾಗುತ್ತದೆ ಎಂದು ಹೇಳಿದ್ದಾರೆ.

ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನದ 6ನೇ ಪತ್ರ ಕಾಶ್ಮೀರದ ಕುರಿತು ವಿಶ್ವಸಂಸ್ಥೆಗೆ ಪಾಕಿಸ್ತಾನದ 6ನೇ ಪತ್ರ

ಪಾಕಿಸ್ತಾನ ಮತ್ತು ಚೀನಾ ಸಹಭಾಗಿತ್ವದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶವನ್ನು ಹಾದುಹೋಗುವ ಆರ್ಥಿಕ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ಕೋಟ್ಯಂತರ ಡಾಲರ್ ವೆಚ್ಚವಾಗುತ್ತಿದ್ದು, ಭಾರತ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

English summary
US warned Pakistan that it may face more economic damage if China keeps continues wiith CPEC project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X