ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಕ್ಲಾಸ್ ಹೊಂದಿರುವ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ರದ್ದು

|
Google Oneindia Kannada News

ವಾಷಿಂಗ್ಟನ್, ಜುಲೈ 7: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆನ್‌ಲೈನ್ ಕ್ಲಾಸ್ ಹೊಂದಿರುವ ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ರದ್ದು ಮಾಡಿದೆ.

ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಎಲ್ಲಾ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ ಹೀಗಾಗಿ ಯಾರೂ ಕೂಡ ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುವುದು ಬೇಡ ಅಲ್ಲಿದ್ದುಕೊಂಡೇ ತರಗತಿಯಲ್ಲಿ ಪಾಲ್ಗೊಳ್ಳಿ ಎಂದು ಹೇಳಿದೆ.

ಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆ

ಕೆಲವು ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿಲ್ಲ, ಅವರು ಶಾಲೆಗಳಿಗೆ ತೆರಳುತ್ತಿದ್ದಾರೆ ಅಂಥವರು ಅಮೆರಿಕದಲ್ಲಿ ಉಳಿದುಕೊಳ್ಳಬಹುದಾಗಿದೆ.

ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯುವವರು ದೇಶ ಬಿಡಿ

ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯುವವರು ದೇಶ ಬಿಡಿ

ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುವವರು ದೇಶವನ್ನು ಬಿಡಿ, ಇಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಅವರ ದೇಶಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಆನ್‌ಲೈನ್ ಕ್ಲಾಸ್ ಇದ್ದವರಿಗೆ ವೀಸಾ ನೀಡುವುದಿಲ್ಲ

ಆನ್‌ಲೈನ್ ಕ್ಲಾಸ್ ಇದ್ದವರಿಗೆ ವೀಸಾ ನೀಡುವುದಿಲ್ಲ

ಆನ್‌ಲೈನ್‌ನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವೀಸಾವನ್ನು ನೀಡಲು ಸಾಧ್ಯವಿಲ್ಲ. ಐಸಿಇ ಮಾಹಿತಿ ಪ್ರಕಾರ ಎಫ್‌-1 ವಿದ್ಯಾರ್ಥಿಗಳು ಶೈಕ್ಷಣಿಕ ಕೋರ್ಸ್‌ವರ್ಕ್ ಹೊಮದಿರುತ್ತಾರೆ. ಎಂ1 ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ವರ್ಕ್ ಅನುಸರಿಸುತ್ತಾರೆ.

ಸೆಮಿಸ್ಟರ್‌ಗಳ ಕುರಿತು ಯಾವುದೇ ಮಾಹಿತಿ ಇಲ್ಲ

ಸೆಮಿಸ್ಟರ್‌ಗಳ ಕುರಿತು ಯಾವುದೇ ಮಾಹಿತಿ ಇಲ್ಲ

ಅಮೆರಿಕದ ಬಹುತೇಕ ಕಾಲೇಜುಗಳಲ್ಲಿ ಸೆಮಿಸ್ಟರ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಲವಾರು ಶಾಲೆಗಳಲ್ಲಿ ನೇರವಾಗಿ ತರಗತಿಗಳನ್ನು ನಡೆಸಲಾಗುತ್ತಿವೆ. ಕೆಲವು ಮಾಹಿತಿಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ನೀಡಲಾಗುತ್ತಿದೆ. ಆದರೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಮಾತ್ರ ಸಂಪೂರ್ಣವಾಗಿ ಆನ್‌ಲೈನ್ ತರಗತಿಯನ್ನು ನಡೆಸಲು ಮುಂದಾಗಿದೆ.

10 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದಾರೆ

10 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದಾರೆ

ಅಮೆರಿಕದಲ್ಲಿ2018-19ನೇ ಸಾಲಿನಲ್ಲಿ 10 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದರು.2018 ರಲ್ಲಿ ವಿದೇಶದಿಂದ 44.7 ಡಾಲರ್‌ನಷ್ಟು ಆದಾಯ ಅಮೆರಿಕಕ್ಕೆ ಬಂದಿದೆ.

ಅಮೆರಿಕದಲ್ಲಿ ಚೀನಾದ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಭಾರತ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಕೆನಡಾದ ವಿದ್ಯಾರ್ಥಿಗಳು ಕೂಡ ಶಿಕ್ಷಣ ಪಡೆಯುತ್ತಿದ್ದಾರೆ.

English summary
The United States said Monday it would not allow foreign students to remain in the country if all of their classes are moved online in the fall because of the coronavirus crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X