ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿದ್ಯಾರ್ಥಿಗಳಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 30: ಕೊರೊನಾವೈರಸ್ ವಿಚಾರದಲ್ಲಿ ಅಮೆರಿಕ ಚೀನಾ ವಿರುದ್ಧ ಹಗೆ ಸಾಧಿಸುತ್ತಿದೆ. ಚೀನಾವೇ ಕೊರೊನಾವೈರಸ್ ಉತ್ಪತ್ತಿಗೆ ಕಾರಣ ಎಂದು ಪದೇ ಪದೇ ಆರೋಪಿಸುತ್ತಿದೆ.

ಇದೀಗ ಚೀನಾ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅಮೆರಿಕ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಿದೆ.

ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪ್ರವೇಶವಿಲ್ಲ, ಚೀನಾವು ಅಮೆರಿಕದಲ್ಲಿ ತನ್ನ ವಿದ್ಯಾರ್ಥಿಗಳನ್ನು ಓದಿಸಿ ಕೊನೆಗೆ ಕೊರೊನಾವೈರಸ್ ನಂತಹ ವೈರಸ್ ಉತ್ಪಾದನೆಗೆ ಅವರ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್

ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಹಾಂಕಾಂಗ್‌ಗೆ ಅಮೆರಿಕ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಚೀನಾ ರೀತಿಯೇ ಅದನ್ನೂ ಕಾಣಲಿದೆ.

ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶ ರದ್ದು

ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶ ರದ್ದು

ಅಮೆರಿಕ ವಿವಿ ಹಾಗೂ ಕಾಲೇಜುಗಳಲ್ಲಿ ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾವೈರಸ್‌ನಿಂದ ಇದುವರೆಗೂ ಒಂದು ಲಕ್ಷ ಮಂದಿ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ತಡೆಹಿಡಿದಿದ್ದಾರೆ.

ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಂಟು

ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಂಟು

ಬೌದ್ಧಿಕ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಚೀನಾವು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಬಳಸಿಕೊಳ್ಳುತ್ತಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಂಟು ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಚೀನಾದ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿ ಅಥವಾ ಒತ್ತಡಕ್ಕೆ ಮಣಿದು ಅವರ ಕೃತ್ಯಗಳಿಗೆ ಸಹಕಾರ ನೀಡುವ ಅಪಾಯವಿದೆ ಎಂದು ಹೇಳಿದೆ.

ಚೀನಾ-ಭಾರತ ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆ ಬೇಕಿಲ್ಲ ಎಂದ ಚೀನಾಚೀನಾ-ಭಾರತ ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆ ಬೇಕಿಲ್ಲ ಎಂದ ಚೀನಾ

ಚೀನಾ-ಅಮೆರಿಕದ ನಡುವೆ ವ್ಯಾಪಾರ ಸಂಘರ್ಷ

ಚೀನಾ-ಅಮೆರಿಕದ ನಡುವೆ ವ್ಯಾಪಾರ ಸಂಘರ್ಷ

ಅಮೆರಿಕ-ಚೀನಾ ನಡುವೆ ವ್ಯಾಪಾರ ಸಂಘರ್ಷ ಹೆಚ್ಚುತ್ತಿದೆ., ಕೊರೊನಾ ವೈರಸ್ ಮೂಲಕ್ಕೆ ಸಂಬಂಧಿಸಿದಂತೆ ವಾಗ್ವಾದ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಸೇನಾ ಚಟುವಟಿಕೆಗಳು, ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಟ್ರಂಪ್ ಅವರು ಈ ಘೋಷಣೆ ಮಾಡಿದ್ದಾರೆ.

ಅಧ್ಯಯನ ವೀಸಾದಡಿ ಅಮೆರಿಕಕ್ಕೆ ಬರಲು ನಿರಾಕರಣೆ

ಅಧ್ಯಯನ ವೀಸಾದಡಿ ಅಮೆರಿಕಕ್ಕೆ ಬರಲು ನಿರಾಕರಣೆ

ಚೀನಾದ ಕೆಲವು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಂಶೋಧನೆ ಮತ್ತು ಅಧ್ಯಯನದ ವೀಸಾದಡಿ ಅಮೆರಿಕಕ್ಕೆ ಬರಲು ಅನುಮತಿ ನಿರಾಕರಿಸಲಾಗುತ್ತಿದೆ. ಅಮೆರಿಕದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

English summary
President Donald Trump announced Friday that Chinese students and scholars that his administration considers to have ties to China's military will not be allowed entry into the U.S. to pursue graduate level research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X