ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವೀಸಾ ಹಗರಣ: 130 ವಿದ್ಯಾರ್ಥಿಗಳಿಗೆ ತಪ್ಪಿನ ಅರಿವಿತ್ತು

|
Google Oneindia Kannada News

ವಾಷಿಂಗ್ಟನ್ (ಅಮೆರಿಕ), ಫೆಬ್ರವರಿ 5: ಅಮೆರಿಕದಲ್ಲಿ ನಕಲಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಮಾಡಿದ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ 130 ಮಂದಿಯಲ್ಲಿ 129 ಭಾರತೀಯರು. ಆ ಎಲ್ಲರಿಗೂ ತಾವು ಅಪರಾಧ ಮಾಡುತ್ತಿದ್ದೇವೆ ಎಂಬುದು ತಿಳಿದಿತ್ತು ಎಂಬುದನ್ನು ಸಂಬಂಧಪಟ್ಟ ಇಲಾಖೆ ತಿಳಿಸಿದೆ.

ಅಮೆರಿಕದಲ್ಲಿ ಉಳಿಯುವ ಸಲುವಾಗಿಯೇ ಹೀಗೆ ಮಾಡಿದ್ದಾರೆ. ತಾವು ಪ್ರವೇಶ ಪಡೆದ ವಿಶ್ವವಿದ್ಯಾಲಯ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂಬುದು ಅವರೆಲ್ಲರಿಗೂ ಗೊತ್ತಿತ್ತು. ದೆಹಲಿಯಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿಗೆ ಭಾರತದಿಂದ ಈ ವಿಚಾರವಾಗಿ ಶನಿವಾರ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅಮೆರಿಕ ಈ ಮೇಲಿನಂತೆ ಪ್ರತಿಕ್ರಿಯಿಸಿದೆ.

ಅಮೆರಿಕದಲ್ಲಿ ವೀಸಾ ಹಗರಣ: ಎಂಟು ಭಾರತೀಯರ ಬಂಧನ, ನೂರಾರು ಮಂದಿಗೆ ಸಂಕಷ್ಟಅಮೆರಿಕದಲ್ಲಿ ವೀಸಾ ಹಗರಣ: ಎಂಟು ಭಾರತೀಯರ ಬಂಧನ, ನೂರಾರು ಮಂದಿಗೆ ಸಂಕಷ್ಟ

ಭಾರತೀಯ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಬಗ್ಗೆ ಭಾರತವು ಆತಂಕ ವ್ಯಕ್ತಪಡಿಸಿ, ರಾಯಭಾರ ಕಚೇರಿ ನೆರವು ನೀಡಲು ಅನುವು ಮಾಡಿಕೊಡುವಂತೆ ಕೇಳಿತ್ತು. ಕಳೆದ ವಾರವಷ್ಟೇ ಕೋಮ್ ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯಿಂದ ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಅಮೆರಿಕದಲ್ಲೇ ಉಳಿದುಕೊಳ್ಳುವ ಉದ್ದೇಶದಿಂದ ಫಾರ್ಮಿಂಗ್ ಟನ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.

ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದೆ

ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದೆ

ನಕಲಿ ವಿಶ್ವವಿದ್ಯಾಲಯವನ್ನು ಅಮೆರಿಕದ ಗ್ರೇಟರ್ ಡೆಟ್ರಾಯಿಟ್ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಅಲ್ಲಿ ಯಾವುದೇ ಮೂಲ ಸೌಕರ್ಯವೂ ಇಲ್ಲದಂತೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟು, ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಉಳಿಯಲು ಅನುಕೂಲ ಮಾಡಿಕೊಡಲಾಗಿತ್ತು. ಈ ಜಾಲವನ್ನು ತನಿಖಾ ಸಂಸ್ಥೆಯು ಭೇದಿಸಿತ್ತು. ಎಂಟು ಮಂದಿ- ಅದರಲ್ಲಿ ಒಂದೋ ಭಾರತೀಯರು ಅಥವಾ ಭಾರತೀಯ ಮೂಲದ ಅಮೆರಿಕನ್ನರು ಈ ಜಾಲದ ರೂವಾರಿಗಳಾಗಿ, ಬಂಧಿತರಾಗಿದ್ದರು. ಮಿಷಿಗನ್ ಕೋರ್ಟ್ ನಲ್ಲಿ "ನಾವು ತಪ್ಪಿತಸ್ಥರಲ್ಲ" ಎಂದು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ಎಚ್- 1ಬಿ ವೀಸಾ ಪಡೆದು, ಲೂಸ್ ವಿಲ್ಲೆ ಕೆಂಟುಕಿಯಲ್ಲಿ ಇರುವ ಫಣಿದೀಪ್ ಕರಂತಿಯನ್ನು ಹತ್ತು ಸಾವಿರ ಡಾಲರ್ ಬಾಂಡ್ ಪಡೆಯುವ ಮೂಲಕ ಸೋಮವಾರ ಬಿಡುಗಡೆ ಮಾಡಲಾಗಿದೆ.

ಅಮೆರಿಕದಲ್ಲಿ ಕಾನೂನು ಬಾಹಿರವಾಗಿ ಉಳಿಯಲು ಈ ಕೃತ್ಯ

ಅಮೆರಿಕದಲ್ಲಿ ಕಾನೂನು ಬಾಹಿರವಾಗಿ ಉಳಿಯಲು ಈ ಕೃತ್ಯ

ಇತರ ಏಳು ಮಂದಿ ತಮ್ಮನ್ನು ವಶಕ್ಕೆ ಇರಿಸಿಕೊಂಡಿರುವ ಬಗ್ಗೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. "ಎಲ್ಲರಿಗೂ ಈ ಯೋಜನೆ ಬಗ್ಗೆ ಗೊತ್ತಿತ್ತು. ಫಾರ್ಮಿಂಗ್ ಟನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರು ಇರಲಿಲ್ಲ ಅಥವಾ ತರಗತಿಗಳು ಸಹ ಇರಲಿಲ್ಲ. ಅಮೆರಿಕದಲ್ಲೇ ಉಳಿಯುವ ಸಲುವಾಗಿ ತಾವು ಅಪರಾಧ ಮಾಡುತ್ತಿದ್ದೇವೆ ಎಂದು ಅವರಿಗೆ ಗೊತ್ತಿತ್ತು" ಎಂದು ಇಲಾಖೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫಾರ್ಮಿಂಗ್ ಟನ್ ವಿಶ್ವವಿದ್ಯಾಲಯದಲ್ಲಿ ಯಾವುದೇ ತರಗತಿ ನಡೆಯುತ್ತಿರಲಿಲ್ಲ. ಕಡಿಮೆ ಟ್ಯೂಷನ್ ಫೀ ಇತ್ತು. ಇಲ್ಲಿಗೆ ನೋಂದಣಿಯಾದ ಮೊದಲ ದಿನವೇ ವರ್ಕ್ ಪರ್ಮಿಟ್ ಸಿಗುತ್ತಿತ್ತು. ಆರುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಈ ವಿಶ್ವವಿದ್ಯಾಲಯದಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕಾರ್ಯಾಚರಣೆ ವಿಧಾನದ ಬಗ್ಗೆಯೇ ಪ್ರಶ್ನೆ

ಕಾರ್ಯಾಚರಣೆ ವಿಧಾನದ ಬಗ್ಗೆಯೇ ಪ್ರಶ್ನೆ

ಹಾಗೆ ನೋಡಿದರೆ ವಶಕ್ಕೆ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಬಹಳ ಹೆಚ್ಚಿತ್ತು. ಆ ಪೈಕಿ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಲಾಗಿದೆ. ವಶದಿಂದ ತಪ್ಪಿಸಿಕೊಂಡ ಎಷ್ಟೋ ಮಂದಿ ಅಮೆರಿಕ ಬಿಟ್ಟುಹೋಗಿದ್ದಾರೆ. ಭಾರತೀಯ ಸಮುದಾಯದ ನಾಯಕರ ಮೂಲಕ ಈ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಭಾರತೀಯ ರಾಯಭಾರ ಕಚೇರಿ ಶ್ರಮಿಸುತ್ತಿದೆ. ಅಮೆರಿಕಕ್ಕೆ ಭಾರತೀಯ ರಾಯಭಾರಿ ಹರ್ಷವರ್ಧನ ಶ್ರಿಂಗ್ಲ ಮಾತನಾಡಿ, ಭಾರತದ ವಿದೇಶಾಂಗ ಸಚಿವಾಲಯ ಎಲ್ಲ ವಿದ್ಯಾರ್ಥಿಗಳನ್ನು ಶೀಘ್ರವೇ ಸಂಪರ್ಕಿಸಲಿದೆ ಎಂದಿದ್ದಾರೆ. ಇನ್ನು ಅಮೆರಿಕದ ಕಾನೂನು ಇಲಾಖೆಯಿಂದ ಈ ಜಾಲವನ್ನು ಭೇದಿಸಲು ಅನುಸರಿಸಿದ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಅಮಾಯಕ ವಿದ್ಯಾರ್ಥಿಗಳನ್ನು ಈ ರೀತಿ ಸಿಲುಕಿಸುವುದು 'ಅಪರಾಧ' ಎನ್ನಲಾಗಿದೆ.

ಹತ್ತು ಲಕ್ಷಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಂದ ಅಮೆರಿಕದಲ್ಲಿ ಶಿಕ್ಷಣ

ಹತ್ತು ಲಕ್ಷಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಂದ ಅಮೆರಿಕದಲ್ಲಿ ಶಿಕ್ಷಣ

ಹತ್ತು ಲಕ್ಷಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಅದರಲ್ಲಿ ಕಳೆದ ವರ್ಷದ ಅಂದಾಜಿನಂತೆ ಎರಡು ಲಕ್ಷದಷ್ಟು ಭಾರತದ ವಿದ್ಯಾರ್ಥಿಗಳು ಇರುತ್ತಾರೆ. ವಂಚನೆ ಪ್ರಕರಣಗಳು ಅಪರೂಪ. ಈಗ ನಡೆದಿರುವುದು ಅಮೆರಿಕ ಮತ್ತು ಭಾರತದ ಶೈಕ್ಷಣಿಕ ವಿನಿಮಯ ಇತಿಹಾಸದಲ್ಲಿ ದುರದೃಷ್ಟ ಸಂಗತಿ ಎಂದು ಅಲ್ಲಿನ ಇಲಾಖೆ ಹೇಳಿದೆ. ಅಮೆರಿಕ ಸರಕಾರವು ಅಂತರರಾಷ್ಟ್ರೀಯ ಶಿಕ್ಷಣಕ್ಕೆ ಬೆಂಬಲ ನೀಡುತ್ತದೆ. ವಿದ್ಯಾರ್ಥಿಗಳ ಕಾನೂನುಬದ್ಧ ಪ್ರಯಾಣಕ್ಕೆ ನೆರವು ನೀಡುತ್ತದೆ ಎಂದಿದೆ. ಏಕೆಂದರೆ, ಈಚಿನ ಘಟನೆ ನಂತರ ಭಾರತದ ವಿದ್ಯಾರ್ಥಿಗಳು ಅಮೆರಿಕ ಹೊರತುಪಡಿಸಿ ಬೇರೆ ದೇಶಗಳತ್ತ ತೆರಳಲು ಆಲೋಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಮೇಲಿನ ಹೇಳಿಕೆ ಬಂದಿದೆ. ಈಗ ಬಂಧನದಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳ ನೆರವಿಗಾಗಿ ಭಾರತ ರಾಯಭಾರ ಕಚೇರಿ 24/7 ಹಾಟ್ ಲೈನ್ ತೆರೆದಿದೆ. ಜತೆಗೆ ನೋಡಲ್ ಅಧಿಕಾರಿಯೊಬ್ಬರನ್ನು ಸಹ ನೇಮಿಸಲಾಗಿದೆ.

English summary
All 130 foreign students, including 129 Indians, detained in the US for enrolling in a fake university were aware that they were committing a crime to fraudulently remain in the country, the State Department has said amid claims that they knew nothing about the varsity's illegal operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X