ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಬೇಡ, ನಮ್ಮಿಂದಲೇ ಪರ್ಯಾಯ ತಂತ್ರಜ್ಞಾನ ಖರೀದಿಸಿ: ಭಾರತಕ್ಕೆ ಅಮೆರಿಕ ಒತ್ತಾಯ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ರಷ್ಯಾದಿಂದ ಭಾರತ ಖರೀದಿಸಲು ನಿರ್ಧರಿಸಿರುವ ಎಸ್-400 ವೈಮಾನಿಕ ರಕ್ಷಣಾ ವ್ಯವಸ್ಥೆಗೆ ಪರ್ಯಾಯವಾಗಿ ನಾವು ಸಾಮಗ್ರಿ ಒದಗಿಸಲು ಸಿದ್ಧರಿದ್ದೇವೆ ಎಂದು ಅಮೆರಿಕ ತಿಳಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕ್ಷಿಪಣಿ ವ್ಯವಸ್ಥೆಯ ಖರೀದಿಗಾಗಿ ಭಾರತವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಷ್ಯಾದೊಂದಿಗೆ 40,000 ಕೋಟಿ ರೂಪಾಯಿ ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದಕ್ಕೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಅಮೆರಿಕದ ಎಚ್ಚರಿಕೆಗಳನ್ನು ಲೆಕ್ಕಿಸದೆ ಭಾರತ ಒಪ್ಪಂದದಲ್ಲಿ ಮುಂದುವರಿದಿತ್ತು.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್

ರಷ್ಯಾದ ಮೇಲೆ ಅಮೆರಿಕವು ನಿರ್ಬಂಧಗಳನ್ನು ವಿಧಿಸಿರುವುದರಿಂದ ಯೋಜನೆಯ ಮೊತ್ತವನ್ನು ಪಾವತಿಸುವುದಕ್ಕೆ ತೊಡಕಾಗುವ ಭೀತಿ ಎದುರಾಗಿತ್ತು.

US want to provide alternatives to s-400 air defence system to india

'ಭಾರತವು ಪರ್ಯಾಯ ಆಯ್ಕೆಯನ್ನು ಆಯ್ದುಕೊಳ್ಳುವುದರ ಬಗ್ಗೆ ನಾವು ಆಸಕ್ತರಾಗಿದ್ದೇವೆ. ಎಸ್-400ಗೆ ಪರ್ಯಾಯವಾಗಿ ಸಮರ್ಥ ತಂತ್ರಜ್ಞಾನ ವ್ಯವಸ್ಥೆ ಒದಗಿಸಲು ನಾವು ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ' ಎಂದು ಭಾರತ-ಪೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ರಕ್ಷಣಾ ಕಾರ್ಯದರ್ಶಿ ರಂಡಲ್ ಶ್ರಿವರ್ ತಿಳಿಸಿದ್ದಾರೆ.

ಭಾರತೀಯ ಸೇನೆ ಸೇರುತ್ತಿದೆ ಭೀಕರ ಅಸ್ತ್ರ ಎಸ್‌-400, ಏನಿದರ ಸಾಮರ್ಥ್ಯ? ಭಾರತೀಯ ಸೇನೆ ಸೇರುತ್ತಿದೆ ಭೀಕರ ಅಸ್ತ್ರ ಎಸ್‌-400, ಏನಿದರ ಸಾಮರ್ಥ್ಯ?

ರಷ್ಯಾದಿಂದ ಎಸ್-400 ಖರೀದಿ ಮಾಡುವುದನ್ನೇ ಭಾರತ ಆಯ್ಕೆ ಮಾಡಿದರೆ ಅದು ದುರದೃಷ್ಟಕರ ನಿರ್ಧಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಷ್ಯಾದಿಂದ ಯಾವುದೇ ಸೇನಾ ಉಪಕರಣಗಳನ್ನು ಖರೀದಿ ಮಾಡಿದರೆ ಆ ದೇಶದ ವಿರುದ್ಧ 'ಕಾಟ್ಸಾ' ಕಾನೂನು ವಿಧಿಸಲು ಅಮೆರಿಕ ಉದ್ದೇಶಿಸಿದೆ. ಭಾರತದ ಖರೀದಿ ಒಪ್ಪಂದ ಸಹ ಸೇನಾ ವ್ಯವಹಾರಕ್ಕೆ ಸಂಬಂಧಿಸಿರುವುದರಿಂದ ಅದು ಇಲ್ಲಿ ಅನ್ವಯವಾಗಲಿದೆ ಎಂದಿದ್ದಾರೆ.

ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ

ಇದು ರಷ್ಯಾವನ್ನು ಹಣಿಯಲು ಮಾಡಿರುವ ಕಾನೂನು. ಒಂದಲ್ಲ ಒಂದು ದಾರಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಏಕೆಂದರೆ ಭಾರತವು ನಮ್ಮೊಂದಿಗೆ ಬೆಳೆವಣಿಗೆ ಹೊಂದುತ್ತಿರುವ ಪಾಲುದಾರ ದೇಶವಾಗಿದೆ ಎಂದು ತಿಳಿಸಿದ್ದಾರೆ.

English summary
US has said it is working with India to provide potential alternatives to S-400 air defence system which India and Russia signed and agreement last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X