ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್‌ ಟ್ರಂಪ್ ಉಚ್ಚಾಟನೆ ಮನವಿ ತಿರಸ್ಕರಿಸದ ಉಪಾಧ್ಯಕ್ಷ ಮೈಕ್‌ ಪೆನ್ಸ್‌

|
Google Oneindia Kannada News

ವಾಷಿಂಗ್ಟನ್‌, ಜನವರಿ 13: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಿದ್ಧತೆಗಳು ನಡೆಯುತ್ತಿವೆ. ಟ್ರಂಪ್ ಅವರನ್ನು ಉಚ್ಚಾಟಿಸಲು 25 ನೇ ತಿದ್ದುಪಡಿಯನ್ನು ಜಾರಿಗೆ ತರಬೇಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮತದಾನ ಕೂಡ ಈಗಾಗಲೇ ನಡೆಸಲಾಯಿತು. ವಿಚಿತ್ರವೆಂದರೆ ಆಡಳಿತದಲ್ಲಿರುವ ರಿಪಬ್ಲಿಕನ್ ಪಕ್ಷದ ಸದಸ್ಯರು ಕೂಡ ಟ್ರಂಪ್ ಅವರನ್ನು ಪದಚ್ಯುತಗೊಳಿಸಲು ಒತ್ತಾಯಿಸುತ್ತಿದ್ದಾರೆ.

ಆದರೆ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಲು 25 ನೇ ತಿದ್ದುಪಡಿಯನ್ನು ಪರಿಚಯಿಸುವಂತೆ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಾಡಿದ ಮನವಿಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ತಿರಸ್ಕರಿಸಿದ್ದಾರೆ. ಆ ತಿದ್ದುಪಡಿಯನ್ನು ಪರಿಚಯಿಸಲು ಸಾಧ್ಯವಿಲ್ಲ ಎಂದು ಅವರು ತೀರ್ಮಾನಿಸಿದರು.

ಡೊನಾಲ್ಡ್‌ ಟ್ರಂಪ್ ಪದಚ್ಯುತಿಗೆ ಸಜ್ಜಾದ ಅಮೆರಿಕಾ ಸಂಸತ್: ನಾನು ಹಿಂಸಾಚಾರ ಬಯಸುವುದಿಲ್ಲ ಎಂದ ಟ್ರಂಪ್ಡೊನಾಲ್ಡ್‌ ಟ್ರಂಪ್ ಪದಚ್ಯುತಿಗೆ ಸಜ್ಜಾದ ಅಮೆರಿಕಾ ಸಂಸತ್: ನಾನು ಹಿಂಸಾಚಾರ ಬಯಸುವುದಿಲ್ಲ ಎಂದ ಟ್ರಂಪ್

ಮೈಕ್ ಪೆನ್ಸ್ ನಿರಾಕರಿಸುವುದರೊಂದಿಗೆ ಮತ್ತೊಂದು ತಲೆ ನೋವು ಶುರುವಾಗಿದ್ದು, ಯು.ಎಸ್. ಕಾಂಗ್ರೆಸ್ ಸೆನೆಟ್‌ನಲ್ಲಿ 25 ನೇ ತಿದ್ದುಪಡಿಯನ್ನು ಚರ್ಚಿಸುತ್ತಿದೆ. ಆದರೆ ಒಂದು ವೇಳೆ ಮತದಾನದಲ್ಲಿ ಗೆದ್ದರೆ, ಉಪಾಧ್ಯಕ್ಷ ಮೈಕ್ ಪೆನ್ಸ್‌ಗೆ ಇಷ್ಟವಾಗದಿದ್ದರೂ ಆ ತಿದ್ದುಪಡಿಯನ್ನು ಸದನದಲ್ಲಿ ಪರಿಚಯಿಸಬೇಕಾಗುತ್ತದೆ

US VP Mike Pence Rejects invoking 25th amendment To Oust Trump

ಇನ್ನು 25 ನೇ ತಿದ್ದುಪಡಿಯಲ್ಲಿ ಪರಿಚಯಿಸಲಾದ ನಿರ್ಣಯವು ವಿಫಲವಾದರೆ, ದೋಷಾರೋಪಣೆ ನಿರ್ಣಯವನ್ನು ಪರ್ಯಾಯವಾಗಿ ಪರಿಚಯಿಸುವ ಸಾಧ್ಯತೆಯನ್ನು ಕಾಂಗ್ರೆಸ್ ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತದೆ.

ಈ ತಿಂಗಳ 19 ರಂದು ಟ್ರಂಪ್‌ರ ಅವಧಿ ಮುಗಿಯುವ ಮುನ್ನ, ಅವರನ್ನು ಉಚ್ಚಾಟಿಸಲು ಸಿದ್ಧತೆಗಳು ಭರದಿಂದ ಸಾಗಿವೆ.

English summary
US Vice President Mike Pence told House leaders Tuesday he does not support invoking the 25th Amendment process to remove Donald Trump
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X