ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆ

|
Google Oneindia Kannada News

ವಾಷಿಂಗ್ಟನ್, ಜೂನ್ 6: ಅಮೆರಿಕದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿದ ಭಾರತೀಯ ವಿದ್ಯಾರ್ಥಿಗಳು ಲಸಿಕೆ ಪಡೆದರೂ ಉಪಯೋಗವಿಲ್ಲದ್ದಂತಾಗಿದೆ. ಭಾರತೀಯರು ಸೇರಿದಂತೆ ಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳು ಪುನಃ ಲಸಿಕೆ ಪಡೆಯಬೇಕು ಹಾಗೂ ಆ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದಿರಬೇಕು ಯುಎಸ್ ವಿವಿಗಳು ಸೂಚಿಸಿವೆ.

ಭಾರತದ ದೇಶಿ ಕೋವ್ಯಾಕ್ಸಿನ್ ಲಸಿಕೆ ಹಾಗೂ ರಷ್ಯಾ ಉತ್ಪಾದಿತ ಸ್ಪುಟ್ನಿಕ್ ವಿ ಲಸಿಕೆ ಪಡೆದವರು ಮತ್ತೊಮ್ಮೆ ಲಸಿಕೆ ಪಡೆಯಲು 400ಕ್ಕೂ ಅಧಿಕ ಯುಎಸ್ ಕಾಲೇಜ್ ಹಾಗೂ ವಿವಿಗಳು ಸೂಚನೆ ನೀಡಿವೆ.

ದಿ ನ್ಯೂಯಾರ್ಕ್ ಟೈಮ್ಸ್ ವರದಿಯಂತೆ, ಭಾರತೀಯ ಮೂಲದ ಮಿಲ್ಲೋನಿ ದೋಶಿ(25 ವರ್ಷ) ಭಾರತದಲ್ಲಿ 2 ಡೋಸ್ ಕೋವ್ಯಾಕ್ಸಿ ನ್ ಪಡೆದಿದ್ದು, ಕೊಲಂಬಿಯಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಮುಂದಾಗಿದ್ದಾರೆ. ಆದರೆ, 2 ಡೋಸ್ ಲಸಿಕೆ ಪಡೆದರೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಆ ಲಸಿಕೆ ಮಾನ್ಯತೆ ಪಡೆಯದ ಕಾರಣ, ಮತ್ತೊಮ್ಮೆ ಲಸಿಕೆ ಗಳಿಸಲು ಸೂಚಿಸಲಾಗಿದೆ.

US Universities Ask Students Who Took Covaxin, Sputnik V to Get Re-Vaccinated

ಅಮೆರಿಕದ ವಿದ್ಯಾರ್ಥಿಗಳಿಗೆ ಫೈಜರ್, ಮಾರ್ಡೆನಾ ಹಾಗೂ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಲಭ್ಯವಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇದೇ ಲಸಿಕೆಗಳನ್ನು ನೀಡಲಾಗುತ್ತದೆ. ವಾರ್ಷಿಕವಾಗಿ 39 ಬಿಲಿಯನ್ ಯುಎಸ್ ಡಾಲರ್ ಗಳಿಕೆ ತಂದು ಕೊಡುವ ವಿದೇಶಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಅಮೆರಿಕ ಕಾಯ್ದುಕೊಳ್ಳಬೇಕಾಗುತ್ತದೆ.

Recommended Video

Indian Navyಗೆ ಈಗ 50 ಸಾವಿರ ಕೋಟಿ ವೆಚ್ಚದ Submarine | Oneindia Kannada

ಭಾರತದಿಂದ ವಾರ್ಷಿಕ 200,000 ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳುತ್ತಿದ್ದು, ಎಲ್ಲರಿಗೂ ಲಸಿಕೆ ನೀಡುವುದು ಉಭಯ ದೇಶಗಳಿಗೂ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಉತ್ತರ ಅಮೆರಿಕದ ವಿದ್ಯಾರ್ಥಿಗಳ ಸಂಘಟನೆಯ ಸುಧಾಂಶ್ ಕೌಶಿಕ್ ಅಭಿಪ್ರಾಯ ಪಟ್ಟಿದ್ದಾರೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆಯಲು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಯತ್ನಿಸುತ್ತಿದ್ದು, ಕೋವ್ಯಾಕ್ಸಿನ್ ಉತ್ಪಾದನೆ ಹಂತದಲ್ಲಿ ಕೆನಡಾದ ಸಹ ಸಂಸ್ಥೆಯ ನೆರವನ್ನು ಉಲ್ಲೇಖಿಸಿದೆ.

English summary
Colleges and universities in the US have asked students including those from India who have been inoculated with India’s indigenous Covaxin or the Russian-made Sputnik V.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X