ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

H1-B ವೀಸಾ ಅರ್ಜಿದಾರರು ಖುದ್ದಾಗಿ ಸಂದರ್ಶನಕ್ಕೆ ಹಾಜರಾಗಬೇಕಿಲ್ಲ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 24:ಎಚ್‌-1 ಬಿ, ಎಲ್‌-1ಬಿ ವೀಸಾಗಳಿಗೆ ಖುದ್ದು ಹಾಜರಾಗಿ ಸಂದರ್ಶನ ನೀಡಬೇಕಿಲ್ಲ. ಎಚ್- 1 ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಪ್ರತಿವರ್ಷ ಬರುವ ಸಹಸ್ರಾರು ನೌಕರರ ಮೇಲೆ ತಂತ್ರಜ್ಞಾನ ಕಂಪನಿಗಳು ಅವಲಂಬಿತವಾಗಿವೆ.

ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳಿಗೆ ಇನ್ನೂ ವೈಯಕ್ತಿಕವಾಗಿ ಸಂದರ್ಶನದ ಅಗತ್ಯವಿರಬಹುದು ಮತ್ತು ಸ್ಥಳೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ.

ಎಚ್1 ಬಿ ವೀಸಾ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಇಲ್ಲ!ಎಚ್1 ಬಿ ವೀಸಾ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಇಲ್ಲ!

ಅರ್ಜಿದಾರರು ಈ ಅಭಿವೃದ್ಧಿ ಮತ್ತು ಪ್ರಸ್ತುತ ಕಾರ್ಯಾಚರಣೆಯ ಸ್ಥಿತಿ ಮತ್ತು ಸೇವೆಗಳ ಬಗ್ಗೆ ಹೆಚ್ಚು ವಿವರವಾದ ಮಾಹಿತಿಗಾಗಿ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು ಎಂದು ಅದು ಹೇಳಿದೆ.

US Waives In-Person Interviews For Range Of Visas, Including H-1B, For 2022: State Department

ವಿಶೇಷ ವೃತ್ತಿಪರರು ( ಎಚ್‌-1ಬಿ ವೀಸಾ) ಟ್ರೈನಿ ಅಥವಾ ವಿಶೇಷ ಶಿಕ್ಷಣಕ್ಕೆ ಆಗಮಿಸುವವರು ( ಎಚ್-3 ವೀಸಾ) ಇಂಟರ್ ಕಂಪನಿ ವರ್ಗಾವಣೆದಾರರು (ಎಲ್ ವೀಸಾ) ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಹೊಂದಿರುವವರು ( ಒ ವೀಸಾ) ಅಥ್ಲೆಟಿಕ್ಸ್ , ಕಲಾವಿದರು ಮತ್ತು ಎಂಟರ್ ಟ್ರೈನರ್ಸ್ ( ಪಿ ವೀಸಾ) ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ( ಕ್ಯೂ ವೀಸಾ) ಅರ್ಜಿದಾರರಿಗೆ ಡಿಸೆಂಬರ್ 31, 2022ರವರೆಗೂ ವೈಯಕ್ತಿಕ ಸಂದರ್ಶನಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ ಗುರುವಾರ ತಿಳಿಸಿದೆ.

2022ರ ಡಿಸೆಂಬರ್ 31ರವರೆಗೆ ವಲಸೆಯೇತರ ಉದ್ಯೋಗ ವೀಸಾಗಳು ಮತ್ತು ಅವರ ಅರ್ಹತಾ ಮಾನದಂಡಗಳ ಆಧಾರದಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಖುದ್ದು ಹಾಜರಾತಿ ಸಂದರ್ಶನದಿಂದ ವಿನಾಯಿತಿ ನೀಡುವಂತೆ ಕಾನ್ಸುಲರ್ ಕಚೇರಿಗಳಿಗೆ ತಾತ್ಕಾಲಿಕ ಅಧಿಕಾರ ನೀಡಲಾಗಿದೆ.

H-1B, L-1 ಮತ್ತು O-1 ವೀಸಾಗಳಿಗೆ ವಿದೇಶಗಳಿಂದ ಅರ್ಜಿ ಸಲ್ಲಿಸುವ ಅರ್ಜಿದಾರರು ಅಮೆರಿಕ ಕಾನ್ಸುಲೇಟ್‌ನಲ್ಲಿ ಖುದ್ದು ಸಂದರ್ಶನಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ. ವೀಸಾ ನೀಡುವ ಮೊದಲು ಕೊನೆಯ ಹಂತವಾಗಿ ಸಂದರ್ಶನ ಕಡ್ಡಾಯವಾಗಿ ನಡೆಯುತ್ತದೆ.

ಕಂಪೆನಿಗಳು ವಿದೇಶಗಳಿಂದ ಅತ್ಯಧಿಕ ಕೌಶಲವುಳ್ಳ ಪ್ರತಿಭೆಗಳನ್ನು ಆಕರ್ಷಿಸಲು ಆ ವರ್ಗಗಳು ಅತಿ ಹೆಚ್ಚು ಪ್ರತಿನಿಧಿಸುವ ಮಾದರಿಯ ವೀಸಾಗಳಾಗಿವೆ. ತಾತ್ಕಾಲಿಕ ಕೃಷಿ ಮತ್ತು ಕೃಷಿಯೇತರ ಉದ್ಯೋಗಿಗಳು (ಎಚ್‌-2 ವೀಸಾ), ವಿದ್ಯಾರ್ಥಿಗಳು (ಎಫ್‌ ಮತ್ತು ಎಂ ವೀಸಾಗಳು) ಮತ್ತು ವಿದ್ಯಾರ್ಥಿ ವಿನಿಮಯ ಸಂದರ್ಶಕರು (ಅಕಾಡೆಮಿಕ್ ಜೆ ವೀಸಾಗಳು) ಈ ವರ್ಗಕ್ಕೆ ಸೇರುತ್ತವೆ.

English summary
Amid growing concerns of surging COVID-19 cases, the US has announced that it will waive the in-person interview requirement for a range of visa applicants during the entire year in 2022, including for H-1B workers and students, many of whom are from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X