ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಒಂದೇ ದಿನ ಬರೋಬ್ಬರಿ 2800 ಮಂದಿ ಕೊರೊನಾ ಸೋಂಕಿಗೆ ಬಲಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 03: ಅಮೆರಿಕದಲ್ಲಿ ಒಂದೇ ದಿನ ಬರೋಬ್ಬರಿ 2800 ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ.

ಅಮೆರಿಕದ ಆಸ್ಪತ್ರೆಯಲ್ಲಿ 100226 ಮಂದಿ ಕೊರೊನಾ ಸೋಂಕಿತರಿದ್ದಾರೆ. ಅಮೆರಿಕದಲ್ಲಿ ನಿತ್ಯ 2 ರಿಂದ ನಾಲ್ಕು ಸಾವಿರ ಮಂದಿ ಮೃತಪಡುತ್ತಿದ್ದಾರೆ. ಬುಧವಾರ 2804 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಏಪ್ರಿಲ್ 15 ರಂದು 2603 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು.

 ಕೊರೊನಾವೈರಸ್ ಹುಟ್ಟು ಅಧ್ಯಯನ ವುಹಾನ್‌ನಿಂದ ಆರಂಭ: WHO ಕೊರೊನಾವೈರಸ್ ಹುಟ್ಟು ಅಧ್ಯಯನ ವುಹಾನ್‌ನಿಂದ ಆರಂಭ: WHO

ಅಮೆರಿಕದಲ್ಲಿ ಬರೋಬ್ಬರಿ 10 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇಡೀ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಸೋಂಕು ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲನೆಯ ಸ್ಥಾನದಲ್ಲಿದೆ.

US Virus Deaths Top 2,800 In A Single Day For First Time

ಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನ ನಡುವೆ ದಡಾರ, ಪೋಲಿಯೊ ಲಸಿಕೆ ಹಾಕಿಸಲಾದ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಸಾಲಿಗೋಜಾ ಹೇಳಿದ್ದಾರೆ.

ಪುಟ್ಟ ಮಕ್ಕಳಗೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಮೆರಿಕಾ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರಬೇಕೆಂದು ಡಾ. ಗೋಜಾ ಒತ್ತಾಯಿಸಿದ್ದಾರೆ.

ಅಮೆರಿಕದ ಬಯೋಟೆಕ್ ಫರ್ಮ್ ಮಾಡೆರ್ನಾ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಶೇ.94ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾಡೆರ್ನಾವು 30 ಸಾವಿರ ಮಂದಿ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಮಾಡಿದೆ.

ಕಳೆದ ವಾರವಷ್ಟೇ ಅಮೆರಿಕದ ಫಾರ್ಮಾಸುಟಿಕಲ್ ಕಂಪನಿ ಫೈಜರ್ ಹಾಗೂ ಅದರ ಜರ್ಮಲ್ ಪಾಲುದಾರ ಬಯೋಎನ್‌ಟೆಕ್ ತಮ್ಮ ಲಸಿಕೆ ಶೇ.90ರಷ್ಟು ಸುರಕ್ಷಿತ ಎಂದು ಹೇಳಿಕೊಂಡಿದ್ದವು.

ಕೊರೊನಾ ಲಸಿಕೆಯ ಮೂರನೇ ಪ್ರಯೋಗದಲ್ಲಿ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡ ಕೊರೊನಾ ಲಸಿಕೆ ಗುಣಪಡಿಸಿದೆ. ಈಗ ಫೈಜರ್ ನಂತರ ಎರಡನೇ ಕೊರೊನಾ ಲಸಿಕೆ ಮೇಲೆ ನಂಬಿಕೆ ಬಂದಿದೆ.

English summary
A pandemic of the novel coronavirus has now infected more than 64.6 million people and killed over 1.4 million worldwide, according to real-time data compiled by the Center for Systems Science and Engineering at Johns Hopkins University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X